ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೂ ಬೇಡ, ನಿಮ್ಮ ಶ್ರೇಯಾಂಕವೂ ಬೇಡ; ಭಾರತದ ಐಐಟಿಗಳು ಹೀಗೆ ಹೇಳುವುದೇಕೆ!?

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಟೈಮ್ಸ್ ನಡೆಸುವ ಜಗತ್ತಿನ ಉನ್ನತ ಶಿಕ್ಷಣ ವಿಶ್ವವಿದ್ಯಾಲಯಗಳ ಶ್ರೇಯಾಂಕ(ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ)2023ರಲ್ಲಿ ಭಾರತದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(IISc) ಸ್ಥಾನದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಇಡೀ ಶ್ರೇಯಾಂಕದ ಬಗ್ಗೆ ಸಂದೇಹ ಹುಟ್ಟಿಕೊಳ್ಳುತ್ತಿದೆ.

ಜಗತ್ತಿನ 300 ಅಗ್ರಮಾನ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಭಾರತದ ಒಂದೇ ಒಂದು ವಿಶ್ವವಿದ್ಯಾನಿಲಯವು ಸ್ಥಾನ ಪಡೆದುಕೊಂಡಿರುವುದು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಈ ಹಿನ್ನೆಲೆಯಲ್ಲೇ ಹಲವು ವಿಶ್ವವಿದ್ಯಾಲಯಗಳು ಮೂರು ವರ್ಷಗಳಿಂದ ಈ ಶ್ರೇಯಾಂಕ ಪಟ್ಟಿಯನ್ನು ಬಹಿಷ್ಕರಿಸುತ್ತಾ ಬಂದಿವೆ.

ಸೋಮವಾರ ಧಾರವಾಡ ಐಐಐಟಿ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿಸೋಮವಾರ ಧಾರವಾಡ ಐಐಐಟಿ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ

ಕಳೆದ ಆರು ವರ್ಷಗಳಿಂದ ಈ ಪಟ್ಟಿಯಲ್ಲಿ ಗುರುತಿಸಿಕೊಂಡ ಬಂದ ಭಾರತೀಯ ಸಂಸ್ಥೆಗಳ ಸಂಖ್ಯೆಯು ಏರಿಕೆಯಾಗುತ್ತಲೇ ಸಾಗಿದೆ. 2017ರಲ್ಲಿ ಮೊದಲ ಬಾರಿಗೆ ಈ ಪಟ್ಟಿಯಲ್ಲಿ 31 ಸಂಸ್ಥೆಗಳು ಭಾಗವಹಿಸಿದ್ದು, 2017ರಲ್ಲಿ 56 ಸಂಸ್ಥೆಗಳು ಭಾಗವಹಿಸಿದ್ದವು, 2023ರ ಶ್ರೇಯಾಂಕದಲ್ಲಿ ಬರೋಬ್ಬರಿ 75 ಭಾರತೀಯ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ ಈ ಪೈಕಿ ಒಂದೇ ಒಂದು ಸಂಸ್ಥೆಯು ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಟೈಮ್ಸ್ ಶ್ರೇಯಾಂಕದ ಪಾರದರ್ಶಕತೆ ಬಗ್ಗೆ ಅನುಮಾನ

ಟೈಮ್ಸ್ ಶ್ರೇಯಾಂಕದ ಪಾರದರ್ಶಕತೆ ಬಗ್ಗೆ ಅನುಮಾನ

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ಮತ್ತು ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ 2023ರಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿರುವ ಶೈಕ್ಷಣಿಕ ಸಂಸ್ಥೆಗಳು ಕೂಡ ಹಿಂದೆ ಬಿದ್ದಿವೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗಿಂತ ಬೇರೆ ಸಂಸ್ಥೆಗಳು ಮುಂದಿವೆ. ಇದು ಟೈಮ್ಸ್ ಶ್ರೇಯಾಂಕದ ಪಾರದರ್ಶಕತೆಯ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದೆ.

ಲಂಡನ್‌ನಲ್ಲಿ ಇರುವ ಸಮೀಕ್ಷಾ ಸಂಸ್ಥೆಗಳ ಬಗ್ಗೆ ತಿಳಿಯಿರಿ

ಲಂಡನ್‌ನಲ್ಲಿ ಇರುವ ಸಮೀಕ್ಷಾ ಸಂಸ್ಥೆಗಳ ಬಗ್ಗೆ ತಿಳಿಯಿರಿ

ಲಂಡನ್‌ನಲ್ಲಿರುವ ಟೈಮ್ಸ್ ಹೈಯರ್ ಎಜುಕೇಶನ್ (THE) ಮತ್ತು QS (ಕ್ವಾಕ್ವಾರೆಲ್ಲಿ ಸೈಮಂಡ್ಸ್) ಸಂಸ್ಥೆಯಗಳು ಜಗತ್ತಿನ ಎರಡು ಪ್ರಮುಖ ಉನ್ನತ ಶಿಕ್ಷಣ ಸಮೀಕ್ಷಾ ಸಂಸ್ಥೆಗಳಾಗಿವೆ. 2023ರ ಸಾಲಿನಲ್ಲಿ ಶ್ರೇಯಾಂಕಿತ ವಿಶ್ವವಿದ್ಯಾಲಯಗಳಲ್ಲಿ ಭಾರತದಿಂದ ಅತಿಹೆಚ್ಚು ವಿವಿಗಳು ಪ್ರತಿನಿಧಿಸಿದ್ದವು. 75 ವಿವಿಗಳು ಶ್ರೇಯಾಂಕಿತ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದು, ಅತಿಹೆಚ್ಚು ವಿವಿಗಳು ಪ್ರತಿನಿಧಿಸಿದ ಆರನೇ ರಾಷ್ಟ್ರ ಭಾರತವಾಗಿತ್ತು.

ಆರು ಭಾರತೀಯ ವಿಶ್ವವಿದ್ಯಾನಿಲಯಗಳು ಈ ವರ್ಷ ತಮ್ಮ ಶ್ರೇಯಾಂಕದಲ್ಲಿ ಪ್ರತಿನಿಧಿಸಿದ್ದು, 351-400ರ ಶ್ರೇಯಾಂಕದಲ್ಲಿ ಗುರುತಿಸಿಕೊಂಡ ಶೂಲಿನಿ ಯುನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್ ಸೈನ್ಸಸ್ ಸಂಸ್ಥೆಯು ಹೊಸ ಸಂಸ್ಥೆಗಳಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ. ಅದೇ ರೀತಿ 2020ರ ಸಾಲಿನಲ್ಲಿ ಕೊನೆಯಲ್ಲಿ ಕಾಣಿಸಿಕೊಂಡಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿಯು 1001-1200 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಜನಸಂಖ್ಯೆಯೇ ದೇಶದ ಆರ್ಥಿಕತೆಯನ್ನು ತೆರೆಯುವ ಕೀಲಿ

ಜನಸಂಖ್ಯೆಯೇ ದೇಶದ ಆರ್ಥಿಕತೆಯನ್ನು ತೆರೆಯುವ ಕೀಲಿ

"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಭಾರತದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಇವೆಲ್ಲವೂ ಅತ್ಯಗತ್ಯವಾಗಿರುತ್ತದೆ. ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಇರುವ ಯುವ ಜನಸಂಖ್ಯೆಯು ಆರ್ಥಿಕತೆಯ ಶಕ್ತಿಯನ್ನು ಅನ್ಲಾಕ್ ಮಾಡುವ ಕೀಲಿಯಾಗಿದೆ. ಉನ್ನತ ಮಟ್ಟದ ಕೌಶಲ್ಯಗಳಲ್ಲಿ ತರಬೇತಿಯನ್ನು ಸುಧಾರಿಸುವುದು ಮತ್ತು ಹೊಸ ಜ್ಞಾನ ಸೃಷ್ಟಿ ಮತ್ತು ಹೊಸತನವನ್ನು ಸಕ್ರಿಯಗೊಳಿಸುತ್ತದೆ. ಈ ನೀತಿಯು ಯಶಸ್ವಿಯಾಗುವುದರ ಮೂಲಕ ನಿಜವಾದ ಬದಲಾವಣೆ ಶುರುವಾಗುತ್ತದೆ ಎಂದು ಟೈಮ್ಸ್ ಉನ್ನತ ಶಿಕ್ಷಣದ ಮುಖ್ಯಾಧಿಕಾರಿ ಫಿಲ್ ಬ್ಯಾಟಿ ಹೇಳಿದ್ದಾರೆ.

ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದ ಬಗ್ಗೆ ಅನುಮಾನವೇಕೆ?

ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕದ ಬಗ್ಗೆ ಅನುಮಾನವೇಕೆ?

ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc), ಐಐಟಿಗಳು, ಎನ್ಐಟಿಗಳು ಮತ್ತು ವಿಶ್ವವಿದ್ಯಾನಿಲಯಗಳಾದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ, ಜಾಮಿಯಾ ವಿಶ್ವವಿದ್ಯಾಲಯ ಅಥವಾ ದೆಹಲಿ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕವಾಗಿ ಹೆಚ್ಚಿನ ಜಾಗತಿಕ ಮತ್ತು ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಭಾರತೀಯ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿವೆ. ಆದರೆ ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕವು ನೀಡಿರುವ 2000 ಪಟ್ಟಿಯಲ್ಲಿ ಈ ವಿವಿಗಳೇ ಕಾಣಿಸಿಕೊಂಡಿಲ್ಲ.

ಅದೇ ರೀತಿ 2020ರಲ್ಲಿ ದೇಶದ ಏಳು ಐಐಟಿಗಳು ವಿಶ್ವ ವಿಶ್ವವಿದ್ಯಾನಿಲಯ ಶ್ರೇಯಾಂಕದಿಂದ ಹೊರಗುಳಿದಿದ್ದು, ಪಾರದರ್ಶಕತೆ ಮತ್ತು ಶ್ರೇಯಾಂಕಗಳ ನಿಯತಾಂಕಗಳ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿತ್ತು. ಅಂದು ಕೂಡ ಬಾಂಬೆ, ದೆಹಲಿ, ಗುವಾಹಟಿ, ಕಾನ್ಪುರ್, ಖರಗ್‌ಪುರ, ಮದ್ರಾಸ್ ಮತ್ತು ರೂರ್ಕಿ ಐಐಟಿಗಳು ಶ್ರೇಯಾಂಕದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಏಳು ಐಐಟಿಗಳು ಈ ವರ್ಷ ಶ್ರೇಯಾಂಕದಲ್ಲಿ ಭಾಗವಹಿಸುವುದಿಲ್ಲ. ಟೈಮ್ಸ್ ಉನ್ನತ ಶಿಕ್ಷಣವು ತಮ್ಮ ಶ್ರೇಯಾಂಕ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಏನು ಎಂಬುದರ ಬಗ್ಗೆ ಮನವರಿಕೆ ಮಾಡಿ ಕೊಡಬೇಕು. ತದನಂತದಲ್ಲಿ ಸಾಧ್ಯವಾದರೆ ಮುಂದಿನ ವರ್ಷ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ" ಈ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿದ್ದವು.

ಅಗ್ರಸ್ಥಾನವನ್ನು ಉಳಿಸಿಕೊಂಡ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ

ಅಗ್ರಸ್ಥಾನವನ್ನು ಉಳಿಸಿಕೊಂಡ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ

ಟೈಮ್ಸ್ ಶ್ರೇಯಾಂಕ ಪಟ್ಟಿಯಲ್ಲಿ IIT-ಗುವಾಹಟಿ ಈ ವರ್ಷ ಕಾಣಿಸಿಕೊಂಡಿದೆ. ಈ ವರ್ಷದ THE ಶ್ರೇಯಾಂಕದಲ್ಲಿ, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಾದ IIT-ಇಂದೋರ್, JNU ಮತ್ತು AMU ಸಂಸ್ಥೆಗಳು NIRF ಶ್ರೇಯಾಂಕದಲ್ಲಿ ಗಮನಾರ್ಹವಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿವೆ. ಅದೇ ರೀತಿ ಜಾಗತಿಕ ಮಟ್ಟದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸತತ ಏಳನೇ ವರ್ಷವೂ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ವರ್ಷ ಒಟ್ಟು 104 ದೇಶಗಳ 1,799 ವಿಶ್ವವಿದ್ಯಾನಿಲಯಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದು, ಕಳೆದ ವರ್ಷಕ್ಕಿಂತ 137 ಹೆಚ್ಚು ವಿವಿಗಳು ಪ್ರತಿನಿಧಿಸಿದ್ದವು.

ಕಳೆದ 2018ರಲ್ಲಿ ಯುನೈಟೆಡ್ ಸ್ಟೇಟ್ಸ್ ನ 43 ವಿಶ್ವವಿದ್ಯಾಲಯಗಳು ಟಾಪ್ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. ಅಲ್ಲಿಂದ ಇದುವರೆಗೆ ಈ ಸಂಖ್ಯೆಯು ಇಳಿಮುಖವಾಗುತ್ತಿದ್ದು, 2023ನೇ ಸಾಲಿನಲ್ಲಿ 34 ಯುಎಸ್ ವಿವಿಗಳು ಮಾತ್ರ ಟಾಪ್ 100 ಪಟ್ಟಿಯಲ್ಲಿ ಗುರುತಿಸಿಕೊಂಡಿವೆ.

English summary
Why Several IITs boycott Times Higher Education World University Rankings; IISc only entry in top 300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X