ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕತಜ್ಞ ಸುಬ್ರಮಣಿಯನ್ ಸ್ವಾಮಿ ಹಾಗೆ ಟ್ವೀಟ್ ಮಾಡಿದ್ದೇಕೆ?

|
Google Oneindia Kannada News

ನವದೆಹಲಿ, ಮೇ 29 : ಅನಾರೋಗ್ಯದ ಕಾರಣದಿಂದಾಗಿ ನನ್ನ ಮೇಲೆ ಯಾವುದೇ ಜವಾಬ್ದಾರಿ ಹೊರಿಸಬೇಡಿ ಎಂದು ಅರುಣ್ ಜೇಟ್ಲಿ ಅವರು ವಿನಮ್ರತೆಯಿಂದ ಕೋರಿರುವ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ಸಂಪುಟದಲ್ಲಿ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳಲು ಯಾರು ಸಮರ್ಥರು ಎಂಬ ಬಗ್ಗೆ ಭಾರೀ ಮಾತುಕತೆ ನಡೆಯುತ್ತಿದೆ.

ಕಳೆದ ಐದು ವರ್ಷಗಳಲ್ಲಿ ನನ್ನ ಮೇಲೆ ಮಹತ್ತರ ಜವಾಬ್ದಾರಿಯನ್ನು ಹೊರಿಸಿದ್ದೀರಿ. ಆದರೆ, ನನಗೆ ಆರೋಗ್ಯ ಕೈಕೊಡುತ್ತಿರುವುದರಿಂದ ಮತ್ತು ಚಿಕಿತ್ಸೆ ಪಡೆಯಬೇಕಿರುವುದರಿಂದ ನನಗೆ ಸಂಪುಟದಲ್ಲಿ ಸದ್ಯಕ್ಕೆ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಜೇಟ್ಲಿ ಪತ್ರ ಬರೆದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಒಗಟಿನಲ್ಲಿರುವ 'ಶಕುನಿ' ಯಾರು? ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಒಗಟಿನಲ್ಲಿರುವ 'ಶಕುನಿ' ಯಾರು?

ಈ ಸಮಯದಲ್ಲಿ, ಕೇಸುಗಳ ಮೇಲೆ ಕೇಸು ಹಾಕಿ ವಿರೋಧಿಗಳನ್ನು, ಅದರಲ್ಲಿಯೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಕಂಗೆಡಿಸಿರುವ, ಆರ್ಥಿಕ ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ವ್ಯಂಗ್ಯ ಮಿಶ್ರಿತವಾಗಿ ಮಾಡಿರುವ ಒಂದು ಟ್ವೀಟ್ ಭಾರೀ ಕುತೂಹಲ ಕೆರಳಿಸಿದೆ.

"ನನ್ನನ್ನು ನಾನು ಚೌಕಿದಾರ್ ಎಂದು ಕರೆದುಕೊಳ್ಳುವ ಬದಲು 'ಮಜದೂರ್' (ಕಾರ್ಮಿಕ) ಎಂದು ಕರೆದುಕೊಳ್ಳಬೇಕು. ಏಕೆಂದರೆ, ಬಿಜೆಪಿ ಪರವಾಗಿ ಎಲ್ಲ ಕೇಸುಗಳನ್ನು ಫೈಟ್ ಮಾಡುತ್ತ ಪಕ್ಷಕ್ಕಾಗಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದೇನೆ. ಆದರೆ, ನನಗೇ ಐಷಾರಾಮಿ ಅಪಾರ್ಟ್ಮೆಂಟ್ ಸಿಗುತ್ತಿಲ್ಲ. ಮಹಾಭಾರತ ಯುದ್ಧದ ನಂತರ ಕೃಷ್ಣನೇ ಅರ್ಜುನನಿಗೆ ಹಾಗೇಕೆಂದು ವಿವರಿಸಿದ್ದ" ಎಂದು ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

Why did Subramanian Swamy tweet like this?

ಒಳಾರ್ಥ ಇರುವ ಸುಬ್ರಮಣಿಯನ್ ಸ್ವಾಮಿ ಅವರ ಈ ಟ್ವೀಟ್ ಮಾರ್ಮಿಕವಾಗಿದೆ. ತಮ್ಮನ್ನ ತಾವು ಕಾರ್ಮಿಕ ಎಂದು ಕರೆದುಕೊಂಡು ವ್ಯಂಗ್ಯವಾಡಿದ್ದಾರೆ ಅಲ್ಲದೆ, ಹಣಕಾಸು ಖಾತೆಯ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿರುವ ಸ್ವಾಮಿ ಅವರು ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರಕ್ಕೆ ಸಂದೇಶವನ್ನೂ ಸಾರಿದ್ದಾರೆ. ಅವರ ಈ ಟ್ವೀಟಿಗೆ ಸಾಕಷ್ಟು ಪ್ರತಿಕ್ರಿಯೆಗಳಉ ಹರಿದುಬರುತ್ತಿವೆ.

ಕೋರ್ಟ್‌ನಲ್ಲಿ ಸಹಾಯಬೇಕಾ? ನಾನಿದ್ದೇನೆ: ಗಂಭೀರ್‌ಗೆ ಸುಬ್ರಮಣಿಯನ್ ಸ್ವಾಮಿ ಅಭಯ ಕೋರ್ಟ್‌ನಲ್ಲಿ ಸಹಾಯಬೇಕಾ? ನಾನಿದ್ದೇನೆ: ಗಂಭೀರ್‌ಗೆ ಸುಬ್ರಮಣಿಯನ್ ಸ್ವಾಮಿ ಅಭಯ

ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ, ಕಳೆದ ಫೆಬ್ರವರಿಯಲ್ಲಿ ರೈಲ್ವೆ ಖಾತೆ ನಿಭಾಯಿಸುತ್ತಿದ್ದ ಪಿಯೂಶ್ ಗೋಯಲ್ ಅವರು ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದ್ದರು. ಸಾಕಷ್ಟು ಮೆಚ್ಚುಗೆಯನ್ನೂ ಗಳಿಸಿದ್ದರು. ಆದರೆ, ಸುಬ್ರಮಣಿಯನ್ ಸ್ವಾಮಿಯಂಥ ಅರ್ಥಶಾಸ್ತ್ರಜ್ಞರೇ ಇರುವಾಗ ಪಿಯೂಶ್ ಗೋಯಲ್ ಅವರಿಗೇಕೆ ಆ ಜವಾಬ್ದಾರಿ ನಿಭಾಯಿಸಬೇಕು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

47 ವರ್ಷದ ಬಳಿಕ ಬಡ್ಡಿ ಸಮೇತ ಸಂಬಳ ಪಡೆದ ಸುಬ್ರಮಣಿಯನ್ ಸ್ವಾಮಿ! 47 ವರ್ಷದ ಬಳಿಕ ಬಡ್ಡಿ ಸಮೇತ ಸಂಬಳ ಪಡೆದ ಸುಬ್ರಮಣಿಯನ್ ಸ್ವಾಮಿ!

ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿಗೇ ನರೇಂದ್ರ ಮೋದಿಯವರು ಈ ಜವಾಬ್ದಾರಿ ಹೊರಿಸಬೇಕು ಎಂಬುದು ಅವರ ಅಭಿಮಾನಿಗಳ ಇಂಗಿತ. ನರೇಂದ್ರ ಮೋದಿ ಸರಕಾರಕ್ಕೆ ನೀವೇ ಟ್ರಂಪ್ ಕಾರ್ಡ್ ಆಗಿದ್ದೀರಿ. ಕೇಂದ್ರ ಹಣಕಾಸು ಖಾತೆ ನಿಭಾಯಿಸಲು ನಿಮಗಿಂತ ಸೂಕ್ತವಾದ ವ್ಯಕ್ತಿ ಇನ್ನಾರಿದ್ದಾರೆ ಎಂದು ಸ್ವಾಮಿಯವರನ್ನು ಮೆಚ್ಚಿಕೊಳ್ಳುವವರು ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮನದಲ್ಲಿ ಇನ್ನೇನಿದೆಯೋ? ತಮಗೆ ಹೇಗಿದ್ದರೂ, ಎಷ್ಟೇ ಇಷ್ಟಪಟ್ಟರೂ, ಯಾರೇ ಶಿಫಾರಸು ಮಾಡಿದರೂ ಹಣಕಾಸು ಖಾತೆ ಸಿಗುವುದಿಲ್ಲ ಎಂಬ ಹತಾಶೆಯಿಂದ ಸುಬ್ರಮಣಿಯನ್ ಸ್ವಾಮಿ ಅವರು ಈ ಟ್ವೀಟ್ ಮಾಡಿದ್ದಾರಾ?

English summary
Why did Subramanian Swamy tweet like this? Is there any hidden meaning and message in this tweet? He has tweets that, instead of calling him chowkidar, he should call himself mazdoor, as he has been constructing building, but not getting luxurious apartment for himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X