ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಪಡೆಯಿಂದ ಮಿಗ್ -21 ಸ್ಕ್ವಾಡ್ರನ್ ಸ್ವೋರ್ಡ್ ಆರ್ಮ್ಸ್ ನಿವೃತ್ತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದಾಗ ಈ ಕಾರ್ಯಾಚರಣೆ ಭಾಗವಾಗಿದ್ದ ಶ್ರೀನಗರ ಮೂಲದ ಮಿಗ್ -21 ಸ್ಕ್ವಾಡ್ರನ್ 'ಸ್ವೋರ್ಡ್ ಆರ್ಮ್ಸ್' ಅನ್ನು ಭಾರತೀಯ ವಾಯುಪಡೆ ನಿವೃತ್ತಿಗೊಳಿಸಲು ಅಣಿ ಆಗಿರುವುದಾಗಿ ಸೋಮವಾರ ತಿಳಿಸಿದೆ.
ಕಳೆದ 2019ರ ಫೆಬ್ರವರಿ ಬಾಲಾಕೋಟ್ ದಾಳಿಯ ಒಂದು ದಿನದ ನಂತರ ಭಾರತೀಯ ಸೇನೆಯು ಕಾರ್ಯಾಚರಣೆ ಶುರು ಮಾಡಿತ್ತು. ಅಂದು ಕಾರ್ಯಾಚರಣೆ ಭಾಗವಾಗಿದ್ದ 'ಸ್ವೋರ್ಡ್ ಆರ್ಮ್ಸ್' ವಯಸ್ಸಾದ MiG-21 ಫೈಟರ್ ಜೆಟ್‌ಗಳ ಉಳಿದ ನಾಲ್ಕು ಸ್ಕ್ವಾಡ್ರನ್‌ಗಳಲ್ಲಿ ಒಂದಾಗಿದೆ. " ಈ ಯೋಜನೆಯ ಪ್ರಕಾರ" ನಂ. 51 ಸ್ಕ್ವಾಡ್ರನ್ ಸೆಪ್ಟೆಂಬರ್ ಅಂತ್ಯದ ವೇಳೆಗೆ ನಿವೃತ್ತಿ ಹೊಂದಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳುಬೀದರ್: ಮೊದಲ ಬಾರಿಗೆ ಯುದ್ಧ ವಿಮಾನ ಹಾರಿಸಿದ ತಂದೆ- ಮಗಳು

ಮಿಗ್ -21ರ ಉಳಿದ ಮೂರು ಸ್ಕ್ವಾಡ್ರನ್‌ಗಳನ್ನು 2025ರ ವೇಳೆಗೆ ಹಂತ ಹಂತವಾಗಿ ತೆಗೆದು ಹಾಕಲಾಗುವುದು ಎಂದು ಹೇಳಲಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳ ನಂತರ 2019ರ ಫೆಬ್ರವರಿ 26ರಂದು ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಐಎಎಫ್ ಫೈಟರ್ ಜೆಟ್‌ಗಳು ಬಾಂಬ್ ದಾಳಿ ನಡೆಸಿದ್ದವು. ಫೆಬ್ರವರಿ 27 ರಂದು ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಲು ಪ್ರಯತ್ನಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.

Why Abhinandan Varthamans MiG-21 squadron set to retire by September end; here read the reason

ವೀರ ಚಕ್ರ ಪದಕ ಪಡೆದ ಅಭಿನಂದನ್ ವರ್ಧಮಾನ್:
ಈಗ ಗ್ರೂಪ್ ಕ್ಯಾಪ್ಟನ್ ಆಗಿರುವ ಅಭಿನಂದನ್ ವರ್ಧಮಾನ್ ವೈರಿಗಳು ಪ್ರಾರಂಭಿಸಿದ ವೈಮಾನಿಕ ದಾಳಿಯನ್ನು ತಡೆಯಲು ವೈಮಾನಿಕ ದಾಳಿ ನಡೆಸಿದ್ದು, ಈ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಜೆಟ್‌ಗಳೊಂದಿಗೆ ಡಾಗ್‌ಫೈಟ್‌ನಲ್ಲಿ ತೊಡಗಿದ್ದರು. ತಮ್ಮ MiG-21 ಬೈಸನ್ ಜೆಟ್ ಅನ್ನು ಹೊಡೆದುರುಳಿಸುವುದಕ್ಕೂ ಮೊದಲು, ವರ್ಧಮಾನ್ ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. 2019ರ ಸ್ವಾತಂತ್ರ್ಯ ದಿನದಂದು ಅವರಿಗೆ ಭಾರತದ ಶೌರ್ಯ ಪದಕವಾದ ವೀರ ಚಕ್ರವನ್ನು ನೀಡಲಾಯಿತು. ಈ MiG-21 ಜೆಟ್‌ಗಳನ್ನು ನಾಲ್ಕು ದಶಕಗಳ ಹಿಂದೆ ಭಾರತೀಯ ವಾಯು ಪಡೆ(IAF) ಗೆ ಸೇರಿಸಲಾಯಿತು.

ಪೈಲಟ್‌ಗಳ ಸಾವಿಗೆ ಕಾರಣವಾದ ಫೈಟರ್ ಜೆಟ್‌ಗಳು:
ಕಳೆದ ಹಲವಾರು ವರ್ಷಗಳಿಂದ ಸೋವಿಯತ್ ಯುಗದ ರಷ್ಯಾದ ಫೈಟರ್ ಜೆಟ್‌ಗಳು ಪೈಲಟ್‌ಗಳ ಸಾವಿಗೆ ಕಾರಣವಾದ ಅನೇಕ ಅಪಘಾತಗಳಿಗೆ ಸುದ್ದಿಯಾಗಿದೆ. ಅದಾಗ್ಯೂ, "ಐಎಎಫ್ ವಿಮಾನವು ವಾಯುಗಾಮಿಯಾದಾಗ ಸಮಯದಲ್ಲಿ ಅವು ಸಂಪೂರ್ಣವಾಗಿ ಸೇವೆ ಸಲ್ಲಿಸಬಲ್ಲದು" ಎಂದು ಹೇಳಲಾಗುತ್ತಿದೆ. ಹಳೆಯದ್ದು ಎಂಬುದು ಒಂದು ಅಂಶವಾಗಿದ್ದರೆ, ಆಧುನಿಕ ವಿಮಾನವೂ ಸಹ ಅಪಘಾತಕ್ಕೀಡಾಗಬಹುದು ಎಂಬ ವರದಿಗಳಿವೆ. ಹವಾಮಾನ ಸೇರಿದಂತೆ ಅನೇಕ ಅಂಶಗಳಿಂದಾಗಿ ಅಪಘಾತ ಸಂಭವಿಸಬಹುದು" ಎಂದು ಮೂಲವೊಂದು ತಿಳಿಸಿದೆ.

ಸ್ವೋರ್ಡ್ ಆರ್ಮ್ಸ್:
ನಿವೃತ್ತಿ ಹೊಂದುತ್ತಿರುವ ಶ್ರೀನಗರ ಮೂಲದ ನಂ. 51 ಸ್ಕ್ವಾಡ್ರನ್ ಅನ್ನು 'ಸ್ವೋರ್ಡ್ ಆರ್ಮ್ಸ್' ಎಂದೂ ಕರೆಯುತ್ತಾರೆ. ಇದು "ಯೋಜನೆಯ ಪ್ರಕಾರ ನಡೆಯುತ್ತಿದೆ" ಎಂದು ಅವರು ಹೇಳಿದರು. ಹೊಸ ಫ್ಲೀಟ್‌ಗಳು ಸಹ ಕಾರ್ಯನಿರ್ವಹಿಸುತ್ತಿವೆ. ನಂ. 51 ಸ್ಕ್ವಾಡ್ರನ್ ಅಥವಾ 'ಸ್ವೋರ್ಡ್ ಆರ್ಮ್ಸ್' ಐಎಎಫ್‌ನ ಅಲಂಕೃತ ಸ್ಕ್ವಾಡ್ರನ್‌ಗಳಲ್ಲಿ ಒಂದಾಗಿದೆ. ಇದು 1999 ರಲ್ಲಿ ಆಪ್ ಸಫೇದ್ ಸಾಗರ್ (ಕಾರ್ಗಿಲ್ ಸಂಘರ್ಷ) ಸಮಯದಲ್ಲಿ ಭಾಗವಹಿಸಿತು.
"ಇದರ ಪರಿಣಾಮಕಾರಿ ಕೊಡುಗೆಗಾಗಿ ಒಂದು ವಾಯು ಸೇನಾ ಪದಕ ಮತ್ತು ಮೂರು ಉಲ್ಲೇಖ-ರವಾನೆಗಳನ್ನು ನೀಡಲಾಯಿತು. ಆಪರೇಷನ್ ಪರಾಕ್ರಮ್ ಸಮಯದಲ್ಲಿ, ಸ್ಕ್ವಾಡ್ರನ್‌ಗೆ ಕಾಶ್ಮೀರ ಕಣಿವೆಯ ವಾಯು ರಕ್ಷಣಾ ಕಾರ್ಯವನ್ನು ವಹಿಸಲಾಯಿತು" ಎಂದು ಭಾರತ್ ರಕ್ಷಕ್ ವೆಬ್‌ಸೈಟ್ ತಿಳಿಸಿದೆ.

English summary
Why Abhinandan Varthaman's MiG-21 squadron set to retire by September end; here read the reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X