Get Updates
Get notified of breaking news, exclusive insights, and must-see stories!

ಅಮೆರಿಕಾದಲ್ಲಿ ಸಾಧನೆಗೈದ ಭಾರತೀಯ ವೀಣಾ ರೆಡ್ಡಿ ಬಗ್ಗೆ ನಿಮಗೆಷ್ಟು ಗೊತ್ತು?

ಅಮರಾವತಿ, ಆಗಸ್ಟ್ 6: ಭಾರತೀಯ ಮೂಲದ ವೀಣಾ ರೆಡ್ಡಿ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವೆಲಪ್ ಮೆಂಟ್(USAID) ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವೀಣಾ ರೆಡ್ಡಿ ಸಾಧನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಮೂಲದವರು ಅಮೆರಿಕಾದ ರಾಯಭಾರಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.

ಹಿರಿಯ ವಿದೇಶಾಂಗ ಸೇವೆಗಳ ಅಧಿಕಾರಿ ಆಗಿರುವ ವೀಣಾ ರೆಡ್ಡಿ, ಭಾರತ ಮತ್ತು ಭೂತಾನ್ ನಲ್ಲಿ ಸಂಸ್ಥೆಯ ಚಟುವಟಿಕೆಗಳ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಯುಎಸ್ ರಾಯಭಾರಿ ಕಚೇರಿಯು ತಿಳಿಸಿದೆ. ಉಭಯ ರಾಷ್ಟ್ರಗಳೊಂದಿಗೆ ಸರ್ಕಾರ ಮತ್ತು ಸಾರ್ವಜನಿಕರೊಂದಿಗೆ ಸಂಸ್ಥೆಯು ಏಪ್ಪತ್ತು ವರ್ಷಗಳಿಂದ ಬಾಂಧವ್ಯ ಬೆಳೆಸಿಕೊಂಡು ಬಂದಿದೆ.

ಭಾರತದಲ್ಲಿ ಈ ಕಾರ್ಯಾಚರಣೆಯ ಹೊಣೆಯನ್ನು ಮತ್ತೊಬ್ಬ ಭಾರತೀಯರೇ ವಹಿಸಿಕೊಂಡಿರುವುದು ಹೆಮ್ಮೆ ಮತ್ತು ಮೆಚ್ಚುವಂತಹ ಸಂಗತಿಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಆಗಿರುವ ಅತುಲ್ ಕಶ್ಯಪ್ ಹೇಳಿದ್ದಾರೆ. ಇದು ಅಮೆರಿಕಾದಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಸಾಧನೆಯ ಸೂಚ್ಯಂಕವಾಗಿದೆ ಎಂದಿದ್ದಾರೆ.

Who is Veena Reddy? First Indian-American Woman to Lead USAID in India

ರಾಯಭಾರಿ ಅಧಿಕಾರಿಯಾಗಿ ವೀಣಾ ರೆಡ್ಡಿ ಅನುಭವ:

ಆಂಧ್ರ ಪ್ರದೇಶ ಮೂಲದ ವೀಣಾ ರೆಡ್ಡಿ ವಕೀಲರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಅಲ್ಲಿಂದ ಮುಂದೆ ಅಮೆರಿಕಾದ ಅಭಿವೃದ್ಧಿ ಮತ್ತು ರಾಯಭಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಮತ್ತು ಭೂತಾನ್ ಪ್ರದೇಶಗಳಲ್ಲಿ ಯುಎಸ್ಎಐಡಿ ಕಾರ್ಯಚಟುವಟಿಕೆಗಳ ಹೊಣೆಯನ್ನು ಹೊತ್ತುಕೊಂಡ ಮೊದಲ ಭಾರತೀಯ ಅಧಿಕಾರಿ ಎನಿಸಿದ್ದಾರೆ.

ಯುಎಸ್ ವಿದೇಶಾಂಗ ಸೇವೆ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಕಾಂಬೋಡಿಯಾ ಮತ್ತು ಹಟಿಯಾದಲ್ಲಿ ಯುಎಸ್ಎಐಡಿ ಮಿಷನ್ ನಿರ್ದೇಶಕರಾಗಿ ವೀಣಾ ರೆಡ್ಡಿ ಕೆಲಸ ಮಾಡಿದ್ದಾರೆ. ಏಷಿಯಾ ಮತ್ತು ಮಧ್ಯಪ್ರಾಚ್ಯದ ಯುಎಸ್ಎಐಡಿ ಕಾರ್ಯಯೋಜನೆಗೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಸಹಾಯಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2017ರ ಆಗಸ್ಟ್ ತಿಂಗಳವರೆಗೂ ಕಾಂಬೋಡಿಯಾದ ಮಿಷನ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಟಿಯಾದಲ್ಲಿ ಭೂಕಂಪನ ಸಂಭವಿಸಿದ ಸಂದರ್ಭದಲ್ಲಿ ಸುರಕ್ಷತೆ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ವೀಣಾ ರೆಡ್ಡಿ ವಿದ್ಯಾಭ್ಯಾಸ:

ಸರ್ಕಾರಿ ಅಧಿಕಾರಿಯಾಗಿ ಸೇವೆ ಆರಂಭಿಸುವುದಕ್ಕೂ ಮೊದಲು ವೀಣಾ ರೆಡ್ಡಿ ನ್ಯೂಯಾರ್ಕ್, ಲಂಡನ್ ಮತ್ತು ಲಾಸ್ ಎಂಜಲ್ಸ್ ನಲ್ಲಿ ಕಾರ್ಪೋರೇಟ್ ಅಟಾರ್ನಿಯಾಗಿ ಕೆಲಸ ಮಾಡಿದ್ದಾರೆ. ಕೊಲಂಬಿಯಾ ಯೂನಿವರ್ಟಿಸಿ ಸ್ಕೂಲ್ ಆಫ್ ಲಾದಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ವೀಣಾ ರೆಡ್ಡಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಬಿಎ ಮತ್ತು ಎಂಎ ಪದವಿ ಪಡೆದುಕೊಂಡಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ಕ್ಯಾಲಿಪೋರ್ನಿಯಾ ಬಾರ್ ಅಸೋಸಿಯೇಷನ್ ಸದಸ್ಯರಾಗಿದ್ದಾರೆ.

ವೀಣಾ ರೆಡ್ಡಿ ಪ್ರತಿಕ್ರಿಯೆ:

ಕಳೆದ 70 ವರ್ಷಗಳಿಂದ ಸಮೃದ್ಧ ಮತ್ತು ಶಾಂತಿಯುತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರ ಮತ್ತು ಜನರ ಜೊತೆಗೆ ಯುಎಸ್ಎಐಡಿ ಬಾಂಧವ್ಯ ಬೆಸೆದುಕೊಂಡು ಬಂದಿದೆ. ಇಷ್ಟು ದಿನಗಳವರೆಗೂ ನಮ್ಮೊಂದಿಗನ ಸಂಬಂಧ ಬೆಳೆದುಕೊಂಡು ಬಂದಿದೆ. ಈ ನಂಟನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಹಾಗೂ ಮತ್ತಷ್ಟು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ," ಎಂದು ಯುಎಸ್ಎಐಡಿ ಮಿಷನ್ ನಿರ್ದೇಶಕರಾದ ವೀಣಾ ರೆಡ್ಡಿ ತಿಳಿಸಿದ್ದಾರೆ.

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ಆರ್ಥಿಕ ಮತ್ತು ಮೂಲಭೂತ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಯುಎಸ್ ಮತ್ತು ಭಾರತದ ನಡುವಿನ ಸಹಭಾಗಿತ್ವದಿಂದ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ನಾವು ಜೊತೆಯಾಗಿ ಮುಂದಡಿ ಇಡುತ್ತೇವೆ ಎಂಬ ಭರವಸೆಯಿದೆ," ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+