ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?

ಬೆಂಗಳೂರು, ಸೆ. 21 : ಭಾರತದಲ್ಲಿ ಮಹಿಳೆಯರು ಎಷ್ಟೇ ಎಚ್ಚರಿಕೆಯಿಂದಿದ್ದರೂ, ಕಾನೂನನ್ನು ಎಷ್ಟೇ ಬಿಗಿಗೊಳಿಸಿದರೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಏತಕ್ಕೆ? ದೇಶದಾದ್ಯಂತ ಯುವಜನತೆಯಿಂದ ಪ್ರತಿಭಟನೆಗಳು, ಜಾಗೃತಿ ಆಂದೋಲನಗಳು ನಿರಂತರವಾಗಿ ನಡೆಯುತ್ತಿದ್ದರೂ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿರುವ ಅತ್ಯಾಚಾರಕ್ಕೆ ಕಾರಣ ಯಾರು?

"ಇದಕ್ಕೆ ಕಾರಣ ನಾವೇ! ಅಂದರೆ ಮಹಿಳೆಯರೆ" ಎಂದು ಮಹಿಳೆಯರೇ ಸಾರಿರುವ ವಿಡಂಬನಾತ್ಮಕ ವಿಡಿಯೋ ಯೂಟ್ಯೂಬ್ ನಲ್ಲಿ ಭಾರೀ ಸಂಚಲನವೆಬ್ಬಿಸಿದೆ. ದೆಹಲಿಯಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ನಂತರವೂ, ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನಂತರವೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮುಂಬೈನಲ್ಲಿ ಕೂಡ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯುವತಿ ಮೇಲೆ ಲೈಂಗಿಕ ಹಲ್ಲೆ ಮಾಡಲಾಗಿದೆ.

ಹಾಸ್ಯ ಕಲಾವಿದರುಗಳಾದ ತನ್ಮಯ್ ಭಟ್, ರೋಹನ್ ಜೋಶಿ, ಆಶಿಶ್ ಶಕ್ಯ ಮತ್ತು ಗುರಸಿಮ್ರನ್ ಕುಂಭ ಸೇರಿಕೊಂಡು ಈ ವಿಡಂಬನಾತ್ಮಕ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿನ ಸಂದೇಶವನ್ನು ನಟಿ ಕಲ್ಕಿ ಕೋಚ್ಲಿನ್ ಮತ್ತು ವಿಜೆ ಜೂಹಿ ಪಾಂಡೆ ವಿಶಿಷ್ಟ ನಿರೂಪಣೆಯ ಮುಖಾಂತರ ಅಭಿವ್ಯಕ್ತಪಡಿಸಿದ್ದಾರೆ. ಅದರ ವಿವರಗಳು ಮುಂದಿನಂತಿವೆ ನೋಡಿರಿ.

ರೇಪಾಯಿತಾ? ಅದು ನಿಮ್ಮ ತಪ್ಪು!

ರೇಪಾಯಿತಾ? ಅದು ನಿಮ್ಮ ತಪ್ಪು!

ರೇಪ್ ಆದರೆ ಪುರುಷರನ್ನೇಕೆ ದೂಷಿಸುತ್ತೀರಿ? ಅದು ಮಹಿಳೆಯರಾದ ನಿಮ್ಮ ತಪ್ಪು. ನೀವು ಎಂಥ ಉಡುಗೆ ಧರಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವೈಜ್ಞಾನಿಕ ಕಾರಣದ ಪ್ರಕಾರ, ಮಹಿಳೆಯರು ಪ್ರಚೋದನಾತ್ಮಕ ಚಿಕ್ಕ ಸ್ಕರ್ಟ್, ಮಿನಿ ಹಾಕುವುದರಿಂದ ಅತ್ಯಾಚಾರ ಆಗುತ್ತದೆ. ಯಾಕಂತೀರಾ? ಪುರುಷರಿಗೆ ಕಣ್ಣುಗಳಿವೆ!

ಅತ್ಯಾಚಾರವಾಗಲೇಬಾರದು ಅಂತಿದ್ದರೆ

ಅತ್ಯಾಚಾರವಾಗಲೇಬಾರದು ಅಂತಿದ್ದರೆ

ಮಹಿಳೆಯರ ಮೇಲೆ ಅತ್ಯಾಚಾರ ಆಗಲೇಬಾರದು ಅಂತಿದ್ದರೆ ಭೂಮಿಯ ಮೇಲೆ ಬರೀ ಮಹಿಳೆಯರೇ ಇರಬೇಕು ಅಥವಾ ಮಹಿಳೆಯರು ಇರಲೇಬಾರದು. ಆಗ ರೇಪ್ ಹೇಗೆ ಆಗುತ್ತದೆ ಹೇಳಿ? ಎಲ್ಲರೂ ಅತ್ಯಾಚಾರ ಆಗುತ್ತಿರುವುದಕ್ಕೆ ಪುರುಷರೇ ಕಾರಣ ಎಂದು ಹೇಳುತ್ತಿದ್ದಾರೆ. ಅದು ಹೇಗೆ? ಈ ಪುರುಷರಿಗೆ ಜನ್ಮ ನೀಡಿದ್ದು ಮಹಿಳೆಯರೇ ತಾನೆ? ಹಾಗಿದ್ದರೆ ಮಹಿಳೆಯರೇ ಅತ್ಯಾಚಾರಕ್ಕೆ ಕಾರಣರು! ಅಲ್ಲವೆ?

ಅಣ್ಣಾ ಎಂದು ಕೂಗಿಬಿಟ್ಟರೆ ಸಾಕು...

ಅಣ್ಣಾ ಎಂದು ಕೂಗಿಬಿಟ್ಟರೆ ಸಾಕು...

ಆ ಸ್ವಯಂಘೋಷಿತ ದೇವಮಾನವ ಹೇಳಿದ್ದು ನಿಜಕ್ಕೂ ನಿಜ. ರೇಪ್ ಮಾಡುವವರನ್ನು 'ಭೈಯಾ' ಅಂತ ಸಂಭೋದಿಸಿದರೆ ಅತ್ಯಾಚಾರ ಆಗುವುದೇ ಇಲ್ಲ. ಅತ್ಯಾಚಾರ ಮಾಡಲು ಪುರುಷರು ಮುಗಿಬಿದ್ದರೆನ್ನಿ, ಅವರನ್ನು 'ಅಣ್ಣಾ' ಎಂದು ಸಂಬೋಧಿಸಿಬಿಟ್ಟರೆ ಸಾಕು, ರೇಪ್ ಕ್ಯಾನ್ಸಲ್!

ಮಹಿಳೆಯರು ಕೆಲಸ ಯಾಕೆ ಮಾಡಬೇಕು

ಮಹಿಳೆಯರು ಕೆಲಸ ಯಾಕೆ ಮಾಡಬೇಕು

ಅಲ್ರೀ, ಮಹಿಳೆಯರು ಸ್ವತಂತ್ರವಾಗಿರಬೇಕೆಂದು ಮನೆಯಿಂದ ಹೊರಗೆ ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಮೂಲಕ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಷ್ಟಕ್ಕೂ ಮಹಿಳೆಯರು ಕೆಲಸವಾದರೂ ಏಕೆ ಮಾಡಬೇಕು? ಮನೆಯಲ್ಲೇ ಗಂಡನ ಜೊತೆ ಇದ್ದುಬಿಟ್ಟರೆ ಸಾಕಲ್ಲ? ಅವರು ನಿಮ್ಮ ಗಂಡನೇ ಆಗಿದ್ದರಿಂದ ಅವರು ಏನೇ ಮಾಡಿದರೂ ರೇಪ್ ಆಗುವುದೇ ಇಲ್ಲ!

ಅತ್ಯಾಚಾರ ನಡೆಯೋದಕ್ಕೆ ಇವೂ ಕಾರಣ!

ಅತ್ಯಾಚಾರ ನಡೆಯೋದಕ್ಕೆ ಇವೂ ಕಾರಣ!

ಚೌಮೀನ್ ತಿನ್ನುವುದರಿಂದ ಅತ್ಯಾಚಾರಗಳಾತ್ತಿವೆಯಂತೆ! ಚೌಮೀನ್ ಎಲ್ಲಿ ತಯಾರಾಗತ್ತೆ? ಅಡುಗೆಮನೆಯಲ್ಲಿ. ಅಡುಗೆಮನೆಯಲ್ಲಿ ಯಾರಿರ್ತಾರೆ? ಮಹಿಳೆಯರು! ಅಲ್ಲದೆ, ಮೊಬೈಲುಗಳು ಯುವತಿಯರನ್ನು ಹಾಳು ಮಾಡುತ್ತಿವೆಯಂತೆ! ಸೆಲ್ ಫೋನುಗಳನ್ನು ಜಾಸ್ತಿ ಬಳಸುತ್ತಿರುವವರು ಯಾರು? ಮಹಿಳೆಯರೇ ಅಲ್ಲವೆ? ಹಾಗಾಗಿ ಅತ್ಯಾಚಾರಕ್ಕೆ ಕಾರಣ ಯಾರು ಹೇಳಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+