White Collar Terrorism: ದೆಹಲಿ ಸ್ಫೋಟ: ಏನಿದು ವೈಟ್ ಕಾಲರ್ ಭಯೋತ್ಪಾದನೆ, ಬೆಂಗಳೂರಿಗೂ ಭೀತಿ ಯಾಕೆ ?
White Collar Terrorism: ದೇಶದ ರಾಜಧಾನಿಯ ಹೃದಯಭಾಗದಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹೈ ಅಲರ್ಟ್ ಮುಂದುವರಿದಿದೆ. ಆದರೆ ಉನ್ನತ ಶಿಕ್ಷಣ ಪಡೆದಿರುವವರೇ ಇದೀಗ ಈ ರೀತಿಯ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಏನಿದು ವೈಟ್ ಕಾಲರ್ (White Collar Terrorism) ಟೆರರಿಸಂ ಎಂದರೇನು, ಈಗ ಆಕ್ಟೀವ್ ಆಗಿದ್ದು ಹೇಗೆ ಹಾಗೂ ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೂಡಿರುವ ಆತಂಕಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ.
ದೇಶದಲ್ಲಿ ಮತ್ತೊಮ್ಮೆ ಬಾಂಬ್ ಸ್ಫೋಟವಾಗಿದೆ. ಕಳೆದ ಕೆಲವು ವರ್ಷಗಳಿಂದ ದೆಹಲಿ, ಮುಂಬೈ ಹಾಗೂ ಬೆಂಗಳೂರು ಶಾಂತವಾಗಿತ್ತು. ಆದರೆ ಈಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಇದೀಗ ದೆಹಲಿಯಲ್ಲಿ ಆಗಿದ್ದು ಈಗ ನಡೆದಿರುವ ಬಾಂಬ್ ಸ್ಫೋಟದ ಹಿಂದೆ ಏನಿದು ವೈಟ್ ಕಾಲರ್ ಇದೆ ಎಂದು ಪ್ರಾಥಮಿಕ ಹಂತದಲ್ಲಿ ವರದಿಯಾಗಿದೆ. ಅಲ್ಲದೇ ಹಿಂದೆ ಉಗ್ರ ಸಂಘಟನೆಗಳಲ್ಲಿ ಟೆಕ್ಕಿಗಳು ಸೇರ್ಪಡೆ ಆಗುತ್ತಿದ್ದರು ಆದರೆ ಈಗ ವೈದ್ಯರೂ ಸಹ ಸೇರ್ಪಡೆ ಆಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

White Collar Terrorism: ಏನಿದು ವೈಟ್ ಕಾಲರ್ ಭಯೋತ್ಪಾದನೆ ?
ಭಯೋತ್ಪಾದನಾ ಕೃತ್ಯಗಳಲ್ಲಿ ಉನ್ನತ ಶಿಕ್ಷಣ ಪಡೆದವರ ಭಾಗಿ ಆಗುತ್ತಿರುವುದಕ್ಕೆ ವೈಟ್ ಕಾಲರ್ ಭಯೋತ್ಪಾದನೆ ಎನ್ನಲಾಗುತ್ತದೆ. ಇದು ವೈದ್ಯರು, ಎಂಜಿನಿಯರ್‌ಗಳು ಅಥವಾ ಶಿಕ್ಷಣ ತಜ್ಞರಂತಹ ವಿದ್ಯಾವಂತ, ನುರಿತ ವೃತ್ತಿಪರರಿಂದ ಯೋಜಿಸಲ್ಪಟ್ಟ ಕೃತ್ಯಗಳಿಗೆ ವೈಟ್ ಕಾಲರ್ ಭಯೋತ್ಪಾದನೆ ಎಂದು ಹೆಸರು ಇರಿಸಲಾಗಿದೆ. ಈ ಮಾದರಿಯ ಕೃತ್ಯಗಳಲ್ಲಿ ದೇಶದ ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಳ್ಳಲಾಗುತ್ತದೆ.
ದೇಶದಲ್ಲಿ ಮತ್ತೆ ವೈಟ್‌ಕಾಲರ್ ಟೆರರಿಸಂ ಆಕ್ಟೀವ್: ಈಗ ದೆಹಲಿಯಲ್ಲಿ ನಡೆದಿರುವ ಭಯೋತ್ಪಾದನೆ ಕೃತ್ಯವು ದೇಶದಲ್ಲಿ ಮತ್ತೆ ವೈಟ್ ಕಾಲರ್ ಟೆರರಿಸಂ ಆಕ್ಟೀವ್ ಆಗಿರುವುದರ ಸಂಕೇತವಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಧಾನದ ಮೂಲಕ ಪಾಕಿಸ್ತಾನ ಬೆಂಬಲಿತ ಉಗ್ರ ಜಾಲವು ಬಳಸಿಕೊಂಡು ಭಾರತದ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇಸ್ಲಾಮಿಕ್ ಸ್ಟೇಟ್ (ಐ.ಎಸ್) 1990 ಮತ್ತು 2000ರಲ್ಲಿ ಈ ಮಾದರಿಯ ಕಾರ್ಯತಂತ್ರವನ್ನು ಭಾರತದ ಪ್ರಮುಖ ನಗರಗಳಲ್ಲಿ ಬಳಸಿ ಕೃತ್ಯ ನಡೆಸಬಹುದೇ ಎನ್ನುವ ಆತಂಕ ಶುರುವಾಗಿದೆ. ಪ್ರಮುಖ ನಗರಗಳ ಸಾಲಿನಲ್ಲಿ ಬೆಂಗಳೂರು ಸಹ ಹೊರತಾಗಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಇಳಿಕೆ: ಇನ್ನು ದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಗಣನೀಯವಾಗಿ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಂದ ಭಯೋತ್ಪಾದಕರ ಸಂಘಟನೆಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವು ದಿನಗಳಿಂದ ಇಲ್ಲಿನ ಜನರನ್ನು ಭಯೋತ್ಪಾದನೆಯ ಕೃತ್ಯಗಳಿಗೆ ನೇಮಕ ಮಾಡಿಕೊಂಡಿರುವುದು ಕಡಿಮೆಯಾಗಿದ್ದು, ಹೀಗಾಗಿ ಈ ಹೊಸ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ ನಡೆದಿರುವ ಉಗ್ರ ಕೃತ್ಯಗಳಿಗಿಂತಲೂ ವೈದ್ಯರಂತಹ ಪ್ರಜ್ಞಾವಂತರು ಈ ಮಾದರಿಯ ಕೃತ್ಯದಲ್ಲಿ ಭಾಗಿ ಆಗುತ್ತಿರುವುದು ಭಾರತದ ಭದ್ರತೆಗೆ ಅಪಾಯಕಾರಿ ಎಂದೇ ಪರಿಗಣಿಸಲಾಗುತ್ತಿದೆ.












Click it and Unblock the Notifications