ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಿಜೆಐ ಯುಯು ಲಲಿತ್‌ ವಿಚಾರಣೆ ನಡೆಸುವ ಮೊದಲ ಪ್ರಕರಣಗಳಿವು

|
Google Oneindia Kannada News

ಹೊಸ ಸಿಜೆಐ ವಿಚಾರಣೆ ನಡೆಸುವ ಮೊದಲ ಪ್ರಕರಣಗಳ ಪಟ್ಟಿ ಹೀಗಿದೆ!
ನವದೆಹಲಿ, ಆಗಸ್ಟ್‌ 29: ಸುಪ್ರೀಂ ಕೋರ್ಟ್‌ನಲ್ಲಿ ನೂತನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ದಿನ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠದ ಮುಂದೆ ಕೆಲವು ಪ್ರಮುಖ ಪ್ರಕರಣಗಳು ಮತ್ತು ಪಿಐಎಲ್‌ಗಳು ವಿಚಾರಣೆಗೆ ಅಣಿಯಾಗಿವೆ.

ನ್ಯಾಯಮೂರ್ತಿ ಲಲಿತ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರದಂದು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇರಳ ಮೂಲದ ಪತ್ರಕರ್ತ ಕಪ್ಪನ್ ಅವರನ್ನು ಅಕ್ಟೋಬರ್ 2020 ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲಾಯಿತು. ದಲಿತ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಈ ತಿಂಗಳ ಆರಂಭದಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆಪಾದಿತ ಹತ್ರಾಸ್ ಪಿತೂರಿ ಪ್ರಕರಣದಲ್ಲಿ ಕಪ್ಪನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಮನವಿಯನ್ನು ತುರ್ತು ವಿಚಾರಣೆಗೆ ಉಲ್ಲೇಖಿಸಿದ ನಂತರ ಕಳೆದ ವಾರ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಆಗಸ್ಟ್ 26 ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದ್ದರು.

ಎಪ್ರಿಲ್ 26ರ ಮುಂಬೈ ಹೈಕೋರ್ಟ್ ಆದೇಶದ ವಿರುದ್ಧ ಎಲ್ಗರ್ ಪರಿಷತ್ ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಮಾನವ ಹಕ್ಕುಗಳ ಕಾರ್ಯಕರ್ತೆ ನವ್ಲಾಖಾ ಅವರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಭಟ್ ಅವರೊಂದಿಗೆ ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ವಿಚಾರಣೆ ನಡೆಸಲಿದ್ದಾರೆ. ನವ್ಲಾಖಾ ಅವರನ್ನು ಜೈಲಿನಲ್ಲಿಡುವ ಬದಲು ಗೃಹ ಬಂಧನದಲ್ಲಿರಿಸಬೇಕು ಎಂಬ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು.

Hijab ban: ಹಿಜಾಬ್ ಆದೇಶ, ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆHijab ban: ಹಿಜಾಬ್ ಆದೇಶ, ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ನವ್ಲಾಖಾ ಮತ್ತು ಇತರ ಬಂಧಿತ ಆರೋಪಿಗಳ ವಿರುದ್ಧದ ಪ್ರಕರಣವು ಪುಣೆಯಲ್ಲಿ ಡಿಸೆಂಬರ್ 31, 2017ರಂದು ನಡೆದ ಎಲ್ಗರ್ ಪರಿಷತ್ತಿನ ಸಮಾವೇಶಕ್ಕೆ ಸಂಬಂಧಿಸಿದೆ. ಈ ಕಾರ್ಯಕ್ರಮಕ್ಕೆ ಮಾವೋವಾದಿಗಳು ಹಣ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಇಲ್ಲಿ ಮುಖ್ಯ ನ್ಯಾಯಮೂರ್ತಿ ಲಲಿತ್ ನೇತೃತ್ವದ ಪೀಠವು ವಿವಿಧ ವಿಷಯಗಳ ಕುರಿತು ಹಲವಾರು ಹೊಸ ಪಿಐಎಲ್‌ಗಳ ವಿಚಾರಣೆಯನ್ನು ನಡೆಸಲಿದೆ.

ಇಸ್ಲಾಮಿಕ್ ನಂಬಿಕೆಯಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳುವ ಮೂಲಕ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವ ಅರ್ಜಿಗಳನ್ನು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ. ಆಗಸ್ಟ್ 2 ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಹಿಜಾಬ್ ವಿವಾದದ ಮೇಲಿನ ಮೇಲ್ಮನವಿ ಮತ್ತು ಇತರ ಅರ್ಜಿಗಳ ತುರ್ತು ಪಟ್ಟಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯವು ಈ ಅರ್ಜಿಗಳನ್ನು ಆಲಿಸಲಿದೆ ಎಂದು ಹೇಳಿದ್ದರು.

ಈ ವಿಷಯದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ಜುಲೈ 13ರಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು. ಆಗಸ್ಟ್ 29ರಿಂದ 25 ಐವರು ನ್ಯಾಯಾಧೀಶರ ಸಂವಿಧಾನ ಪೀಠದ ವಿಷಯಗಳನ್ನು ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿದೆ. ಸುಪ್ರೀಂ ಕೋರ್ಟ್ ರಿಜಿಸ್ಟರ್‌ ಹೊರಡಿಸಿದ ನೋಟಿಸ್ ಪ್ರಕಾರ, ಸಾಕಷ್ಟು ಸಮಯದಿಂದ ಬಾಕಿ ಉಳಿದಿರುವ 25 ಅರ್ಜಿಗಳು ಮುಂಬರುವ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೀಠಗಳಿಂದ ಸೋಮವಾರ ವಿಚಾರಣೆಗೆ ಬರಲಿವೆ.

ಆಗಸ್ಟ್ 29 ರಿಂದ ಐದು ನ್ಯಾಯಾಧೀಶರ ಸಂವಿಧಾನ ಪೀಠವು 25 ಅರ್ಜಿಗಳ ವಿಚಾರಣೆ ಒಳಗೊಂಡಿದೆ. ಹೆಚ್ಚಿನ ಸಂಖ್ಯೆಯ ವಾಡಿಕೆಯ ಪ್ರಕರಣಗಳನ್ನು ನಿರ್ಧರಿಸಲು ವಿಶೇಷ ನ್ಯಾಯವ್ಯಾಪ್ತಿಯೊಂದಿಗೆ ವಿಶೇಷ ಮೇಲ್ಮನವಿ ನ್ಯಾಯಾಲಯಗಳನ್ನು ಹೊಂದುವ ಅಗತ್ಯವಿದೆಯೇ, ಹಾಗೆಯೇ ಆರ್ಟಿಕಲ್ 32 ಅರ್ಜಿಗಳನ್ನು ಈಗ ಭಾರತದ ಸರ್ವೋಚ್ಚ ನ್ಯಾಯಾಲಯವು ಹೆಚ್ಚುತ್ತಿರುವ ಬಾಕಿ ಅರ್ಜಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುತ್ತಿದೆ.

ವಾಟ್ಸಪ್‌ನ ಗೌಪ್ಯತೆ ನೀತಿ

ವಾಟ್ಸಪ್‌ನ ಗೌಪ್ಯತೆ ನೀತಿ

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಗಳನ್ನು ಒದಗಿಸಿದೆ ಇದರ ವಿಚಾರಣೆ ನಡೆಯಲಿದೆ. ಅಲ್ಲದೆ ಆರ್ಟಿಕಲ್ 21 ರ ಅಡಿಯಲ್ಲಿ ವಾಟ್ಸಪ್‌ನ ಗೌಪ್ಯತೆ ನೀತಿ ಮತ್ತು ಅದರ ಬಳಕೆದಾರರ ಗೌಪ್ಯತೆಯ ಹಕ್ಕು, ವಿವಾಹ ವಿಚ್ಛೇಧನ 142 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರ, ಆಂಧ್ರಪ್ರದೇಶದ ಎಲ್ಲಾ ಮುಸ್ಲಿಂ ಸಮುದಾಯದ ಸದಸ್ಯರನ್ನು "ಹಿಂದುಳಿದ ವರ್ಗಗಳ" ಭಾಗವಾಗಿ ಘೋಷಿಸುವ ರಾಜ್ಯ ಶಾಸನದ ಸಾಂವಿಧಾನಿಕ ಸಿಂಧುತ್ವ ಬಗ್ಗೆ ವಿಚಾರಣೆ ನಡೆಯಲಿದೆ.

ಪ್ರಮಾಣ ವಚನ ಸ್ವಿಕರಿಸಲಿರುವ ನೂತನ ಸಿಜೆಐಗೆ ನ್ಯಾಯಾಂಗದಲ್ಲಿ 102 ವರ್ಷಗಳ ಪರಂಪರೆಪ್ರಮಾಣ ವಚನ ಸ್ವಿಕರಿಸಲಿರುವ ನೂತನ ಸಿಜೆಐಗೆ ನ್ಯಾಯಾಂಗದಲ್ಲಿ 102 ವರ್ಷಗಳ ಪರಂಪರೆ

ಇಂಟರ್ನೆಟ್ ಸುರಕ್ಷತೆಗೆ ಸಂಬಂಧಿಸಿದ ಅರ್ಜಿ

ಇಂಟರ್ನೆಟ್ ಸುರಕ್ಷತೆಗೆ ಸಂಬಂಧಿಸಿದ ಅರ್ಜಿ

ಪಂಜಾಬ್ ರಾಜ್ಯದಲ್ಲಿ ಸಿಖ್ಖರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವುದು. ಇಂಟರ್ನೆಟ್ ಸುರಕ್ಷತೆಗೆ ಸಂಬಂಧಿಸಿದ ಅರ್ಜಿ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿಕೆ. ನಿಕಾಹ್ ಹಲಾಲಾ, ನಿಕಾಹ್ ಮುತಾಹ್ ಮತ್ತು ನಿಕಾಹ್ ಮಿಸ್ಯಾರ್ ಸೇರಿದಂತೆ ಬಹುಪತ್ನಿತ್ವದ ಪ್ರಚಲಿತ ಅಭ್ಯಾಸಕ್ಕೆ ಸವಾಲು ಅರ್ಜಿ ವಿಚಾರಣೆ.

ಅಸೆಂಬ್ಲಿಯಲ್ಲಿ ಮತ ಚಲಾಯಿಸಲು ಲಂಚ

ಅಸೆಂಬ್ಲಿಯಲ್ಲಿ ಮತ ಚಲಾಯಿಸಲು ಲಂಚ

ಸಂವಿಧಾನದ 161ನೇ ವಿಧಿಯನ್ನು ಬಳಸಿಕೊಂಡು ಕಾರ್ಯಾಂಗವು ರಾಜ್ಯಪಾಲರ ಮುಂದೆ ದಾಖಲೆಗಳನ್ನು ಇರಿಸದೆ ಪರಿಹಾರವನ್ನು ನೀಡಲು ನೀತಿಯನ್ನು ರೂಪಿಸಬಹುದೇ? ಹಾಗೂ ಸಂಸತ್ತಿನಲ್ಲಿ ಅಥವಾ ಅಸೆಂಬ್ಲಿಯಲ್ಲಿ ಮತ ಚಲಾಯಿಸಲು ಲಂಚವನ್ನು ಸ್ವೀಕರಿಸಿದ್ದಕ್ಕಾಗಿ ಕಾನೂನು ಕ್ರಮದಿಂದ ಸಂವಿಧಾನದ 194 (2) ನೇ ವಿಧಿಯ ಅಡಿಯಲ್ಲಿ ಶಾಸಕರು ವಿನಾಯಿತಿ ಹೊಂದಿದ್ದಾರೆಯೇ ಎಂಬ ಅರ್ಜಿಯನ್ನು ವಿಚಾರಣೆ ನಡೆಸಲಿದೆ.

ಭಾರತೀಯ ಚುನಾವಣಾ ಆಯೋಗ ಅರ್ಜಿ

ಭಾರತೀಯ ಚುನಾವಣಾ ಆಯೋಗ ಅರ್ಜಿ

ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದ ಅಧಿಕಾರಿಗಳಿಗೆ ವಿನಾಯಿತಿಯನ್ನು ಒದಗಿಸುವ DPSE ಕಾಯಿದೆಯ ಸೆಕ್ಷನ್ 6A(1) ಅನ್ನು ಪ್ರಶ್ನಿಸುವ ಮನವಿ ಹಾಗೂ ಭಾರತೀಯ ಚುನಾವಣಾ ಆಯೋಗದ (ಇಸಿಐ) ಸದಸ್ಯರನ್ನು ನೇಮಕ ಮಾಡುವ ಪ್ರಸ್ತುತ ವ್ಯವಸ್ಥೆಯನ್ನು ತುದ್ದುಪಡಿ ಮಾಡುವ ಅರ್ಜಿಯನ್ನು ವಿಚಾರಣೆ ನಡೆಸಲಾಗುತ್ತದೆ.

English summary
A few important cases and PILs are lined up for hearing before the bench headed by Chief Justice of India UU Lalit on the first day of his appointment as a new judge in the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X