World's Highest Railway Bridge: ಭಾರತದಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ ಯಾವಾಗ?
World's Tallest Railway Bridge: ಭಾರತೀಯ ರೈಲ್ವೆಯಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ಭಾರತೀ ರೈಲ್ವೆಯು ವಿಶ್ವದ ಮೊದಲ ಕೇಬಲ್ ಸೇತುವೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮೂಲಕ ಭಾರತೀಯ ರೈಲ್ವೇ ವಿಶಿಷ್ಟ ದಾಖಲೆ ನಿರ್ಮಿಸಿದೆ. ಹಾಗಾದರೆ ಇದು ಎಲ್ಲಿ ನಿರ್ಮಾಣವಾಗಿದೆ, ವೆಚ್ಚ ಹಾಗೂ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಮ್ಮು ಮತ್ತು ಕಾಶ್ಮೀರದ ಅಂಜಿ ವಿಭಾಗದಲ್ಲಿ ನಿರ್ಮಿಸಲಾದ ದೇಶದ ಮೊದಲ ಕೇಬಲ್ ಸೇತುವೆಯ ಲೋಡ್ ಪರೀಕ್ಷೆಯನ್ನು ನಡೆಸಲಾಯಿತು. ಈ ಸಾಧನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲ್ವೆ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಉದ್ದೇಶವಾಗಿದೆ. ಇದು 2025ರ ಜನವರಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಪ್ರಾಯೋಗಿಕ ಪರೀಕ್ಷೆಯ ವಿಡಿಯೋವನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಈ ಮಹತ್ವದ ಯೋಜನೆಯ ದೊಡ್ಡ ಮೈಲುಗಲ್ಲು ಸಾಧಿಸುವತ್ತ ದಾಪುಗಲಿರಿಸಿದೆ ಎಂದು ಕಂಡುಬರುತ್ತದೆ.
ವಿಶ್ವದಲ್ಲೇ ಅತೀ ಎತ್ತರದ ರೈಲ್ವೆ ಸೇತುವೆ ಚೀನಾಬ್ ಕಮಾನು ಸೇತುವೆ ಅಧಿಕೃತ ರೈಲು ಸಂಚಾರ ಸೇವೆಗೆ ಸಜ್ಜಾಗಿದೆ. ಜೊತೆಗೆ ಕಟ್ರಾ ಮತ್ತು ಬನಿಹಾಲ್ ನಡುವೆ ನಿರ್ಮಾಣಗೊಂಡಿರುವ ದೇಶದ ಮೊಟ್ಟ ಮೊದಲ ರೈಲ್ವೆ ಕೇಬಲ್ ಸೇತುವೆ ಅಂಜಿ ಬ್ರಿಡ್ಜ್ ಸಹ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮೂಲಕ ಭಾರತೀಯ ರೈಲು ಸೇವೆ ಜೊತೆ ಕಾಶ್ಮೀರ ಕಣಿವೆ ಅಧಿಕೃತವಾಗಿ ಸಂಪರ್ಕಿಸಲಿದೆ.
ತುಂಬಾ ವರ್ಷಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ ಆರಂಭವಾದ ಉಧಾಂಪುರ್-ಶ್ರೀನಗರ-ಬಾರಮುಲ್ಲ ರೈಲು ಸಂಪರ್ಕ ಯೋಜನೆ ಇದೀಗ ಕಾರ್ಯಚಾರಣೆಗೆ ಸಜ್ಜಾಗಿದೆ. ಕಟ್ರಾ-ರೆಯಾಸಿ ನಡುವೆ ರೈಲು ಮಾರ್ಗದ ಪ್ರಾಯೋಗಿಕ ರೈಲು ಸಂಚಾರ ಹಾಗೂ ಸುರಕ್ಷತಾ ಪರೀಕ್ಷೆ ನಡೆದಿದೆ.
ಸಂಗಲ್ಡನ್ ಹಾಗೂ ರೆಯಾಸಿ ನಡುವಿನ 46 ಕಿಲೋ ಮೀಟರ್ ಹಾಗೂ ರೆಯಾಸಿ ಹಾಗೂ ಕಟ್ರಾ ನಿಲ್ದಾಣದ ನಡುವಿನ 17 ಕಿಲೋ ಮೀಟರ್ ಉದ್ದದ ರೈಲು ಪ್ರಯಾಣ ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2025ರ ಜನವರಿಯಲ್ಲಿ ರೆಯಾಸಿ ರೈಲು ನಿಲ್ದಾಣದಿಂದ ಚಾಲನೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತದೆ.
ಅತೀ ಕಷ್ಟಕರ ಮಾರ್ಗ ಎಂದೇ ಹೆಸರಾಗಿದ್ದ 111 ಕಿ.ಮೀ. ಅಂತರದ ಕಟ್ರಾ-ಬನಿಹಾಳ್ ಮಾರ್ಗ ಬಹುತೇಕ ದೇಶಕ್ಕೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ಇದು ಕಾರ್ಯಾಚರಣೆಗೆ ಬಂದರೆ ಈ ಭಾಗದ ಪ್ರವಾಸೋದ್ಯಮ ಸೇರಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಕ್ಕಾಂತಾಗಲಿದೆ. ಅದರಲ್ಲೂ ವಿಶೇಷವಾಗಿ ವೈಷ್ಣೋದೇವಿ ಯಾತ್ರಿಗಳಿಗೆ ಯಾತ್ರೆ ಸುಲಭ ಆದಂತಾಗಲಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications