• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ವಾಟ್ಸಾಪ್

|

ನವದೆಹಲಿ, ಮೇ 26: ಕೇಂದ್ರ ಸರ್ಕಾರದ ನೂತನ ಸಾಮಾಜಿಕ ಜಾಲತಾಣ ನಿಯಮವು ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತರಲಿದೆ ಎಂದು ಆರೋಪಿಸಿ ವಾಟ್ಸಾಪ್ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕಟಿಸಿರುವ ಹೊಸ ನಿಯಮಗಳಲ್ಲಿ ಭಾರತದ ಸಂವಿಧಾನ ನೀಡಿರುವ ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?

ಬುಧವಾರದಿಂದ ಡಿಜಿಟಲ್ ನೀತಿ ಸಂಹಿತೆಯ ನಿಯಮಗಳು ಅನುಷ್ಠಾನವಾಗುತ್ತಿದ್ದು, ಇದರಿಂದಾಗಿ ಫೇಸ್‌ಬುಕ್‌ನ ಭಾಗವಾಗಿರುವ ವಾಟ್ಸಾಪ್ ಖಾಸಗಿತನದ ಸುರಕ್ಷತೆಯ ಅಂಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ವ್ಯಕ್ತಿಯ ವಿವಿರ ಪತ್ತೆ ಹಚ್ಚಲು ಸಾಧ್ಯವಿಲ್ಲ

ವ್ಯಕ್ತಿಯ ವಿವಿರ ಪತ್ತೆ ಹಚ್ಚಲು ಸಾಧ್ಯವಿಲ್ಲ

ವಾಟ್ಸಾಪ್ ನಿರ್ದಿಷ್ಟ ವ್ಯಕ್ತಿಯ ವಿವರಗಳನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದೆ, ಹಾಗೆಯೇ ವಾಟ್ಸಾಪ್ ಸಂದೇಶಗಳು ಎಂಡ್‌ ಟು ಎಂಡ್ ಎನ್‌ಕ್ರಿಪ್ಟೆಡ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಸ್ವತಃ ವಾಟ್ಸಾಪ್ ಕಂಪನಿಯಾಗಲಿ ಅಥವಾ ಇನ್ಯಾವುದೇ ವ್ಯಕ್ತಿಯಾಗಲೀ ಬೇರೆಯವರ ಸಂದೇಶವನ್ನು ಕದ್ದು ಓದಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

 ಖಾಸಗಿ ಹಕ್ಕು ಉಲ್ಲಂಘನೆ

ಖಾಸಗಿ ಹಕ್ಕು ಉಲ್ಲಂಘನೆ

ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ, ಕಂಟೆಂಟ್‌ಗಳು ಮತ್ತು ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಮಾಡುವಾಗ ಸಾಮಾಜಿಕ ಮಾಧ್ಯಮ ಕಂಪನಿಗಳು ಮೊದಲಿಗೆ ಮಾಹಿತಿ ಸೃಜಿಸಿದವರನ್ನು ಗುರುತಿಸಿ ಅವರ ಮಾಹಿತಿಯನ್ನು ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

 ತಪ್ಪಾದ ಮಾಹಿತಿ ತೆಗೆದು ಹಾಕಲು ಸೂಚನೆ

ತಪ್ಪಾದ ಮಾಹಿತಿ ತೆಗೆದು ಹಾಕಲು ಸೂಚನೆ

ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿಗಳನ್ನು ಹಂಚುತ್ತಿರುವುದನ್ನು ತೆಗೆದು ಹಾಕುವಂತೆ ಸರ್ಕಾರವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚಿಸಿತ್ತು. ಅದರೊಂದಿಗೆ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಮತ್ತು ಸಾವಿರಾರು ಜನರು ಸಾವಿಗೀಡಾಗುತ್ತಿರುವ ಕುರಿತು ಟೀಕೆ ಮಾಡಲಾಗಿರುವ ಪೋಸ್ಟ್‌ಗಳನ್ನು ಕೂಡ ತೆಗೆಯುವಂತೆ ಸರ್ಕಾರ ಒತ್ತಡ ಹಾಕಿತ್ತು.

 ಅನುಸರಿಸಬೇಕಾದ ನಿಯಮಗಳೇನು?

ಅನುಸರಿಸಬೇಕಾದ ನಿಯಮಗಳೇನು?

-ದೂರು ಮತ್ತು ಪರಿಹಾರಗಳ ಬಗ್ಗೆ ಪ್ರತಿ ತಿಂಗಳು ವರದಿ ಸಲ್ಲಿಸಬೇಕು
-ಹೆಚ್ಚು ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮಗಳು ದೂರು ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು.
-ರಾಷ್ಟ್ರೀಯ ಏಕತೆ, ಸಾರ್ವಭೌಮತೆ, ರಾಷ್ಟ್ರೀಯ ಭದ್ರತೆ, ಕಾನೂನು ವ್ಯವಸ್ಥೆ ಪಾಲನೆಗೆ ಧಕ್ಕೆ ತರುವಂತಹ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಕಂಟೆಂಟ್‌ಗಳಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯವಾಗಲಿದೆ.
-ಕಂಟೆಂಟ್‌ಗಳು ಮತ್ತು ಸುದ್ದಿಗಳ ಮೂಲ ಯಾರು ಎಂಬುದನ್ನು ಪತ್ತೆ ಮಾಡಬೇಕು, ತನಿಖೆಯ ಕಾರಣಕ್ಕೆ ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಬೇಕು.
-ಬಳಕೆದಾರರು ತಮ್ಮನ್ನು ತಾವು ದೃಢೀಕರಿಸಿಕೊಳ್ಳಲು ವ್ಯವಸ್ಥೆ ಇರಬೇಕು, ದೃಢೀಕರಣ ಆಗಿದೆ ಎಂಬುದು ಬಳಕೆದಾರರಿಗೆ ಸ್ಪಷ್ಟವಾಗಿ ಅರಿವಾಗುವ ವ್ಯವಸ್ಥೆ ಇರಬೇಕು.

English summary
WhatsApp has moved the Delhi High Court against India’s new and stricter IT Rules that require instant messaging platforms to aid in identifying the ‘originator’ of messages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X