ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ವಿದ್ಯಾರ್ಥಿ, ಸಬ್ಜರ್ ಉಗ್ರ ಸಂಘಟನೆ ಮುಖ್ಯಸ್ಥನಾದ ಕತೆ

ಚಂಡೀಗಢದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸಬ್ಜರ್ ಗೆ ಹಿಜ್ಬುಲ್ ನ ಪರಿಚಯ ಮಾಡಿಸಿದ್ದು ಬುರ್ಹಾನ್ ನ ಸೋದರ ಖಾಲೀದ್. ಖಾಲೀದ್ ಹಾಗೂ ಬುರ್ಹಾನ್ ಹತ್ಯೆಯಾದ ಎರಡು ದಿನಗಳ ಬಳಿಕ ಜುಲೈ 10, 2016ರಂದು ಸಭ್ಜರ್ ನನ್ನು ಸಂಘಟನೆಯ ಮುಖ್ಯಸ್ಥನಾದ

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಮೇ 27: ಚಂಡೀಗಢದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಸಬ್ಜರ್ ಗೆ ಹಿಜ್ಬುಲ್ ನ ಪರಿಚಯ ಮಾಡಿಸಿದ್ದು ಬುರ್ಹಾನ್ ನ ಸೋದರ ಖಾಲೀದ್. ಖಾಲೀದ್ ಹಾಗೂ ಬುರ್ಹಾನ್ ಹತ್ಯೆಯಾದ ಎರಡು ದಿನಗಳ ಬಳಿಕ ಜುಲೈ 10, 2016ರಂದು ಸಭ್ಜರ್ ನನ್ನು ಸಂಘಟನೆಯ ಮುಖ್ಯಸ್ಥನಾಗಿ ತ್ವರಿತಗತಿಯಲ್ಲಿ ಬೆಳೆದ ಸಬ್ಜರ್ ಮೇ 27ರಂದು ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾನೆ. ಸಬ್ಜರ್ ಗೆ 21 ವರ್ಷ ವಯಸ್ಸು.

ದಕ್ಷಿಣ ಕಾಶ್ಮೀರದಲ್ಲಿ 2016ರ ಜುಲೈ ತಿಂಗಳಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್‌ ಅಬ್ದುಲ್ ಬುರ್ಹಾನ್ ವನಿಯನ್ನು ಹತ್ಯೆ ಮಾಡಲಾಗಿತ್ತು.[ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥನ ಕೊಂದು ಹಾಕಿದ ಯೋಧರು]

ಕಾಶ್ಮೀರದ ಯುವಕರಿಗೆ ಬಂದೂಕು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದ ಬುರ್ಹಾನ್ ತಲೆಗೆ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. 15ನೇ ವಯಸ್ಸಿನಲ್ಲಿಯೇ ಉಗ್ರ ಸಂಘಟನೆ ಸೇರಿದ್ದ ಬುರ್ಹಾನ್ ಬಹು ಬೇಗನೆ ಕಮಾಂಡರ್ ಆಗಿದ್ದ. ಉಗ್ರ ಸಂಘಟನೆ ಸೇರಿದ ಮೊದಲ ವಿದ್ಯಾವಂತ ಯುವಕ ಎಂಬ ಹಣೆಪಟ್ಟಿಯನ್ನು ಈತ ಹೊಂದಿದ್ದ.

ಕಾಶ್ಮೀರದ ಯುವಕರು ಬಂದೂಕು ಹಿಡಿಯಿರಿ ಎಂದು ಆತ ಕರೆ ಕೊಟ್ಟಿದ್ದ. ಅಲ್‌ ಖೈದಾ, ಐಎಸ್ ಐಎಸ್ ಸಂಘಟನೆಗಳ ನಾಯಕರಂತೆ ಸಂಘಟನೆಯ ಪ್ರಚಾರಕ್ಕೆ ಈತ ಸಾಮಾಜಿಕ ಜಾಲ ತಾಣಗಳನ್ನು ಬಳಸುತ್ತಿದ್ದ. ಇದೇ ಮಾರ್ಗದಲ್ಲಿ ಸಬ್ಜರ್ ಭಟ್ ಕೂಡಾ ಸಾಗಿದ್ದ

 ಸಬ್ಜರ್ ಭಟ್ ಎನ್ ಕೌಂಟರ್

ಸಬ್ಜರ್ ಭಟ್ ಎನ್ ಕೌಂಟರ್

ಮೆಹಮೂದ್ ಘಜ್ನವಿ ಅಲಿಯಾಸ್ ಸಬ್ಜರ್ ಭಟ್ ಬಗ್ಗೆ ಹೆಚ್ಚಿನ ಮಾಹಿತಿ ಲಭವಿಲ್ಲ. ಕಳೆದ ವರ್ಷವೇ ಮೋಸ್ಟ್ ವಾಂಟೆಂಡ್ ಪಟ್ಟಿ ಸೇರಿದ್ದ ಭಟ್ ತಲೆ ಮೇಲೆ ನಗದು ಬಹುಮಾನ ಘೋಷಿಸಲಾಗಿತ್ತು. ಬುರ್ಹಾನಿಗೆ 10 ಲಕ್ಷ ರು ಇನಾಮು ಘೋಷಿಸಲಾಗಿತ್ತು. ಆದರೆ, ಭಟ್ ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ದಕ್ಷಿಣ ಕಾಶ್ಮೀರದ ಪೊಲೀಸರು ನಿರತರಾಗಿದ್ದರು.

ಸಬ್ಜರ್ ಸತ್ತ ಸ್ಥಳ

ಸಬ್ಜರ್ ಸತ್ತ ಸ್ಥಳ

ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಘಜ್ನವಿ ಅಲಿಯಾಸ್ ಸಬ್ಜರ್, ದಕ್ಷಿಣ ಕಾಶ್ಮೀರದ ರಥ್ಸುನಾದ ನಿವಾಸಿ. ಬುರ್ಹಾನ್ ಜತೆ ಒಳ್ಳೆ ಗೆಳೆತನ ಹೊಂದಿದ್ದ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿ ಇನ್ನೂ ಒಂದು ವರ್ಷ ಕೂಡಾ ಕಳೆದಿಲ್ಲ. ಬುರ್ಹಾನ್ ವನಿ ಹತ್ಯೆಗೂ ಮುನ್ನ ವನಿಯ ಸೋದರ ಖಾಲಿದ್ ಹತ್ಯೆ, ಸಬ್ಜರ್ ನನ್ನು ಕಾಡಿಸಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿ ಸಂಘಟನೆ ಸೇರಿದ್ದ, ಜುಲೈನಲ್ಲಿ ಬುರ್ಹಾನಿ ಹತ್ಯೆಗೀಡಾದ.

21 ವರ್ಷ ವಯಸ್ಸಿನ ಭಟ್

21 ವರ್ಷ ವಯಸ್ಸಿನ ಭಟ್

21 ವರ್ಷ ವಯಸ್ಸಿನ ಭಟ್, ಚಂಡೀಗಢದ ಇಂಜಿನಿಯರಿಂಗ್ ವಿದ್ಯಾರ್ಥಿ ಎಂಬುದಷ್ಟೇ ಸಿಕ್ಕ ಮಾಹಿತಿ. ಸಾಮಾಜಿಕ ಜಾಲ ತಾಣ ಬಳಕೆ ವಿಷಯದಲ್ಲಿ ಬುರ್ಹಾನ್ ಗೆ ಹೋಲಿಸಿದರೆ ಸಬ್ಜರ್ ಸಾಕಷ್ಟು ಹಿಂದೆ ಉಳಿದಿದ್ದ. ಸಂಘಟನೆ ಸೇರಿದ ಮುರ್ನಾಲ್ಕು ತಿಂಗಳುಗಳಲ್ಲೇ, ಹಾಲಿ ಕಮ್ಯಾಂಡರ್ ಬುರ್ಹಾನಿ ಹತ್ಯೆಗೀಡಾದ ಎರಡು ದಿನ ಬಳಿಕವೇ ಸಬ್ಜರ್ ಭಟ್ ಗೆ ಸಂಘಟನೆಯ ಜವಾಬ್ದಾರಿ ವಹಿಸಲಾಯಿತು.

ಸರ್ಕಾರಿ ನೌಕರನ ಮಗ

ಸರ್ಕಾರಿ ನೌಕರನ ಮಗ

ಕಾಶ್ಮೀರದಲ್ಲಿನ ಹಿಂಸಾಚಾರ, ದೌರ್ಜನ್ಯದಿಂದ ಬೇಸತ್ತು ನಾನು ಜನರ ಒಳಿತಿಗಾಗಿ 'ಜಿಹಾದ್' ನಡೆಸುತ್ತೇನೆ ಎಂದು ಪತ್ರ ಬರೆದು ನಂತರ ಹಿಜ್ಬುಲ್ ಸಂಘಟನೆಯನ್ನು ಸಬ್ಜರ್ ಸೇರಿದ್ದ. 2010ರಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ, ಚಂಡೀಗಢ ತೊರೆದಿರಲಿಲ್ಲ. ನಂತರ ಆತನ ಸುಳಿವು ನಮಗೂ ಸಿಕ್ಕಿರಲಿಲ್ಲ ಎಂದು ಸರ್ಕಾರಿ ನೌಕರನಾಗಿರುವ ಸಬ್ಜರ್ ನ ತಂದೆ ಹೇಳಿದ್ದಾರೆ.

English summary
He replaced Burhan Wani as the commander of the Hizbul Mujahideen on July 10 2016. This was exactly two days after Burhan was killed in an encounter by security forces. Sabzar Bhat, the successor to Wani was today killed in an encounter at Tral in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X