• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊರೊನಾ ಲಸಿಕೆ ಬಂದ ಬಳಿಕ ಮುಂದೇನು?

|

ನವದೆಹಲಿ, ಜನವರಿ 05: ಭಾರತದಲ್ಲಿ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಡಿಸಿಜಿಐ ಒಪ್ಪಿಗೆ ನೀಡಿದೆ.

ಭಾರತದಲ್ಲಿ ಒಂದು ಕೋಟಿಗೂ ಅಧಿಕ ಕೊರೊನಾ ಸೋಂಕಿತರಿದ್ದು, 1.5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ, ಇದಕ್ಕೆ ಕಾರಣವಾದ ಸೋಂಕನ್ನು ತೊಲಗಿಸಲು ಎರಡು ಕೊರೊನಾ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಲಾಗಿದೆ.

12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಮಾಡಿರುವ ಪ್ರಯೋಗದಿಂದ ಲಸಿಕೆ ಸುರಕ್ಷಿತ ಎಂದು ಕಂಡುಬಂದಿದ್ದು ಹೈದರಾಬಾದ್ ಮೂಲದ ಸಂಸ್ಥೆ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ.

ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

ಲಸಿಕೆ ಅಭಿಯಾನವನ್ನು ವಯಸ್ಕರಿಗೆ ಮಾತ್ರ ಸದ್ಯ ನಡೆಸಲಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ದತ್ತಾಂಶವಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಹ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಯಾವ್ಯಾವ ಮಾನದಂಡಗಳನ್ನು ಅನುಸರಿಸಿ ಈ ಎರಡು ಕೊರೊನಾ ಲಸಿಕೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ..

ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಹೇಗೆ ಕೆಲಸ ಮಾಡುತ್ತದೆ

ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಹೇಗೆ ಕೆಲಸ ಮಾಡುತ್ತದೆ

ಕೊವಿಶೀಲ್ಡ್‌: ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ಸಿದ್ಧಪಡಿಸಿದೆ. ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್‌ನಿಂದ ಪರವಾನಗಿ ಪಡೆದು ಲಸಿಕೆ ಅಭಿವೃದ್ಧಿಪಡಿಸಿ ತಯಾರಿಸಿದೆ.

ಹಾಗೆಯೇ ಈ ಲಸಿಕೆಗಳು ಕೊರೊನಾದ ರೂಪಾಂತರಿ ಸೋಂಕಿನ ಮೇಲೂ ಕೂಡ ಪರಿಣಾಮ ಬೀರಲಿದೆ. ಸೋಂಕಿನ ವಿರುದ್ಧ ಲಸಿಕೆಗಳು ಪ್ರತಿಕಾಯವನ್ನು ಸೃಷ್ಟಿಮಾಡುತ್ತವೆ.ಲಸಿಕೆಯನ್ನು 2-8 ಡಿಗ್ರಿ ಉಷ್ಣಾಂಶದಲ್ಲಿ ಆರು ತಿಂಗಳವರೆಗೆ ಸಂಗ್ರಹಿಸಿಡಬಹುದು, ಆದರೆ ಫ್ರಿಡ್ಜ್ ನಿಂದ ತೆಗೆದ ಬಳಿಕ ಆರು ಗಂಟೆಯೊಳಗೆ ಬಳಸಬೇಕು.

ಕೋವ್ಯಾಕ್ಸಿನ್: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಈ ಸಂಶೋಧನೆ ನಡೆಸಿದೆ.ಈ ಲಸಿಕೆಯು ಕೂಡ ಕೊರೊನಾ ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯವನ್ನು ಸೃಷ್ಟಿಸುತ್ತದೆ. ಕೊವ್ಯಾಕ್ಸಿನ್ ಲಸಿಕೆ ನಿಷ್ಕ್ರಿಯ ಲಸಿಕೆ ಎನಿಸಿಕೊಂಡಿದೆ. ಇದರರ್ಥ ಒಮ್ಮೆ ಕೊರೊನಾ ಸೋಂಕನ್ನು ನಿಷ್ಕ್ರಿಯಗೊಳಿಸಿದರೆ ಮತ್ತೆ ಕೊರೊನಾ ಸೋಂಕು ಬರಲು ಸಾಧ್ಯವೇ ಇಲ್ಲ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗು್ತತದೆ.

ಎರಡು ಲಸಿಕೆಗಳಿಗೆ ಯಾವ ರೀತಿಯ ಅನುಮತಿ ಸಿಕ್ಕಿದೆ?

ಎರಡು ಲಸಿಕೆಗಳಿಗೆ ಯಾವ ರೀತಿಯ ಅನುಮತಿ ಸಿಕ್ಕಿದೆ?

ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಗಳಿಗೆ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದೆ. ಯುಕೆ ಹಾಗೂ ಅಮೆರಿಕದಲ್ಲಿ ಫೈಜರ್, ಮಾಡೆರ್ನಾ ಹಾಗೂ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

ಕಂಪನಿಯು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಮುಗಿಸದಿದ್ದರೂ ಕೂಡ ಲಸಿಕೆಗೆ ಅನುಮತಿ ನೀಡಲಾಗಿದೆ. ಕೊವಿಶೀಲ್ಡ್ ಲಸಿಕೆಯನ್ನು 23 ಸಾವಿರ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗಿದೆ.

ಕೋವ್ಯಾಕ್ಸಿನ್ ರೂಪಾಂತರಿ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು ಎಂಬ ಉದ್ದೇಶದಿಂದ ಈ ಲಸಿಕೆಗೆ ಒಪ್ಪಿಗೆ ನೀಡಲಾಗಿದೆ. ಇದು ಒಂದು ಮತ್ತು ಎರಡನೇ ಹಂತದಲ್ಲಿ ಹೆಚ್ಚು ಪರಿಣಾಮಕಾರಿ ಎನ್ನುವ ಫಲಿತಾಂಶ ಬಂದಿದೆ.

ಎರಡು ಲಸಿಕೆ ಅನುಮೋದನೆ ಹಿಂದೆ ಷರತ್ತುಗಳಿವೆಯೇ?

ಎರಡು ಲಸಿಕೆ ಅನುಮೋದನೆ ಹಿಂದೆ ಷರತ್ತುಗಳಿವೆಯೇ?

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್‌ ಬಯೋಟೆಕ್‌ಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರಲ್ಲಿ ಎರಡೂ ಸಂಸ್ಥೆಗಳು ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಇಮ್ಯುಜೆನೆಸಿಟಿ ಡೇಟಾವನ್ನು ನಿರಂತರವಾಗಿ ಸಲ್ಲಿಸುತ್ತಿರಬೇಕು. ಮುಂದಿನ ಎರಡು ತಿಂಗಳು ಪ್ರತಿ 15 ದಿನಗಳಿಗೊಮ್ಮೆ ಸುರಕ್ಷತೆಯ ಡಾಟಾವನ್ನು ಸಲ್ಲಿಸಬೇಕಾಗುತ್ತದೆ.

ಸೆರಂ ಇನ್‌ಸ್ಟಿಇಟ್ಯೂಟ್‌ಗೆ ನೀಡಿರುವ ಮಾರ್ಗಸೂಚಿಗಳು

*18 ವರ್ಷ ಮತ್ತು ಅದ್ಕಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು

*ಮೊದಲ ಡೋಸ್ ಲಸಿಕೆ ನೀಡಿದ ನಾಲ್ಕರಿಂದ ಐದು ವಾರದೊಳಗೆ ಎರಡನೇ ಡೋಸ್ ನೀಡಬೇಕು

*ಲಸಿಕೆಯನ್ನು 2-8 ಡಿಗ್ರಿ ಉಷ್ಣಾಂಶದಲ್ಲಿ ಆರು ತಿಂಗಳವರೆಗೆ ಸಂಗ್ರಹಿಸಿಡಬಹುದು, ಆದರೆ ಫ್ರಿಡ್ಜ್ ನಿಂದ ತೆಗೆದ ಬಳಿಕ ಆರು ಗಂಟೆಯೊಳಗೆ ಬಳಸಬೇಕು.

ಭಾರತ್ ಬಯೋಟೆಕ್ ಸಂಸ್ಥೆಗೆ ನೀಡಿರುವ ಮಾರ್ಗಸೂಚಿ

12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು

ಮೊದಲ ಡೋಸ್ ಲಸಿಕೆ ನೀಡಿದ 28 ದಿನಗಳೊಳಗೆ ಎರಡನೇ ಡೋಸ್ ನೀಡಬೇಕು, ಈ ಎರಡೂ ನಿಯಮಗಳ ಹೊರತಾಗಿ ಮಿಕ್ಕೆಲ್ಲವೂ ಎರಡೂ ಸಂಸ್ಥೆಗೆ ಏಕರೂಪದಲ್ಲಿದೆ.

ಜನರ ಸಂದೇಹಗಳು, ಸರ್ಕಾರದ ಉತ್ತರ

ಜನರ ಸಂದೇಹಗಳು, ಸರ್ಕಾರದ ಉತ್ತರ

ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಪ್ರಯೋಗಕ್ಕೂ ಮುನ್ನವೇ ಸರ್ಕಾರ ಈ ಲಸಿಕೆಗೆ ಅನುಮತಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಲಸಿಕೆ ಆಯ್ಕೆ ಪ್ರಕ್ರಿಯೆ ಬಗ್ಗೆ ವಿರೋಧಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಲ್ಲಿ ಆ ಲಸಿಕೆಯನ್ನು ಸೈನಿಕರಿಗೆ ಹೋಲಿಕೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ 23 ಸ್ವಯಂಸೇವಕರನ್ನು ತನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಸೇರಿಸಿಕೊಂಡಿದೆ.

ಸ್ಥಳೀಯ ತಯಾರಕ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕ್ರೆಮ್ಲಿನ್ ಬೆಂಬಲಿತ ಸ್ಪುಟ್ನಿಕ್ ವಿ ಭಾರತದಲ್ಲಿ ಪ್ರಯೋಗಗಳಿಗೆ ಒಳಪಟ್ಟಿದೆ.

ಅಹಮದಾಬಾದ್ ಮೂಲದ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಕೂಡ ಸ್ಥಳೀಯ ಕೊವಿಡ್ 19 ಲಸಿಕೆ ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿದೆ.

ಮೊದಲು ಕೊರೊನಾ ಲಸಿಕೆ ಪಡೆಯುವವರು ಯಾರು?

ಮೊದಲು ಕೊರೊನಾ ಲಸಿಕೆ ಪಡೆಯುವವರು ಯಾರು?

ದೇಶದಲ್ಲಿ ಎರಡು ಕೊರೊನಾ ಲಸಿಕೆಗಳಿಗೆ ಅನುಮತಿ ದೊರೆತಿದೆ. ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲು ಕೊರೊನಾ ಲಸಿಕೆ ಸಿಗಲಿದೆ. ಹಾಗೆಯೇ ಮುನ್ನಲೆ ಕಾರ್ಯಕರ್ತರಿಗೂ ಲಸಿಕೆ ಲಭ್ಯವಾಗಲಿದೆ. ಈ ಮೊದಲು 2021ರ ಆಗಸ್ಟ್ ಒಳಗೆ 30 ಕೋಟಿ ಜನರಿಗೆ ಲಸಿಕೆ ವಿತರಿಸಲು ಸರ್ಕಾರ ತೀರ್ಮಾನಿಸಿತ್ತು.

English summary
India’s top drug regulator on Sunday approved Covishield and Covaxin as vaccines for restricted use against Covid-19, paving the way for mass vaccination against the virus that has so far infected over a crore people and killed nearly 1.5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X