ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯ

|
Google Oneindia Kannada News

ದೆಹಲಿ, ಮಾರ್ಚ್ 17: ಜಗತ್ತಿನಾದ್ಯಂತ ಕೊರೊನಾ ವೈರಸ್ ರುದ್ರನರ್ತನ ಮಾಡುತ್ತಿದ್ದು, ಈ ವೈರಸ್ ತಡೆಯಲು ಏನೆಲ್ಲಾ ಮಾಡುವ ಅವಕಾಶ ಇದೆಯೋ ಎಲ್ಲವನ್ನು ಕಾರ್ಯರೂಪಕ್ಕೆ ತರಲಾಗಿದೆ. ಕೊರೊನಾ ಭೀತಿಯಿಂದ ಜಗತ್ತಿನಾದ್ಯಂತ ಅನೇಕ ಕಂಪನಿಗಳು ತಮ್ಮ ಕಚೇರಿಗಳಿಗೆ ಬೀಗ ಹಾಕಿದ್ದು, ಸಿಬ್ಬಂದಿಗಳನ್ನು ಮನೆಯಿಂದಲೇ ಕೆಲಸ ಮಾಡಿ (WORK FROM HOME) ಎಂದು ಸೂಚಿಸಿದೆ.

Recommended Video

David Warner, Aaron Finch question Australian government's coronavirus measures.

ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಭಾರತದ ಬಹುತೇಕ ಕಂಪನಿಗಳು ಪಾಲಿಸುತ್ತಿದೆ. ಆದರೆ, ವರದಿಗಳ ಪ್ರಕಾರ ಭಾರತದಲ್ಲಿ WORK FROM HOME ವರ್ಕೌಟ್ ಆಗ್ತಿಲ್ಲ. ಶೇಕಡಾ 54ರಷ್ಟು ಕಂಪನಿಗಳು ವರ್ಕ್ ಫ್ರಮ್ ಹೋಮ್ ವಿಧಾನ ಹೊಂದಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್

ವರ್ಕ್ ಫ್ರಮ್ ಹೋಮ್‌ಗೆ ಅಗತ್ಯ ತಂತ್ರಜ್ಞಾನ, ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ದೇಶದ ಪ್ರಮುಖ ಐಟಿ ಕಂಪನಿಗಳು, ಸಣ್ಣ ಸಣ್ಣ ಕಂಪನಿಗಳು, ಕೆಲವು ಸರ್ಕಾರಿ ಕಚೇರಿಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಕೆಲಸಗಾರರ ಬಳಿ ವರ್ಕ್ ಫ್ರಮ್ ಹೋಮ್ ಮಾಡಿಸುತ್ತಿದೆ. ಆದರೂ ಇದು ಹಿನ್ನಡೆಯಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಅಷ್ಟಕ್ಕೂ, ಭಾರತದಲ್ಲಿ ವರ್ಕ್‌ ಫ್ರಮ್ ಹೋಮ್ ಏಕೆ ವರ್ಕೌಟ್ ಆಗ್ತಿಲ್ಲ? ಕಾರಣಗಳು ಮುಂದಿದೆ.

ಕಾರ್ಮಿಕರಿಗೆ WFH ಎನ್ನುವುದು ಸವಾಲು

ಕಾರ್ಮಿಕರಿಗೆ WFH ಎನ್ನುವುದು ಸವಾಲು

ವಿಶ್ವಾದ್ಯಂತ ವರ್ಕ್ ಫ್ರಮ್ ಹೋಮ್ ಪಾಲಿಸುತ್ತಿದೆ. ಭಾರತವೂ ಈ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ, ಭಾರತದಲ್ಲಿ WFH ಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಸಂಪನ್ಮೂಲ ಇಲ್ಲವೆಂದು ಪ್ರಮುಖ ಐಟಿ ಸೇವಾ ನಿರ್ವಹಣಾ ಕಂಪನಿಯ ಗಾರ್ಟ್ನರ್ ಹೇಳಿದ್ದಾರೆ. ''ಭಾರತದ ಶೇಕಡಾ 54 ರಷ್ಟು ಕಂಪನಿ ಉದ್ಯೋಗಿಗಳಿಗೆ ಮನೆಗೆ ಕೆಲಸ ಮಾಡಲು ಅಗತ್ಯವಾದ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಹೊಂದಿಲ್ಲ'' ಎಂಬ ವಿಷಯವನ್ನು ಹೊರಹಾಕಿದ್ದಾರೆ.

ಸಣ್ಣ ಕೈಗಾರಿಕ ಕಂಪನಿಗಳ ಸ್ಥಿತಿ ಏನು?

ಸಣ್ಣ ಕೈಗಾರಿಕ ಕಂಪನಿಗಳ ಸ್ಥಿತಿ ಏನು?

ಗೂಗಲ್ ಮತ್ತು ಮೈಕ್ರೋಸಾಫ್ಟ್‌ ಅಂತಹ ಕಂಪನಿಯ ಉದ್ಯೋಗಿಗಳು, ವಿಡಿಯೋ ಕಾನ್ಫರೆನ್ಸ್ ಮತ್ತು ಇತರೆ ಸಾಧನಗಳ ಮೂಲಕ ಕೆಲಸ ಮಾಡುವುದು ಸುಲಭವಾದರೂ, ಐಟಿ-ಅಲ್ಲದ ಕಂಪನಿಗಳು ಮತ್ತು ಸಣ್ಣ ಮತ್ತು ಮಧ್ಯಮ ಕಂಪನಿಗಳ ಕಾರ್ಮಿಕರಿಗೆ ಇಂತಹ ಆಲೋಚನೆ ಬಹಳ ಕಷ್ಟ ಮತ್ತು ಗೊಂದಲ ಉಂಟುಮಾಡಿದೆ ಎಂದು ಗಾರ್ಟ್ನರ್ ಅಭಿಪ್ರಾಯ ಪಟ್ಟಿದ್ದಾರೆ.

ತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕುತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು

ಸಮಸ್ಯೆಗಳು ಒಂದಾ ಎರಡಾ?

ಸಮಸ್ಯೆಗಳು ಒಂದಾ ಎರಡಾ?

ವರ್ಕ್‌ ಫ್ರಮ್ ಹೋಮ್ ಕೆಲಸ ಮಾಡುವ ಕಾರ್ಮಿಕರ ಕಷ್ಟ ಒಂದಾ ಎರಡಾ. ಬಹುತೇಕರು ಹಳೆಯ ಲ್ಯಾಪ್ ಟ್ಯಾಪ್ ಬಳಸುತ್ತಿರುತ್ತಾರೆ, ಯುಪಿಎಸ್ ಬ್ಯಾಕ್‌ಅಪ್‌ಗಳಿರಲ್ಲ, ಕಳಪೆ ನೆಟ್‌ವರ್ಕ್‌ ಮತ್ತು ತಂತ್ರಜ್ಞಾನವನ್ನು ಬಳಸುವ ಬಗ್ಗೆ ಉತ್ತಮ ಜ್ಞಾನ ಇರಲ್ಲ, ಗ್ರೂಪ್ ಚಾಟ್, ವಿಡಿಯೋ ಮೀಟಿಂಗ್, ಜೂಮ್, ಗೂಗಲ್ ಮೀಟ್ ಹೀಗೆ ಸಾಫ್ಟ್ ವೇರ್‌ ಬಗ್ಗೆ ಅರಿವು ಹೊಂದಿರುವುದಿಲ್ಲ. ಇದರಿಂದ ಕಾರ್ಮಿಕರು ಮಾನಸಿಕವಾಗಿ ಗೊಂದಲಕ್ಕೆ ಒಳಗಾಗುತ್ತಾರೆ.

ಕೆಲಸದ ವಾತಾವರಣ ಇರಲ್ಲ

ಕೆಲಸದ ವಾತಾವರಣ ಇರಲ್ಲ

ಕೆಲಸಕ್ಕೆ ಅಗತ್ಯವಾದ ತಂತ್ರಜ್ಞಾನ ಮತ್ತು ಕೆಲಸಕ್ಕೆ ಅವಶ್ಯಕವಾದ ಮೂಲಸೌಕರ್ಯ ಇಲ್ಲದ ಕಾರಣ, ವರ್ಕ್ ಫ್ರಮ್ ಹೋಮ್ ಪರಿಣಾಮಕಾರಿಯಾಗಿಲ್ಲ ಎಂದು ಶೇಕಡಾ 54ರಷ್ಟು ಎಚ್‌ಆರ್‌ಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗಾರ್ಟ್ನರ್ ವರದಿ ಹೇಳುತ್ತಿದೆ.

ಕಚೇರಿಯಲ್ಲಿ ಕೆಲಸ ಮಾಡುವುದೇ ಉತ್ತಮ

ಕಚೇರಿಯಲ್ಲಿ ಕೆಲಸ ಮಾಡುವುದೇ ಉತ್ತಮ

ಮನೆಯಿಂದ ಕೆಲಸ ಮಾಡಲು ಬಹುದೊಡ್ಡ ಸಮಸ್ಯೆಯಾಗುವುದು ಅಂದರೆ ಇಂಟರ್‌ನೆಟ್‌. ಯಾಕಂದ್ರೆ, ಆಫೀಸ್‌ ನಲ್ಲಿ ಕೆಲಸ ಮಾಡುವ ಇಂಟರ್‌ನೆಟ್‌ ಸಹಜವಾಗಿ ವೇಗವಾಗಿರುತ್ತೆ. ಅದರ ಬ್ರಾಡ್‌ಬ್ಯಾಂಡ್ ವೇಗವಾಗಿರುತ್ತೆ. ಆದರೆ, ಮನೆಯಲ್ಲಿ ಕೆಲಸ ಮಾಡುವ ಇಂಟರ್‌ನೆಟ್‌ನಲ್ಲಿ ಅದು ನಿಧಾನಗತಿಯಲ್ಲಿರುತ್ತೆ. ಹಾಗಾಗಿ, ಕಚೇರಿಯೇ ಕೆಲಸಕ್ಕೆ ಉತ್ತಮ ಸ್ಥಳ.

ಭವಿಷ್ಯಕ್ಕೆ ಇದು ಅನುಕೂಲವೇ

ಭವಿಷ್ಯಕ್ಕೆ ಇದು ಅನುಕೂಲವೇ

ಇಂತಹ ಸ್ಥಿತಿಗಳು ಬಂದಾಗ ಸಂಪೂರ್ಣವಾಗಿ ಕೆಲಸ ನಿಲ್ಲಿಸುವ ಬದಲು, ವರ್ಕ್‌ ಫ್ರಮ್ ಹೋಮ್ ಕುರಿತು ಐಟಿ ಅಲ್ಲದ ಕಂಪನಿಗಳು ಚಿಂತಿಸಬೇಕಾದ ಅವಶ್ಯಕತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ. ಉತ್ಪಾದನೆಯಲ್ಲಿ ತಡವಾಗಬಹುದು. ಆದರೂ ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳು ಬಂದಾಗ, ಅದನ್ನು ಎದುರಿಸಿ ಗೆಲ್ಲಬೇಕಾಗುವುದು ಅವಶ್ಯಕ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

English summary
Coronavirus Effect: 54% Of indian companies don’t have the means to work from home, says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X