Non Veg Milk: ಅಮೆರಿಕಾದಲ್ಲಿ ಮಾಂಸ, ರಕ್ತ ಕುಡಿಯುವ ಹಸುಗಳು; ಭಾರತ- ಅಮೆರಿಕ ನಡುವೆ ಜೋರಾಯ್ತು ‘ನಾನ್ ವೆಜ್ ಹಾಲು’ ವಿವಾದ
ಭಾರತದಲ್ಲಿ ಹೈನುಗಾರಿಗೆ ದೊಡ್ಡ ಉದ್ಯಮ. ಭಾರತದ ಹಳ್ಳಿಗಾಡಿನ ಜನರು ಹಸುಗಳನ್ನು ಜೀವನೋಪಾಯಕ್ಕಾಗಿ ಸಾಕುತ್ತಿದ್ದಾರೆ. ಇದೀಗ ಅಮೇರಿಕಾದಿಂದ ಹಾಲನ್ನ ಆಮದು ಮಾಡಿದ್ರೆ, ಹೈನುಗಾರಿಕೆಯನ್ನ ನಂಬಿರುವ ರೈತರಿಗೆ ಮೋಸವಾದಂತಾಗುತ್ತದೆ. ಭಾರತದಲ್ಲಿ ಹಸುವಿನ ಹಾಲಿಗೆ ಪಾವಿತ್ರ್ಯತೆ ಇದೆ. ಭಾರತದಲ್ಲಿ ಹಸುವನ್ನ ಗೋಮಾತೆ ಎಂದು ಪೂಜಿಸುತ್ತಾರೆ. ದೇವರ ನೈವೇದ್ಯಕ್ಕೂ ಹಸುವಿನ ಹಾಲು ಬೇಕು. ಆದರೆ ಭಾರತದಂತೆ ಅಮೇರಿಕಾದ ಹಸುಗಳು ಸಾದು ಹಸುಗಳಲ್ಲ. ಅಮೇರಿಕಾದ ಹಸುಗಳು ಮಾಂಸ ತಿನ್ನುವ, ರಕ್ತ ಕುಡಿಯುವ ಹಸುಗಳಾಗಿವೆ.
ಭಾರತಕ್ಕೆ ಅಮೇರಿಕಾ ಮಾಂಸ ತಿನ್ನುವ ಹಾಗೂ ರಕ್ತ ಕುಡಿಯುವ ಹಸುಗಳ ಹಾಲನ್ನ ರಪ್ತು ಮಾಡುತ್ತಿದೆ. ಮಾಂಸ ತಿನ್ನುವ ಹಸುವಿನ ಹಾಲಿನ ರಪ್ತಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಭಾರತ ಹಾಗೂ ಅಮೇರಿಕಾದ ವಾಣಿಜ್ಯ ಒಪ್ಪಂದ ತೀವ್ರ ಕಂಗಟ್ಟಾಗಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ ಹಸುಗಳಿಗೆ ಹಂದಿ, ಮೀನು, ಕೋಳಿ, ಕುದುರೆ, ಬೆಕ್ಕು, ನಾಯಿಗಳ ಭಾಗಗಳನ್ನೊಳಗೊಂಡ ಆಹಾರವನ್ನು ನೀಡಲಾಗುತ್ತದೆ. ಈ ಆಹಾರದ ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ಅಮೇರಿಕಾದ ಹಸುಗಳಿಗೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಹಸುಗಳಿಗೆ ಈ ರೀತಿಯಾದ ಆಹಾರ ನೀಡಲ್ಲ. ಹಾಗಾಗಿ ಅಮೆರಿಕದ ಹಾಲನ್ನು ಮಾಂಸಾಹಾರಿ ಎಂದು ಕರೆಯಲಾಗುತ್ತಿದೆ.

ಅಮೆರಿಕಾ ಭಾರತಕ್ಕೆ ತಮ್ಮ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಮೊದಲಾದವುಗಳನ್ನು ನೇರವಾಗಿ ರಫ್ತು ಮಾಡಲು ಬಯಸುತ್ತಿದೆ. ಆದರೆ ಭಾರತ ಮಾತ್ರ ಇದಕ್ಕೆ ಒಪ್ಪು ಗೊಡುತ್ತಿಲ್ಲ. ಏಕೆಂದರೆ ಅಮೆರಿಕ ಕಳಿಸಲು ಮುಂದಾಗಿರುವುದು ನಾನ್ ವೆಜ್ ಹಾಲು. ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ. ಹೀಗಾಗಿ, ಹಸುವಿನ ಹಾಲಿಗೆ ಭಾರೀ ಪವಿತ್ರತೆ ಇದೆ. ಹೀಗಾಗಿಯೇ ಭಾರತ ಮಾಂಸಾಹಾರಿ ಹಾಲನ್ನು ಆಮದು ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ.
ಭಾರತದೊಂದಿಗೆ ಏರ್ಪಡುತ್ತಿರುವ ಹಲವು ಒಪ್ಪಂದಗಳ ಪೈಕಿ ಅಮೆರಿಕ, ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತ ಬೇಡಿಕೆಯೊಂದನ್ನು ಇರಿಸಿದೆ. ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಮುಕ್ತವಾಗಿಸಲು ಭಾರತ ಹಿಂದೇಟು ಹಾಕಿದೆ. ಭಾರತೀಯರು ಮಾಂಸಹಾರಿ ಹಾಲಿನ ಉತ್ಪನ್ನ ಸ್ವೀಕರಿಸಲ್ಲ. ಬೇಕಿದ್ರೆ ಸಸ್ಯಹಾರಿ ಹಾಲನ್ನು ಮಾತ್ರ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವದಾಗಿ ಭಾರತ ಹೇಳಿದೆ. ಭಾರತದಲ್ಲಿ ಹಾಲು ಮತ್ತು ತುಪ್ಪ ದೈನಂದಿನ ಜೀವನ ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾಂಸ ಮತ್ತು ರಕ್ತ ಸೇವಿಸಿದ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವನ್ನು ಭಾರತೀಯರು ಒಪ್ಪಿಕೊಳ್ಳಲ್ಲ ಎಂಬುವುದು ಕೇಂದ್ರ ಸರ್ಕಾರ ಹೇಳಿದೆ.
ನಾನ್ ವೆಜ್ ಹಾಲು ಎಂದರೆ ಏನು?
ಭಾರತದಲ್ಲಿ ಹಸುಗಳನ್ನ ಗೋ ಮಾತೆ ಎಂದು ಪೂಜಿಸಲಾಗುತ್ತದೆ. ಭಾರತರ ಹಸುಗಳು ಸಸ್ಯಹಾರಿ. ಆದರೆ, ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಬೇರೆ ಹಸುಗಳ ಮಾಂಸವನ್ನು ಸಹ ತಿನ್ನುತ್ತವೆ. ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ನೀಡಲಾಗುತ್ತದೆ. ಹಂದಿ, ಮೀನು, ಕೋಳಿ, ಕುದುರೆ, ಬೆಕ್ಕು, ನಾಯಿಗಳ ಭಾಗಗಳನ್ನೊಳಗೊಂಡ ಆಹಾರವನ್ನಾಗಿ ನೀಡಲಾಗುತ್ತದೆ. ಈ ವಿಧಾನ ವೆಚ್ಚದಾಯಕದ ಜೊತೆ ಪರಿಣಾಮಕಾರಿಯೂ ಆಗಿದೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆದೆ.
-
ರಾಜ್ಯದ 3,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿ: 'ಸಿಎಂಗೆ ದೋಸೆ ಮಜಾ, ಮಕ್ಕಳಿಗೆ ಜೀವ ಭಯ' ಎಂದ ಆರ್. ಅಶೋಕ್ -
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
ಗೃಹ ಸಚಿವರ 'ಸಿದ್ದರಾಮಯ್ಯ ಇನ್ನೂ 2 ವರ್ಷ ಸಿಎಂ' ಹೇಳಿಕೆ: ಡಿಕೆ ಸುರೇಶ್ ಹೇಳಿದ್ದೇನು? -
ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು -
Raghav Chadha: ರಾಘವ್ ಚಡ್ಡಾ: ಉಲ್ಕಾ ರಾಜಕೀಯಕ್ಕೆ ಎಷ್ಟು ಕಿಮ್ಮತ್ತು: ರಾಜಾರಾಂ ತಲ್ಲೂರು ಬರಹ -
IPL ವಿಐಪಿ ಟಿಕೆಟ್ ದುರ್ಬಳಕೆ ಆಗಿಲ್ಲ: ಶಾಸಕರ ಕುಟುಂಬಸ್ಥರು ಪಂದ್ಯ ನೋಡಿದರೆ ತಪ್ಪೇನು; ಪರಮೇಶ್ವರ್ ಪ್ರಶ್ನೆ -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ











Click it and Unblock the Notifications