ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ
ನವದೆಹಲಿ,
ಏ. 27: ನೇಪಾಳದಲ್ಲಿ ಶನಿವಾರ(ಏ.25) ಭೂಕಂಪ ಸಂಭವಿಸಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ನೈಸರ್ಗಿಕ ವಿಕೋಪಕ್ಕೆ ಯಾರೂ ಹೊಣೆಗಾರರಾಗುವುದಿಲ್ಲ. ಆದರೆ ಅದು ತಂದೊಡ್ಡುವ ಆತಂಕಕ್ಕೆ ಎಲ್ಲರೂ ಭಾಜನರಾಗಬೇಕಾಗುತ್ತದೆ.[ href="/news/international/emergency-numbers-helpline-earthquake-nepal-india-tremors-093393.html">ಸಹಾಯವಾಣಿ ಇಲ್ಲಿದೆ] id="toptextpromo"> id='are-slot-1' class='oiad oi-axt oiadv'>ಅಷ್ಟಕ್ಕೂ
ಈ ಸುನಾಮಿ, ನೆರೆಹಾವಳಿ, ಅನಾವೃಷ್ಟಿ, ಭೂಕಂಪಗಳು ಉಂಟಾಗಲು ವಿಭಿನ್ನ ಕಾರಣಗಳಿರುತ್ತದೆ. ಮಾನವನ ದುರಾಸೆ ನಿಸರ್ಗದ ಮೇಲೆ ಉಂಟುಮಾಡುತ್ತಿರುವ ಪರಿಣಾಮ ಯೋಚಿಸಲೂ ಅಸಾಧ್ಯವಾದುದು. ಹವಾಮಾನ ವೈಪರಿತ್ಯಕ್ಕೆ ನಾವೆಲ್ಲರೂ ಹೊಣೆಗಾರಾಗಬೇಕಾಗುತ್ತದೆ. ಹಾಗಾದರೆ ಈ ಭೂಕಂಪನಕ್ಕೆ ನಿಜ ಕಾರಣಗಳೇನು? ಭಾರತದ ಯಾವ ಪ್ರದೇಶಗಳಲ್ಲಿ ಭೂಕಂಪ ಹೆಚ್ಚಾಗಿ ಕಂಡುಬರುತ್ತದೆ ಎಂಬುದಕ್ಕೆ ವೈಜ್ಞಾನಿಕ ನೆಲೆಗಟ್ಟಿನ ಉತ್ತರ ಇಲ್ಲಿದೆ.[ನೇಪಾಳದ ಭೂಕಂಪದ ತೀವ್ರತೆ ಹೇಗಿತ್ತು?] id='are-slot-2' class='oiad oi-axt oiadv'>
ಭೂಮಿಯಲ್ಲಿನ ಪದರಗಳೆಷ್ಟು?
ಭೂಮಿ ಸಾಮಾನ್ಯವಾಗಿ ಮೂರು ಪದರಗಳನ್ನು ಹೊಂದಿರುತ್ತದೆ. ಭೂಮಿಯ ಮೇಲ್ಮೈನಿಂದ ಹೊರಕವಚ ಸುಮಾರು 30 ಕಿಮೀ ಆಳದವರೆಗೆ ಚಾಚಿಕೊಂಡಿರುತ್ತದೆ, ನಂತರದ್ದು ಗಟ್ಟಿಯಾದ ಕವಚವಾಗಿದ್ದು 2,900 ಕಿಮೀ ಆಳದವರೆಗಿರುವುದು. ಕೊನೆಯ ಪದರ ಅಥವಾ ಮಧ್ಯದ ಪದರ 3.500 ಕಿಮೀ ವ್ಯಾಪ್ತಿ ಹೊಂದಿರುತ್ತದೆ.

ಏಳು ವಿಭಾಗವಾಗಿ ವಿಂಗಡನೆ
ಈ ಪದರಗಳನ್ನು ಏಳು ವಿಭಾಗವಾಗಿ ವಿಂಗಡನೆ ಮಾಡಲಾಗಿದೆ. ಆಫ್ರಿಕನ್, ಆಸ್ಟ್ರೇಲಿಯನ್, ಯುರೇಷಿಯನ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಪೆಸಿಫಿಕ್ ಎಂದು ಕರೆಯಲಾಗುತ್ತದೆ. ಈ ಪದರಗಳಲ್ಲಿ ಉಂಟಾಗುವ ಬದಲಾವಣೆಗಳು ಭೂ ಕಂಪನಕ್ಕೆ ಕಾರಣವಾಗುತ್ತವೆ.

ಭೂ ಕಂಪನ ಅಳೆಯುವುದು ಹೇಗೆ?
ಭೂ ಕಂಪನದ ಅಲೆಗಳು ಹೊರಹೊಮ್ಮಿಸುವ ಶಕ್ತಿ ಆಧಾರದಲ್ಲಿ ತೀವ್ರತೆಯನ್ನು ಲೆಕ್ಕ ಹಾಕಲಾಗುತ್ತದೆ. ಬಹಳ ಕಾಲದಿಂದ ಭೂಕಂಪವನ್ನು ರಿಕ್ಟರ್ ಮಾಪಕದಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಈಗ ಸಿಸ್ಮೋಮೀಟರ್ ಗಳನ್ನು ಬಳಸಲಾಗುತ್ತಿದೆ.

ಹಿಮಾಲಯ ತಪ್ಪಲಿನಲ್ಲಿ ಭೂಕಂಪ ಹೆಚ್ಚು?
ಹಿಮಾಲಯ ಇಂಡೋ-ಆಸ್ಟ್ರೇಲಿಯನ್ ವಿಭಾಗದಲ್ಲಿ ಬರುತ್ತದೆ. ಹಿಮಾಲಯದ ಭೂಭಾಗ ಉತ್ತರ ಈಶಾನ್ಯ ಕಡೆಗೆ ಸಂಚಾರ ಮಾಡುತ್ತಿದೆ. ಅಂದರೆ ಯುರೇಷಿಯನ್ ಪದರದ ಕಡೆಗೆ ತೆರಳುತ್ತಿದೆ. ಈ ಸಂಚಾರದ ಬೆಳವಣಿಗೆಯೇ ಭೂ ಕಂಪನಕ್ಕೆ ಕಾರಣವಾಗುತ್ತದೆ.

ಭೂಮಿಯ ಯಾವ ಭಾಗದಲ್ಲಿ ಭೂಕಂಪನ ಜಾಸ್ತಿ?
ಫೆಸಿಫಿಕ್ ಪದರವನ್ನು ಭೂ ಕಂಪನ್ ಮಹಾತಾಯಿ ಎಂದೇ ಕರೆಯಲಾಗಿದೆ. ಕುದುರೆ ಲಾಳಾಕೃತಿಯ ಭಾಗದಲ್ಲಿ ಶೇ. 90 ರಷ್ಟು ಭೂಕಂಪನಗಳು ಘಟಿಸುತ್ತವೆ.

ಇಲ್ಲೂ ಭೂಕಂಪನ ಕಡಿಮೆಯೇನಿಲ್ಲ
ಇದರ ನಂತರ ಆಗಮಿಸುವ ಆಲ್ಫಿಕೇಡ್ ಬೇಲ್ಟ್ ನಲ್ಲಿ ಅಂದರೆ ಜಾವಾ, ಸಮಂತ್ರಾ, ಹಿಮಾಲಯ, ಮೇಡಿಟೆರಿಯನ್ ಮತ್ತು ಅಟ್ಲಾಂಟಿಕ್ ಸಮುದ್ರ ಭಾಗದಲ್ಲಿ ಪರಿಣಾಮ ಹೆಚ್ಚು.

ಭಾರತದ ಸೂಕ್ಷ್ಮ ಪ್ರದೇಶಗಳು ಯಾವವು?
ಭಾರತದ ಹವಾಮಾನ ಇಲಾಖೆ ಭೂ ಕಂಪನಕ್ಕೆ ಸಂಬಂಧಿಸಿ ಭಾರತದ ಸೂಕ್ಮ್ಮ ಪ್ರದೇಶಗಳನ್ನು 2 ವಿಭಾಗವಾಗಿ ವಿಂಗಡಿಸಿದೆ. ಅಲ್ಲದೇ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತಾ ಬಂದಿದೆ.

ಜಮ್ಮು ಕಾಶ್ಮೀರ ಡೇಂಜರ್ ಝೋನ್
ಅತಿ ಹೆಚ್ಚು ಅಪಾಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಣ್ ಆಫ್ ಕಚ್, ಬಿಹಾರದ ಉತ್ತರ ಭಾಗ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳನ್ನು ಅತು ಹೆಚ್ಚು ಅಪಾಯ ಎದುರಿಸುವ ತಾಣಗಳಾಗಿ ಗುರುತಿಸಲಾಗಿದೆ.

ಎರಡನೇ ಝೋನ್ ಯಾವುದು?
ಜಮ್ಮು ಕಾಶ್ಮೀರದ ದಕ್ಷಿಣ ಭಾಗ, ದೆಹಲಿ, ಸಿಕ್ಕಿಂ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಗುಜರಾತ್ ನ ಕೆಲ ಭಾಗಗಳು ಕಡಿಮೆ ಭೂಕಂಪದ ಅಪಾಯ ಎದುರಿಸುತ್ತವೆ.












Click it and Unblock the Notifications