ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಅಂದರೆ ಏನು, ಜನಸಾಮಾನ್ಯರ ನಿರೀಕ್ಷೆ-ಕುತೂಹಲಗಳೇನು?

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಕೇಂದ್ರ ಬಜೆಟ್ ನ ಕಡೆಗೆ ಇಡೀ ದೇಶವೇ ನಿರೀಕ್ಷೆ ಕಣ್ಣು ನೆಟ್ಟು ಕೂತಿದೆ. ಇಂಥ ಸನ್ನಿವೇಶದಲ್ಲಿ ಬಜೆಟ್ ಹೀಗೇ ಅಲ್ಲವೇ ಎಂದು ತಿಳಿಯುವ ಪ್ರಯತ್ನ ಇದು. ದೇಶವೊಂದರ ಅಂದಾಜು ಆದಾಯ ಮತ್ತು ಖರ್ಚು-ವೆಚ್ಚವನ್ನು ಜನರ ಮುಂದಿಡುವುದೇ ಬಜೆಟ್. ನೆನಪಿರಲಿ, ಈ ಎಲ್ಲ ಅಂಕಿಗಳು ಅಂದಾಜು ಮಾಡಿರುವಂಥವು.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

ಉದಾಹರಣೆಗೆ ಒಂದು ಮನೆ ಅಂದುಕೊಳ್ಳೋಣ. ಆ ಮನೆಯ ಆದಾಯ ಮೂಲಗಳು ಇರುತ್ತವೆ. ಒಬ್ಬರು 10, ಮತ್ತೊಬ್ಬರು 30, ಇನ್ನೊಬ್ಬರು 50 ಸಾವಿರ ದುಡಿಯಬಹುದು. ಒಂದಷ್ಟು ಹಣ ಠೇವಣಿ ಇಟ್ಟಿರಬಹುದು. ಅದರಿಂದ ಒಂದಿಷ್ಟು ಬಡ್ಡಿ ಬರುತ್ತಿರಬಹುದು. ಎಲ್ಲ ಸೇರಿ ಆ ವರ್ಷಕ್ಕೆ ಇಷ್ಟು ಎಂಬುದು ಆ ಮನೆಯ ಒಟ್ಟು ಆದಾಯ.[ಜೇಟ್ಲಿ ಬಜೆಟ್ 2017 : ತೆರಿಗೆದಾರರ 10 ನಿರೀಕ್ಷೆಗಳು]

What is budget, what are the expectations of common man?

ಅದರಲ್ಲಿ ಮನೆಯ ತಿಂಗಳಿನ ದಿನಸಿ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ, ಮನೆ ಹಿರಿಯರ ಔಷಧ ಖರ್ಚು, ಮನೆಯ ಬಾಡಿಗೆ, ಚೀಟಿ ಹಣ, ಇನ್ಷೂರೆನ್ಸ್, ವಾಹನ ಸಾಲದ ಕಂತು...ಹೀಗೆ ನಾನಾ ಖರ್ಚುಗಳಿಗೆ, ಇನ್ವೆಸ್ಟ್ ಮೆಂಟ್ ಗಳಿಗೆ, ಉಳಿತಾಯಕ್ಕೆ ಇಷ್ಟಿಷ್ಟು ಎಂದು ಅಂದುಕೊಂಡಿರುತ್ತಾರೆ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

ಅದೇ ರೀತಿ ಸರಕಾರ ಕೂಡ. ತೆರಿಗೆಗಳು, ಸರಕಾರಿ ಕಂಪನಿಗಳಿಂದ ಬಂದ ಲಾಭ, ಡಿವಿಡೆಂಡ್ ಹೀಗೆ ನಾನಾ ಮೂಲಗಳಿಂದ ಬರುವ ಹಣವನ್ನು ಆದಾಯ ಎಂದು ಪರಿಗಣಿಸುತ್ತದೆ. ಇನ್ನು ಅದರ ಖರ್ಚು ಹೀಗೆ ಮಾಡುತ್ತೇವೆ ಎಂಬ ಲೆಕ್ಕಾಚಾರವನ್ನು ಮುಂದಿಡುತ್ತವೆ. ಈ ವರೆಗೆ ಖರ್ಚನ್ನು ಯೋಜನಾ ವೆಚ್ಚ ಮತ್ತು ಯೋಜನೇತರ ವೆಚ್ಚ ಎಂದು ವರ್ಗೀಕರಣ ಮಾಡಲಾಗುತ್ತಿತ್ತು. ಈ ವರ್ಷದಿಂದ ಆದಾಯ ವೆಚ್ಚ, ಬಂಡವಾಳ ವೆಚ್ಚ ಎಂದು ಕರೆಯಲಾಗುತ್ತದೆ.[ಬಜೆಟ್ ಅಧಿವೇಶನ ಆರಂಭ, ಸದನ ಉದ್ದೇಶಿಸಿ ಪ್ರಣಬ್ ಭಾಷಣ]

ಅಂದರೆ, ಕೆಲವು ಖರ್ಚುಗಳು ಬಂಡವಾಳವಾಗಿ ಮಾರ್ಪಡುತ್ತದೆ. ಆದರೆ ಕೆಲವೊಮ್ಮೆ ನಿರೀಕ್ಷಿಸಿದ ಆದಾಯ ಬರದೇ ಇರಬಹುದು. ಉದಾಹರಣೆಗೆ ಗುಜರಾತ್ ನಲ್ಲಾದ ಭೂಕಂಪ. ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದ ಆ ರಾಜ್ಯದಲ್ಲಾದ ಅನಾಹುತ ದೇಶದ ಮೇಲೆ ಪರಿಣಾಮ ಬೀರಿತ್ತು. ಅದೇ ರೀತಿ ಸಂಬಳ ಹೆಚ್ಚಳ ಮಾಡಿದ್ದರಿಂದ ಸರಕಾರಕ್ಕೆ ಇಷ್ಟು ಹೊರೆ ಎಂಬ ಸುದ್ದಿ ಗಮನಿಸಿರುತ್ತೀರಾ.[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]

ಅದರರ್ಥ ಇಷ್ಟೇ. ಈ ವೆಚ್ಚ ಬಜೆಟ್ ಮಾಡುವ ವೇಳೆಯಲ್ಲಿ ಸರಕಾರದ ಅಂದಾಜು ಪಟ್ಟಿಯಲ್ಲಿ ಇರಲಿಲ್ಲ. ಅದೀಗ ಹೊರೆಯಾಗುತ್ತದೆ. ಅದೇ ರೀತಿ ಯಾವುದೇ ಅನಿರೀಕ್ಷಿತ ಆದಾಯ ಸರಕಾರಕ್ಕೆ ಬರಬಹುದು. ಅದು ಕೂಡ ಬಜೆಟ್ ವೇಳೆ ನಿರೀಕ್ಷೆ ಮಾಡಿರದಿದ್ದರೆ ಅದು ಹೆಚ್ಚುವರಿ ಆದಾಯ. ಅಂದಹಾಗೆ ಬಜೆಟ್ ಒಂದೇ ವರ್ಷದ ಅವಧಿಯದು. ಆ ವೇಳೆ ಮುಂದಿನ ವರ್ಷಗಳಲ್ಲಿ ಇಂತಿಷ್ಟು ಹಣ ಮೀಸಲಿರಿಸುವ ಉದ್ದೇಶ ಇದೆ ಎಂದಷ್ಟೇ ಹೇಳಲು ಸಾಧ್ಯ.[ಆರ್ಥಿಕ ಸಮೀಕ್ಷೆ: ವ್ಯಾಪಾರ-ಜಿಡಿಪಿ ಪ್ರಮಾಣ, ಚೀನಾವನ್ನು ಹಿಂದಿಕ್ಕಿದ ಭಾರತ]

ಆದಾಯ ತೆರಿಗೆ ಮಿತಿ ಹೆಚ್ಚಳ ಆಗಬಹುದೇ? ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಬೆಲೆ ಮೇಲೆ ಬಜೆಟ್ ಪ್ರಭಾವ ಏನು? ಗೃಹ-ವಾಹನ ಸಾಲ ಬಡ್ಡಿ ದರ ಇಳಿಕೆ ಅಗಬಹುದೇ? ಗೃಹ ಬಳಕೆ ವಸ್ತುಗಳ ಬೆಲೆ ಇಳಿಯುತ್ತದೋ, ಏರಿಕೆ ಆಗುತ್ತದೋ? ಕೃಷಿಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶ ಇದೆಯಾ? ಶಿಕ್ಷಣ, ವೈದ್ಯಕೀಯ ವೆಚ್ಚದಲ್ಲಿ ಇಳಿಕೆ ಆಗಬಹುದೇ? ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಆಗುವಂಥ ಯೋಜನೆ ಬರುತ್ತದಾ? ನಮ್ಮ ಪ್ರಶ್ನೆಗಳು ಇಂಥವೇ ಅಲ್ಲವೆ?[ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]

English summary
Union budget presents on February 1st. Here is an explainer, What is budget, what are the expectations of common man?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X