ಎನ್ ಡಿಎ ಸಂಪುಟ ವಿಸ್ತರಣೆ, ಡಿವಿಎಸ್ ಸೇಫ್, ದೇಕಾಗೆ ಚಾನ್ಸ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 04: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್ ಆಗಿದೆ. ನೂತನ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ಸೋಮವಾರ ಕಳಿಸಲಾಗುವುದು, ಡಿಜಿ ಪಿಐಬಿ ಟ್ವೀಟ್ ಪ್ರಕಾರ ಮಂಗಳವಾರ 11 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದೆ. ಸದ್ಯದ ಮಾಹಿತಿ ಪ್ರಕಾರ, ಡಿವಿ ಸದಾನಂದ ಗೌಡ ಅವರು ಸೇಫ್ ಆಗಿದ್ದಾರೆ.

ನಿರೀಕ್ಷೆಯಂತೆ ಉತ್ತರಪ್ರದೇಶ ಹಾಗೂ ಇತರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ರಣಕಹಳೆ ಊದಿರುವುದರಿಂದ ಎನ್ ಡಿಎ ಕೂಡಾ ತನ್ನ ಕಾರ್ಯತಂತ್ರ ಆರಂಭಿಸಿದೆ. ಮೋದಿ ಅವರು ತಮ್ಮ ಸಂಪುಟ ವಿಸ್ತರಣೆಗೆ ಕೆಲವು ಆಂಶಗಳನ್ನು ಗಮನದಲ್ಲಿಟ್ಟುಕೊಂಡಿದ್ದು, ಸರಿಯಾದ ಕಾರ್ಯನಿರ್ವಹಣೆ ಮಾಡದ ಸಚಿವರನ್ನು ಸಂಪುಟದಿಂದ ತೆಗೆದು ಹಾಕಲು ಮುಂದಾಗಿದ್ದಾರೆ. ಉತ್ತರಪ್ರದೇಶಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ. [ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯಿಂದ ಮುರಳಿ ಮನೋಹರ್ ಜೋಶಿ ಅಭ್ಯರ್ಥಿ?]

What to expect from the Cabinet reshuffle tomorrow

ಕ್ರೀಡಾ ಖಾತೆಯ ರಾಜ್ಯ ಸಚಿವ ಸರಬಾನಂದ ಸೋನೋವಾಲ್ ಅವರು ಅಸ್ಸಾಂ ಸಿಎಂ ಆಗಿದ್ದಾರೆ. ಸಮಾಜ ಕಲ್ಯಾಣ ರಾಜ್ಯ ಸಚಿವ ವಿಜಯ್ ಸಂಪ್ಲಾರನ್ನು ಪಂಜಾಬ್​ನ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಎರಡು ಸ್ಥಾನವನ್ನು ತುಂಬಬೇಕಿದೆ.[ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?]

ಬಿಹಾರದ ಸಂಸದ ಗಿರಿರಾಜ್ ಸಿಂಗ್ ಹುದ್ದೆಗೆ ಕುತ್ತು ಬರುವ ಸಾಧ್ಯತೆಯಿದೆ. ಇನ್ನು ಅಲ್ಪಸಂಖ್ಯಾತ ಕೋಟಾದಡಿ ಸಚಿವ ಹುದ್ದೆ ಗಿಟ್ಟಿಸಿದ್ದ ನಜ್ಮಾ ಹೆಫ್ತುಲ್ಲಾ ಉಪರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿರುವುದರಿಂದ ಅವರನ್ನೂ ಸಚಿವ ಸ್ಥಾನದಿಂದ ತೆರವುಗೊಳಿಸುವ ಸಾಧ್ಯತೆಯಿದೆ. ಜೊತೆಗೆ ನಿಹಾಲ್ ಚಂದ್ ಅವರ ಸ್ಥಾನವೂ ಅಲುಗಾಡುತ್ತಿದೆ.[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]

What to expect from the Cabinet reshuffle tomorrow

ಸಚಿವ ಸ್ಥಾನ ಆಕಾಂಕ್ಷಿಗಳು: ಅಲಹಾಬಾದಿನ ಸಂಸದ ಶ್ಯಾಮ ಚರಣ ಗುಪ್ತ, ಜಬಲಪುರ್ ನ ಸಂಸದ ರಾಕೇಶ್ ಸಿಂಗ್, ಬಿಕಾನೇರ್ ಸಂಸದ ಅರ್ಜುನ್ ರಾಮ್ ಮೆಘ್ ವಾಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂ ಮಾಥುರ್, ವಿನಯ್ ಸಹಸ್ರಬುದ್ಧಿ.[ಮೋದಿ ಸಂಪುಟದ ಹೊಸ ಸಚಿವರ ಖಾತೆಗಳು]

ನಿರೀಕ್ಷೆ ಏನಿದೆ? : ಸೋನೋವಾಲ್ ಅವರ ಸ್ಥಾನಕ್ಕೆ ರಮನ್ ದೇಕಾ ಅವರು ಬರಲಿದ್ದಾರೆ. ಮತ್ತೊಬ್ಬರು ಉತ್ತರ ಪ್ರದೇಶದಿಂದ ಸಂಪುಟ ಸೇರಲಿದ್ದಾರೆ.75ಕ್ಕೂ ಅಧಿಕ ವಯಸ್ಸಿನ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ನಜ್ಮಾ ಹೆಫ್ತುಲ್ಲಾ ಜಾಗದಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬರಲಿದ್ದಾರೆ. ವಾಣಿಜ್ಯ, ರಕ್ಷಣಾ, ಗೃಹ ಹಾಗೂ ವಿದೇಶಾಂಗ ಖಾತೆಗಳು ಮಾತ್ರ ಭದ್ರವಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The much spoke about cabinet reshuffle is likely to take place tomorrow. The list is expected to be sent to Rashtrapathi Bhavan today following which preparations for the swearing in ceremony will have to be made. The DG PIB had tweeted that the cabinet expansion would take place tomorrow at 11 AM.
Please Wait while comments are loading...