ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಸಳೆ ಬುದ್ಧಿಯ ಪಾಕ್ ಏಜೆಂಟರು 'ಮೀನು ತಿಂದೆ' ಅಂದರೆ ಏನರ್ಥ?

By ವಿಕಾಸ್ ನಂಜಪ್ಪ
|
Google Oneindia Kannada News

ಗೂಢಚಾರಿಕೆಯಲ್ಲಿ ಸಂಕೇತಾಕ್ಷರಗಳನ್ನು ಬಳಸುವುದು ಬಹಳ ಹಿಂದಿನಿಂದ ಇರುವ ತಂತ್ರ. ಬಿಸಿ, ತಣ್ಣಗೆ ಹಾಗೂ ಗಾಳಿ ಎಂಬೆಲ್ಲ ಪದಗಳನ್ನು ಬಿಎಸ್ ಎಫ್, ಸೈನ್ಯ ಹಾಗೂ ವಾಯು ಸೇನೆ ಎಂಬರ್ಥದಲ್ಲಿ ಐಎಸ್ ಐ ಏಜೆಂಟರು ಬಳಸುತ್ತಾರೆ ಎಂಬ ಸಂಗತಿ ನಿಮಗೆ ಗೊತ್ತೆ?

ಪಾಕಿಸ್ತಾನದ ಐಎಸ್ ಐ ಏಜೆಂಟರು ಭಾರತದಲ್ಲಿ ಕೆಲಸ ಮಾಡುವಾಗ ತಮ್ಮನ್ನು ನಿಯಂತ್ರಿಸುವ ಅಧಿಕಾರಿಯ ಜೊತೆಗೆ ನಡೆಸುವ ಸಂಭಾಷಣೆಗೆ ಭಾರತದ ಗುಪ್ತಚರ ಇಲಾಖೆಯ ಕಿವಿಗಳು ತೆರೆದುಕೊಂಡಿರುತ್ತವೆ. ಗೂಢಚಾರಿಕೆ ಮಾಡುವವರ ಸಂಭಾಷಣೆ ಬಿಡಿಸುವಷ್ಟು, ತಿಳಿಯುವಷ್ಟು ಸರಳವಾಗಿರುವುದಿಲ್ಲ.

ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ

ಭಾರತದಲ್ಲಿ ಕೆಲಸ ಮಾಡುವ ಐಎಸ್ ಐ ಏಜೆಂಟರು ಬಳಸುವ ಸಂಕೇತಗಳು ಬಹಳ ಆಸಕ್ತಿಕರವಾಗಿವೆ. ದೇಶದ ಗುಪ್ತಚರ ದಳಕ್ಕೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಈ ರೀತಿಯ ರಹಸ್ಯವಾದ ಪದಗಳು ಬಳಸಲಾಗುತ್ತವೆ.

ಕಾಬೂಲ್ ಸ್ಫೋಟದ ರೂವಾರಿ ಪಾಕ್: ಆಫ್ಘನ್ ಗುಪ್ತಚರ ಇಲಾಖೆಕಾಬೂಲ್ ಸ್ಫೋಟದ ರೂವಾರಿ ಪಾಕ್: ಆಫ್ಘನ್ ಗುಪ್ತಚರ ಇಲಾಖೆ

ಎರಡು ವರ್ಷದ ಹಿಂದೆ ಪ್ರಕರಣವೊಂದನ್ನು ಭೇದಿಸುವಾಗ ತುಂಬ ಅಪರೂಪ ಎನಿಸುವಂಥ ಸಂಕೇತಗಳು ಗುಪ್ತಚರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದವು. ಆ ಸಂಭಾಷಣೆಯನ್ನು ಮೊದಲ ಬಾರಿ ಕೇಳಿಸಿಕೊಂಡ ಅಧಿಕಾರಿಯೇ ಹೇಳಿದಂತೆ, 'ಮೊದಲಿಗೆ ಆ ವ್ಯಕ್ತಿಗೆ ಗಂಭೀರ ಸಮಸ್ಯೆ ಇದೆ" ಎಂದುಕೊಂಡರಂತೆ.

ವೈದ್ಯರು, ತೊಂದರೆ...ಏನಿದು?

ವೈದ್ಯರು, ತೊಂದರೆ...ಏನಿದು?

ಆ ಸಂಭಾಷಣೆ ಹೀಗಿತ್ತು: "ನಾನು ವೈದ್ಯರ ಹತ್ತಿರ ಹೋಗಿದ್ದೆ. ತುಂಬ ತೊಂದರೆಯಲ್ಲಿದ್ದೀನಿ. ಸರ್ಜನ್ ನೇ ಭೇಟಿ ಆಗಿದ್ದೀನಿ. ಎಕ್ಸ್ ರೇ ಆಗಿದೆ". ಈ ಸಂಭಾಷಣೆಯನ್ನು ಭೇದಿಸುವುದಕ್ಕೆ ಅಧಿಕಾರಿಗೆ ಸ್ವಲ್ಪ ಸಮಯ ಹಿಡಿಸಿದೆ. ವೈದ್ಯರು ಅಂದರೆ ಸೇನೆ. ಸಮಸ್ಯೆ ಅಂದರೆ ಮಾಹಿತಿ ಕಳಿಸುವುದಕ್ಕೆ ಸಮಸ್ಯೆ. ಸರ್ಜನ್ ಅಂದರೆ ಬಿಎಸ್ ಎಫ್ ಗೆ ಸಂಬಂಧಿಸಿದ ಮಾಹಿತಿ.

ಮೀನು ತಿಂದಿದ್ದೀನಿ ಅಂದರೆ ಸುಮ್ನೆ ಅಲ್ಲ

ಮೀನು ತಿಂದಿದ್ದೀನಿ ಅಂದರೆ ಸುಮ್ನೆ ಅಲ್ಲ

ಇನ್ನು ಎಕ್ಸ್ ರೇ ಆಗಿದೆ ಅಂದರೆ ಮಾಹಿತಿಯನ್ನು ಕಳಿಸಿದ್ದೀನಿ ಎಂದರ್ಥ. ಇದೇ ಸಂಭಾಷಣೆಯಲ್ಲಿ, ಸೋದರ ನಾನು ಮೀನು ತಿಂದಿದ್ದೀನಿ ಎಂದಿದ್ದನಂತೆ. ಭಾರತದ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ಕಳಿಸಿದ್ದೀನಿ ಎಂದು ಅದರರ್ಥ. ಇನ್ನಷ್ಟು ಸಂಕೇತಗಳನ್ನು ಇತ್ತೀಚೆಗೆ ಜೈ ಸಲ್ಮೇರ್ ನಲ್ಲಿ ಸಿಕ್ಕಿಬಿದ್ದ ಏಜೆಂಟನಿಂದ ಬಾಯಿ ಬಿಡಿಸಲಾಗಿದೆ.

ಹವಾಮಾನದ ಮಾತಾಯಿತೇ!

ಹವಾಮಾನದ ಮಾತಾಯಿತೇ!

ಆತನಿಗೆ ಬಿಎಸ್ ಎಫ್, ಸೇನೆ ಹಾಗೂ ವಾಯು ಸೇನೆ ಬಗ್ಗೆ ಮಾಹಿತಿ ಕಳಿಸುವುದಕ್ಕೆ ನೇಮಿಸಲಾಗಿತ್ತು. ಭಾರತದ ಗುಪ್ತಚರ ಇಲಾಖೆ ಅಧಿಕಾರಿಗೆ ಈತನೇನೋ ವಾತಾವರಣದ ಬಗ್ಗೆ ಮಾತನಾಡುತ್ತಿದ್ದಾನೆ ಅನ್ನಿಸಿದೆ. ಪಾಕ್ ನ ಏಜೆಂಟ್ ಪದೇಪದೇ, ಇಲ್ಲಿ ಮಳೆ, ಬಿಸಿ ಅಥವಾ ತಂಪು ಎಂಬ ಪದ ಬಳಸಿದ್ದಾನೆ.

ಸಂಕೇತದ ಸುಳಿವು ಹೀಗೆ...

ಸಂಕೇತದ ಸುಳಿವು ಹೀಗೆ...

ಅದನ್ನು ಬಿಡಿಸಿದಾಗಲೇ ಗೊತ್ತಾಗಿರುವುದು: ಮಳೆ ಅಂದರೆ ವಾಯು ಸೇನೆ, ತಂಪು ಅಂದರೆ ಬಿಎಸ್ ಎಫ್, ಬಿಸಿ ಅಂದರೆ ಸೇನೆ ಎಂಬ ಅರ್ಥ. ಪಾಕ್ ನ ಐಎಸ್ ಐ ಏಜೆಂಟಗಳ ಸಂಕೇತದ ಮಾತುಕತೆಗಳನ್ನು ಭಾರತೀಯ ಅಧಿಕಾರಿಗಳು ಎಷ್ಟು ಶ್ರಮಪಟ್ಟು ಅರ್ಥೈಸಿಕೊಳ್ಳುತ್ತಾರೆ ನೋಡಿ.

English summary
It would be interesting to take a look at the various codes that the ISI agents use while operating in India. It is a well known fact that codes are used to avoid detection by the Intelligence Bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X