ಭಾರತದಲ್ಲಿ ಬಡತನದ ಬಗ್ಗೆ ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದ್ದು ಏನು?
ನವದೆಹಲಿ, ಏಪ್ರಿಲ್ 18: ಆರ್ಥಿಕತೆ ನಮ್ಮ ದೇಶದ ಬಡತನ ಮೇಲೆ ಅವಲಂಬಿಸಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಭಾರತ ದೇಶ ಬಡತನದಿಂದ ಮುಕ್ತಿಯಾದರೆ ದೇಶದ ಆರ್ಥಿಕತೆಯನ್ನು ಮತ್ತಷ್ಟು ಸುಧಾರಣೆ ಮಾಡಬಹುದು. ಹೀಗೆ ಭಾರತದ ದೇಶದ ಬಡತನದ ಪ್ರಮಾಣ ಅಳೆಯುವ ವಿಶ್ವ ಬ್ಯಾಂಕ್ ಭಾರತದಲ್ಲಿ ಬಡತನವು ಇಳಿಕೆ ಕಂಡಿದೆ ಎಂದು ಹೊಸ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ ಬಡತನ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಆದರೆ ವಿಶ್ವ ಬ್ಯಾಂಕಿನ ವರದಿಯ ಪ್ರಕಾರ ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಬಡತನವು ಗಮನಾರ್ಹ ಇಳಿಕೆ ಕಂಡಿದೆ ಎಂದು ವಿಶ್ವ ಬ್ಯಾಂಕ್‌ನ ಸಂಶೋಧನಾ ವರದಿಯಿಂದ ತಿಳಿದು ಬಂದಿದ್ದು, 8 ವರ್ಷಗಳ ನಡುವಿನ ಭಾರತದ ಆರ್ಥಿಕತೆಯನ್ನು ಗಮನಿಸಿರುವ ವಿಶ್ವ ಬ್ಯಾಂಕ್ ವರದಿಯು ಬಡತನದಲ್ಲಿ ಭಾರತ ದೇಶವು ಕುಸಿತವನ್ನು ಕಂಡಿದ್ದು 2011 ರಿಂದ 2019ರ ನಡುವೆ ಭಾರತದಲ್ಲಿ ಶೇ.12.3 ಪ್ರಮಾಣ ದೇಶದ ಬಡತನದಲ್ಲಿ ಇಳಿಕೆ ಕಂಡಿದೆ. 2011ರಲ್ಲಿ ವಿಶ್ವ ಬ್ಯಾಂಕ್ ಹೇಳಲಾಗಿದ್ದ ವರದಿಯಲ್ಲಿ ಶೇ.22.5ರಷ್ಟು ತೀವ್ರ ಬಡತನವನ್ನು ಭಾರತ ಎದುರಿಸುತ್ತಿತ್ತು. ಆದರೆ 2019ರ ವರದಿಯಲ್ಲಿ ಬಡತನದಲ್ಲಿ ಭಾರತ ಶೇ.10.2ರಷ್ಟು ಇಳಿಮುಖ ಕಂಡಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ಹೇಳಿದೆ.
ವಿಶ್ವ ಬ್ಯಾಂಕ್ ದೇಶದ ಬಡತನದ ಕುರಿತಾಗಿ ಸಂಶೋಧನಾ ಕಾರ್ಯಗಾರಗಳನ್ನು ಕೈಗೊಂಡಿದ್ದು, ಈ ಕಾರ್ಯಗಾರದ ಸಂಶೋಧನೆಗಳಲ್ಲಿ ಕೆಲವು ಮಹತ್ವದ ಮಾಹಿತಿಗಳು ಬಹಿರಂಗಗೊಂಡಿವೆ ಮತ್ತು ಭಾರತವು ಬಡತನ ನಿರ್ಮೂಲನೆಯಲ್ಲಿ ಸುಧಾರನೆಯನ್ನು ಕಂಡುಕೊಂಡಿದ್ದು ಬಹುತೇಕವಾಗಿ ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಭಾರತ ಪ್ರಯತ್ನಿಸಿದೆ ಅಲ್ಲದೆ ಭಾರತದ ತೀವ್ರ ಮಟ್ಟದ ಬಡತನವನ್ನು ನಿರ್ಮೂಲನೆ ಮಾಡಿದೆ ಎಂದು ವಿಶ್ವ ಬ್ಯಾಂಕಿನ ಸಂಶೋಧನೆಗಳ ವರದಿಗಳು ಹೇಳಿವೆ.

ದೇಶದ ರಾಜ್ಯಗಳು ಒದಗಿಸಿರುವ ಹಸಿವು ಕುರಿತಾದ ಕಾರ್ಯಕ್ರಮಗಳು, ಆಹಾರ ಪೂರೈಕೆಗೆ ಒದಗಿಸಲಾದ ಕರಪತ್ರಗಳ ಬಳಕೆಯಿಂದ ಕಳೆದ 40 ವರ್ಷಗಳಲ್ಲಿ ಸಮಾನತೆಯಲ್ಲಿಯು ಕೂಡಾ ಭಾರತದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಇನ್ನುಗ್ರಾಮೀಣ ಪ್ರದೇಶಗಳಲ್ಲಿ ಶೇ.11.6 ರಷ್ಟು ಬಡತನವಿದ್ದು, ನಗರಳಲ್ಲಿ ಪ್ರದೇಶದಲ್ಲಿ ಹೊಲಿಸಿದರೆ ಶೇ. 6.3ರಷ್ಟು ನಗರಗಳಲ್ಲಿ ಬಡತನವಿದೆ.

ಗ್ರಾಮೀಣ ಪ್ರದೇಶಗಳನ್ನು ಹೊಲಿಸಿದರೆ ನಗರಗಳಲ್ಲಿನ ಬಡತನ ಸುಧಾರಣೆಯಾಗಿದ್ದು ದೇಶದಲ್ಲಿ ಬಡತನವನ್ನು ತಡೆಯುವಲ್ಲಿ ನಗರಗಳು ಹೆಚ್ಚಾಗಿ ಗಮನ ಸೆಳೆದಿವೆ ಎಂದು ತಿಳಿದು ಬಂದಿದೆ.

ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿಯು ಭಾರತೀಯ ಜನಸಂಖ್ಯೆಯ ಶೇಕಡಾ 1ಕ್ಕಿಂತ ಕಡಿಮೆ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರಮುಖ ಆಹಾರ ಯೋಜನೆಯನ್ನು ನಿಭಾಯಿಸಿದ ಹಿನ್ನಲೆ ಹಾಗೂ ಅನೇಕ ಎನ್‌ಜಿಒಗಳು ಕೆಲಸ ಮಾಡಿರುವ ಕಾರಣದಿಂದಾಗಿ ಭಾರತದಲ್ಲಿ ಬಡತನವು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಏರಿಕೆಯಾಗಲಿಲ್ಲ ಎಂದು ತಿಳಿದು ಬಂದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications