ಪಾಕ್ ನ ಕರಾಚಿಯಿಂದ ದಾವೂದ್ ಮಾತನಾಡಿದ್ದೇನು?

ನವದೆಹಲಿ, ಆಗಸ್ಟ್ 10 : ಭೂಗತ ಪಾತಕಿ- ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ಜತೆಗೆ ಸಿಎನ್ ಎನ್ ನ್ಯೂಸ್ 18 ನ ಮನೋಜ್ ಗುಪ್ತಾ ಮಾತನಾಡಿದ್ದಾರೆ. ಮೊದಲಿಗೆ ಕರೆ ಸ್ವೀಕರಿಸಿದ ದಾವೂದ್ ನ ಬಳಿ, ದಾವೂದ್ ಸಾಬ್? ಎಂದಿದ್ದಾರೆ ಗುಪ್ತಾ. ಅದಕ್ಕೆ ಪ್ರತಿಯಾಗಿ ಆತ, ಹಾಂ ಹೌದು ತಾವ್ಯಾರು ಎಂದು ಪ್ರಶ್ನಿಸಿದ್ದಾನೆ.

ಯಾವಾಗ ಈ ಕರೆಯು ಭಾರತದಿಂದ ಬಂದಿದೆ ಹಾಗೂ ಎದುರಿನಿಂದ ಮಾತನಾಡುತ್ತಿರುವುದು ಪತ್ರಕರ್ತರು ಎಂದು ಗೊತ್ತಾಯಿತೋ ಆಗ ಕರೆಯನ್ನು ತನ್ನ ಸಹಚರ ಚೋಟಾನಿಗೆ ಹಸ್ತಾಂತರಿಸಿದ್ದಾನೆ. ಆದರೆ ಆ ಕರೆಯ ಮಧ್ಯೆ ಹಿಂದಿನಿಂದ ದಾವೂದ್ ನ ಧ್ವನಿ ಕೇಳಿಬರುತ್ತದೆ. ಇದು ಆತನದೇ ಧ್ವನಿ ಎಂಬುದನ್ನು ಗುಪ್ತಚರ ಇಲಾಖೆ ಖಾತ್ರಿ ಪಡಿಸಿದೆ.

Dawood Ibrahim

ಅಂದಹಾಗೆ ಕರಾಚಿಯ ಫೋನ್ ನಂಬರ್ ನಿಂದ ಈ ಸಂಭಾಷಣೆ ನಡೆದಿದೆ. ಸಂಭಾಷಣೆಯ ಪ್ರಮುಖ ಭಾಗವನ್ನು ಇಲ್ಲಿ ಕೊಡಲಾಗಿದೆ.

ಸಿಎನ್ ಎನ್ ನ್ಯೂಸ್ 18: ಅಂದರೆ, ನೀವು ಕರಾಚಿ, ಪಾಕಿಸ್ತಾನದಲ್ಲಿ ಇದೀರಾ?

ಜಾವೇದ್ ಚೋಟಾನಿ: ಯಾರು ಹಾಗೆ ಹೇಳಿದ್ದು?

ಸಿಎನ್ ಎನ್ ನ್ಯೂಸ್ 18: ಇದು ಪಾಕಿಸ್ತಾನಿ ನಂಬರ್

ದಾವೂದ್: ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ

ಜಾವೇದ್ ಚೋಟಾನಿ: ನೀವು ಸಮಯ ವ್ಯರ್ಥ ಮಾಡ್ತಿದೀರಿ. ನೀವು ಯಾರ ಜತೆ ಮಾತನಾಡ್ತಿದೀರಾ? ಯಾರ ಸಂದರ್ಶನ ಮಾಡ್ತಿದೀರಿ? ನಿಮಗೆ ಏನಾದರೂ ಗೊತ್ತಿದೆಯಾ?

ಜಾವೇದ್ ಚೋಟಾನಿ: ಇಲ್ಲ, ನೀವೇ ಹೇಳಿ. ಇಷ್ಟು ದೊಡ್ಡ ಸಂದರ್ಶನ ಮಾಡ್ತಿದೀರಿ. ತುಂಬ ಮಾತನಾಡ್ತಿದೀರಿ. ಕನಿಷ್ಠ ನೀವು ಯಾರ ಜತೆ ಮಾತನಾಡ್ತಾ ಇದೀರಾ ಗೊತ್ತಾ?

ಸಿಎನ್ ಎನ್ ನ್ಯೂಸ್ 18: ದಾವೂದ್ ಜತೆಗೆ.

ಜಾವೇದ್ ಚೋಟಾನಿ: ನೀವು ಆತನ ಹೆಸರನ್ನು ಹೀಗೆ ಹೇಳ್ತಿದೀರಿ. ನೀವು ಅವರ ಜತೆಗೆ ಫೋನ್ ನಲ್ಲಿ ಮಾತನಾಡೋದು ಅಷ್ಟು ಸುಲಭ ಅಂದುಕೊಂಡಿದೀರಾ.

ಜಾವೇದ್ ಚೋಟಾನಿ: ನಿಮಗೆ ಈ ನಂಬರ್ ಕೊಟ್ಟವರು ಯಾರು? ಈ ನಂಬರ್ ಡಿಲೀಟ್ ಮಾಡಿ. ನಿಮ್ಮ ನಂಬರ್ ಕೊಡಿ, ಆಗ ನಿಮ್ಮ ಸಂದೇಶವನ್ನು ಯಾರ ಮೂಲಕವಾದರೂ ದಾವೂದ್ ಗೆ ಮುಟ್ಟಿಸ್ತೀನಿ.

ಜಾವೇದ್ ಚೋಟಾನಿ: ನೀವು ಬುದ್ಧಿವಂತ ಪತ್ರಕರ್ತರಂತೆ ಇದ್ದೀರಿ. ನೀವು ಯಾವುದೋ ಸಂಖ್ಯೆಗೆ ಕರೆ ಮಾಡ್ತೀರಿ, ಆ ಕರೆಯನ್ನು ದಾವೂದ್ ಸಾಹೆಬ್ ತೆಗೆದುಕೊಳ್ತಾರೆ ಅಂದುಕೊಳ್ತೀರಾ? ಮತ್ತು ಅವರ ಸಂದರ್ಶನ ಮಾಡ್ತೀರಾ?

ಜಾವೇದ್ ಚೋಟಾನಿ: ನಿಮ್ಮ ಸಂಖ್ಯೆ ಕೊಡಿ, ಅವರು ನಿಮ್ಮ ಜತೆ ಮಾತನಾಡುವಂತೆ ಮಾಡ್ತೀನಿ.

ಸಿಎನ್ ಎನ್ ನ್ಯೂಸ್ 18: 90XXXXXXXX

ಜಾವೇದ್ ಚೋಟಾನಿ: ಸರಿ, ಹೇಳಿ. ನೇರವಾಗಿ ಸ್ಟುಡಿಯೋದಲ್ಲಿ ಸಂದರ್ಶನ ಮಾಡ್ತೀರಾ?

ಸಿಎನ್ ಎನ್ ನ್ಯೂಸ್ 18: ನಾನು ಕರಾಚಿಗೆ ಕ್ಯಾಮೆರಾ ಕಳಿಸ್ತೀನಿ.

ಜಾವೇದ್ ಚೋಟಾನಿ: ಕರಾಚಿಗಾ? ಯಾಕೆ? ಯಾಕೆ ನಿಮ್ಮನ್ನು ಭೇಟಿ ಮಾಡೋದಿಕ್ಕೆ ಕೇಳ್ತಿದೀರಾ ಅಥವಾ ಅವರ ಜತೆ ಮಾತನಾಡೋಕೆ ಕೇಳ್ತಿದೀರಾ? ನನಗೆ ನಿಮ್ಮ ನಂಬರ್ ಕಳಿಸಿ.

ಸಿಎನ್ ಎನ್ ನ್ಯೂಸ್ 18: ದಯವಿಟ್ಟು ಸಣ್ಣ ಸಂದರ್ಶನ ಕೊಡಿ.

ದಾವೂದ್: ಇಲ್ಲ, ಸಂದರ್ಶನ. ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+