ಪಶ್ಚಿಮ ಬಂಗಾಳದಲ್ಲಿ 10ನೇ ತರಗತಿವರೆಗೆ 'ಬೆಂಗಾಲಿ' ಕಡ್ಡಾಯ
ಶಾಲಾ ಮಟ್ಟದಲ್ಲಿ ಮೂರು ಭಾಷೆಗಳನ್ನು ಕಲಿಯಬೇಕಿರುವ ವಿದ್ಯಾರ್ಥಿಗಳಿಗಳು ಬೆಂಗಾಲಿ ಭಾಷೆಯನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಲೇ ಬೇಕಿದೆ.
ಕೋಲ್ಕತಾ, ಮೇ 17: ದೇಶದ ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದಕ್ಕೆ ಸೆಡ್ಡು ಹೊಡೆದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ರಾಜ್ಯದ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಬೆಂಗಾಲಿ ಭಾಷೆಯನ್ನು ಕಡ್ಡಾಯಗೊಳಿಸಬೇಕೆಂದು ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಅನ್ವಯ, ಶಾಲಾ ಮಟ್ಟದಲ್ಲಿ ಮೂರು ಭಾಷೆಗಳನ್ನು ಕಲಿಯುವ ವಿದ್ಯಾರ್ಥಿಗಳು ಬೆಂಗಾಲಿ, ಉರ್ದು, ಹಿಂದಿ, ಪಂಜಾಬಿ, ನೇಪಾಳಿ, ಸಂತಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಯಾವುದಾದರೂ ಮೂರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ, ಬೆಂಗಾಲಿ ಭಾಷೆ ಮಾತ್ರ ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಥಿಗಳ ಮಾತೃಭಾಷೆ ಯಾವುದೇ ಆಗಿರಲಿ, ಯಾವುದೇ ಮಂಡಳಿಯ ಶಾಲೆಯಲ್ಲಿ (ರಾಜ್ಯ ಸರ್ಕಾರ ಅಥವಾ ಕೇಂದ್ರೀಯ ವಿದ್ಯಾಲಯ) ಶಾಲಾ ಮಟ್ಟದಲ್ಲಿ ಬೆಂಗಾಲಿ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕೆಂದು ಮಮತಾ ಆದೇಶಿಸಿದ್ದಾರೆ.
{promotion-urls}












Click it and Unblock the Notifications