ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿ ಕ್ಲೀನ್ ಸ್ವೀಪ್

ಕೊಲ್ಕೊತ್ತಾ, ಫೆಬ್ರವರಿ 1: ಪಶ್ಚಿಮ ಬಂಗಾಳದ ನೊಪೊರಾ ವಿಧಾನಸಭಾ ಕ್ಷೇತ್ರ ಹಾಗೂ ಉಲುಬೆರಿಯಾ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಪಶ್ಚಿಮ ಬಂಗಾಳದ ಮೇಲೆ ಇನ್ನೂ ತನ್ನ ಹಿಡಿತ ಬಲವಾಗಿದೆ ಎಂದು ಮಮತಾ ಬ್ಯಾನರ್ಜಿ ನಿರೂಪಿಸಿದ್ದಾರೆ.

ಉಲುಬೆರಿಯಾ ಲೋಕಸಭೆ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಸಜ್ದಾ ಅಹ್ಮದ್ 4,74,023 ಮತಗಳಿಂದ ಜಯಗಳಿಸಿದ್ದಾರೆ. ಸಜ್ದಾ ಅಹ್ಮದ್ 7,67,219 ಮತಗಳನ್ನು ಪಡೆದಿದ್ದರೆ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ 2,93,018 ಮತಗಳನ್ನು ಪಡೆದಿದ್ದಾರೆ.

ಇಲ್ಲಿ ಸಿಪಿಐಎಂ ಮೂರನೇ ಸ್ಥಾನ ಪಡೆದುಕೊಂಡಿದ್ದು, ಆ ಪಕ್ಷದ ಅಭ್ಯರ್ಥಿ 1,38,792 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು ಕೇವಲ 23,108 ಮತಗಳನ್ನು ಪಡೆದಿದೆ. ನೋಟಾ ಪರ 11,768 ಮತಗಳು ಚಲಾವಣೆಯಾಗಿವೆ.

West Bengal by-poll: TMC wins both lok sabha and assembly seats

ನೊಪೊರಾದಲ್ಲಿ ಟಿಎಂಸಿಗೆ ವಿಜಯಮಾಲೆ

ಇನ್ನು ನೊಪೊರಾ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಟಿಎಂಸಿಯ ಅಭ್ಯರ್ಥಿ ಸುನಿಲ್ ಸಿಂಗ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಯನ್ನು 73,018 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

ಸುನಿಲ್ ಸಿಂಗ್ ಬರೋಬ್ಬರಿ 1,11,729 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ 38,711 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಇಲ್ಲಿ ಸಿಪಿಐಎಂ ಮೂರನೇ ಸ್ಥಾನವನ್ನು ಪಡೆದಿದ್ದು ಆ ಪಕ್ಷದ ಅಭ್ಯರ್ಥಿ 35,497 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ನೊಪೊರಾದಲ್ಲಿಯೂ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ನೊಪೊರಾ ಕ್ಷೇತ್ರವನ್ನು ಕಾಂಗ್ರೆಸ್ ನ ಮಧುಸೂದನ್ ಘೋಸೆ ಪ್ರತಿನಿಧಿಸುತ್ತಿದ್ದರು. ಅವರು 2016ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯನ್ನು ಕೇವಲ 1 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಇದೀಗ ಇಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಜತೆಗೆ ಅಚ್ಚರಿಯ ರೀತಿಯಲ್ಲಿ ಕ್ಷೇತ್ರವನ್ನು ಟಿಎಂಸಿ ಭರ್ಜರಿ ಮತಗಳಿಂದ ಜಯ ಸಾಧಿಸಿದೆ.

ಎರಡೂ ವಿಧಾನಸಭೆ ಕ್ಷೇತ್ರಗಳ್ಲಲಿ ಬಿಜೆಪಿ ಎರಡನೇ ಸ್ಥಾನಕ್ಕೆ ನೆಗೆದಿರುವುದೂ ಹಲವರನ್ನು ಅಚ್ಚರಿಗೆ ಕೆಡವಿದೆ. ಜತೆಗೆ ವಿರೋಧ ಪಕ್ಷ ಸಿಪಿಐಎಂ ಎರಡೂ ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿರುವುದು ಕಮ್ಯೂನಿಷ್ಟ್ ಪಕ್ಷದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+