IMD Weather Forecast: ಜನವರಿ 29 & 30ರಂದು ಈ ಭಾಗಗಳಲ್ಲಿ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಈ ನಡುವೆಯೂ ಹಲವೆಡೆ ಜಿನುಗು ಮಳೆಯಾಗುತ್ತಿದೆ. ಹಾಗೆಯೇ ಜನವರಿ 29 & 30ರಂದು ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಂಡಮಾರುತದ ಪರಿಚಲನೆ ಹಿನ್ನೆಲೆ ಜನವರಿ 29 & 30ರಂದು ಎರಡು ದಿನ ದಟ್ಟ ಮಂಜಿನ ನಡುವೆಯೇ ಪಶ್ಚಿಮ ಹಿಮಾಲಯ ಪ್ರದೇಶದ ಅಲ್ಲಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಮಧ್ಯ ಮತ್ತು ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭೀಕರ ಚಳಿ ನಡುವೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ. ಈಶಾನ್ಯ ರಾಜಸ್ಥಾನ, ಅಸ್ಸಾಂ ಮತ್ತು ತ್ರಿಪುರದ ಪ್ರತ್ಯೇಕ ಭಾಗಗಳಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ದಟ್ಟ ಮಂಜು?: ಇಂದು (ಜನವರಿ 25) ಬೆಳಗ್ಗೆ ವೇಳೆ ಪಶ್ಚಿಮ ಬಂಗಾಳದ ಪ್ರತ್ಯೇಕ ಭಾಗಗಳಲ್ಲಿ ದಟ್ಟ ಮಂಜು ಕವಿದಿದ್ದು, ವಾಹನ ಸವಾರರಿಗೆ ಅಡಚಣೆಯಾಗಿರುವ ಘಟನೆ ನಡೆದಿದೆ. ರಾತ್ರಿಯೂ ಕೂಡ ಈ ಭಾಗದಲ್ಲಿ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನವರಿ 26ರಂದು ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಬಿಹಾರ, ಜನವರಿ 25 ರಿಂದ 27ರ ವರೆಗೆ ಒಡಿಶಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ. ಇನ್ನು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಇಂದು (ಜನವರಿ 25) ಶೀತದ ವಾತಾವರಣ ಇರಲಿದೆ. ಜನವರಿ 25 ಮತ್ತು 26ರಂದು ಬಿಹಾರದ ಕೆಲವು ಭಾಗಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಎಂದು ಹವಾಮಾನ ತಿಳಿಸಿದೆ.
ನವದೆಹಲಿ ಹವಾಮಾನ ಮುನ್ಸೂಚನೆ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭೀಕರ ಚಳಿ ನಡುವೆಯೇ ಗುರುವಾರ ಬೆಳಗಿನ ಜಾವ ಸಾಧಾರಣ ಮಳೆಯಾಗಿತ್ತು. ಮತ್ತೊಂದೆಡೆ ವಾಯುಮಾಲಿನ್ಯದ ಪ್ರಮಾಣ ತಗ್ಗಿತ್ತು. ಶುಕ್ರವಾರ ಬೆಳಗ್ಗೆ ಅದೇ ಆಡಿದ್ದೇ ಆಟ ಎಂಬಂತೆ ಗಾಳಿಯ ಗುಣಮಟ್ಟ ಮತ್ತೆ ಕಳಪೆ ಮಟ್ಟದಿಂದ ಕೂಡಿತ್ತು. ಇನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಇಂದು (ಜನವರಿ 25) ಮತ್ತೆ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ತಿಳಿದುಬಂದಿದೆ
ಇಂದು ದೆಹಲಿಯಲ್ಲಿ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬದಲಾಗಿ ಚಳಿಯ ಪ್ರಮಾಣ ತುಸು ಹೆಚ್ಚಾಗುವ ಸಾಧ್ಯತೆಯಿದ ಎಂದು ಭಾರತೀಯ ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಇಂದು ಬೆಳಗ್ಗೆ 6 ಗಂಟೆಗೆ AQI (194), ಅಲಿಪುರ್ (193), ರೋಹಿಣಿ (246), ಅಶೋಕ್ ವಿಹಾರ್ (202), ಶಾದಿಪುರ (196), ಮುಂಡ್ಕಾ (231), ವಜೀರ್‌ಪುರ (236), ಜಹಾಂಗೀರಪುರಿ (240), ನರೇಲಾ (206), ಡಿಟಿಯು ಸಿಪಿಸಿಬಿ (169), ಆರ್‌ಕೆ ಪುರಂ (186), ಮತ್ತು ಆನಂದ್ ವಿಹಾರ್ (222)ನಷ್ಟು ಇತ್ತು ಎಂದು ತಿಳಿದುಬಂದಿದೆ.












Click it and Unblock the Notifications