'ಪೋಷಕರು ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಹುಟ್ಟಿಸಬೇಕು': ಮೋಹನ್ ಭಾಗವತ್
ಉತ್ತರಾಖಂಡ, ಅಕ್ಟೋಬರ್ 11: "ಹಿಂದೂ ಯುವತಿಯರ ಹಾಗೂ ಹಿಂದೂ ಯುವಕರ ಮತಾಂತರವು ತಪ್ಪು, ಹಾಗೆಯೇ ನಮ್ಮ ಯುವ ಜನರಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವುದು ಅಗತ್ಯ ಇದೆ," ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಹಲ್ದ್ವಾನಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ "ತಮ್ಮ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಉತ್ತಮ ಭಾವನೆ ಬೆಳೆಯುವಂತಹ ಸಂಸ್ಕಾರವನ್ನು ಕಲಿಸಿಕೊಡಿ," ಎಂದು ಪೋಷಕರಿಗೆ ತಿಳಿಸಿದರು.
"ಮತಾಂತರ ನಡೆಯುವುದಾದರೂ ಹೇಗೆ?, ಮದುವೆಯಾಗುವ ಒಂದು ಸಣ್ಣ ಸ್ವಾರ್ಥಕ್ಕಾಗಿ ನಮ್ಮ ಹಿಂದೂ ಧರ್ಮದ ಯುವತಿಯರು ಹಾಗೂ ಯುವಕರು ಹೇಗೆ ಬೇರೆ ಧರ್ಮವನ್ನು ಸ್ವೀಕಾರ ಮಾಡುತ್ತಾರೆ?," ಎಂದು ಪೋಷಕರ ಬಳಿ ಪ್ರಶ್ನೆ ಕೇಳಿದರು.

"ಈ ಮತಾಂತರವನ್ನು ಯಾರು ಮಾಡುತ್ತಾರೋ ಅದು ತಪ್ಪು, ಆದರೆ ಬೇರೆ ವಿಷಯ. ಆದರೆ ನಾವು ನಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲವೇ?. ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕೃತಿಯನ್ನು ನೀಡಬೇಕು. ನಮ್ಮ ಬಗ್ಗೆ, ನಮ್ಮ ಧರ್ಮದ ಬಗ್ಗೆ ನಮ್ಮ ಯುವಕರಲ್ಲಿ ಹೆಮ್ಮೆಯನ್ನು ನಾವು ಮೂಡಿಸಬೇಕು, ಹಾಗೆಯೇ ನಮ್ಮ ಸಂಸ್ಕೃತಿ ಬಗ್ಗೆ ಗೌರವವನ್ನು ನಾವು ಮೂಡಿಸಬೇಕು," ಎಂದು ಕಿವಿಮಾತು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರಲ್ಲಿ ಯಾವುದೇ ಗೊಂದಲವಿಲ್ಲದೇ ನೀವು ಯಾವ ಪ್ರಶ್ನೆಗೂ ಉತ್ತರವನ್ನು ನೀಡಬೇಕು. ಅವರು ನಿಮ್ಮ ಬಳಿಗೆ ಬಂದು ಪ್ರಶ್ನೆ ಕೇಳಿದರೆ ಉತ್ತರ ನೀಡಿ. ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ನಾವು ನಮ್ಮ ಮಕ್ಕಳಿಗೆ ಪ್ರಶ್ನೆಗೆ ಉತ್ತರಿಸುವುದನ್ನು ಕಲಿಸಬೇಕು ಹಾಗೂ ನಾವು ಕೂಡಾ ಕಲಿಯಬೇಕು," ಎಂದರು.
ಸಾಂಪ್ರದಾಯಿಕ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ವಿಚಾರವನ್ನು ಕೂಡಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಭಾರತದ ಪ್ರವಾಸಿ ತಾಣಗಳಿಗೆ ನಮ್ಮ ಜನರು ಭೇಟಿ ನೀಡಬೇಕು. ಹಾಗೆಯೇ ಮನೆಯಲ್ಲೇ ಮಾಡಿದ ಆಹಾರವನ್ನು ಸೇವಿಸಿ ಹಾಗೂ ಸಾಂಪ್ರದಾಯಿಕ ಉಡುಪನ್ನು ಧರಿಸಬೇಕು ಎಂದು ಕೂಡಾ ಸಲಹೆ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಭಾರತದ ಸಂಸ್ಕೃತಿಯ ಬೇರಿನೊಂದಿಗೆ ನಂಟು ಹೊಂದಿರಬೇಕಾದರೆ ನಾವು ಆರು ಮಂತ್ರಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, "ಆ ಆರು ಮಂತ್ರಗಳು ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರವಾಸ, ಉಡುಪು ಹಾಗೂ ಮನೆ," ಎಂದರು. ಇನ್ನು ಜನರು ಸಂಪ್ರದಾಯವನ್ನು ಪಾಲಿಸಬೇಕು ಎಂದು ಹೇಳುವ ಸಂದರ್ಭದಲ್ಲೇ ಮೋಹನ್ ಭಾಗವತ್ ಅವರು, "ಅಸ್ಪೃಶ್ಯತೆಯನ್ನು ನಾವು ಪಾಲನೆ ಮಾಡಬಾರದು," ಎಂದು ಒತ್ತಿ ಹೇಳಿದರು.
"ಯಾರನ್ನೂ ಕೂಡಾ ಜಾತಿಯ ಆಧಾರದಲ್ಲಿ ವರ್ಗಿಕರಣ ಮಾಡಬೇಡಿ. ಅಸ್ಪೃಶ್ಯತೆ ಎಂಬುವುದು ಇನ್ನು ಇರಬಾರದು. ಹೆಸರುಗಳನ್ನು ಕೇಳಿ ಧರ್ಮವನ್ನು ಊಹಿಸುವ ಅಭ್ಯಾಸವನ್ನು ಜನರು ನಮ್ಮ ಈ ಸಮಾಜವು ಹೊಂದಿದೆ. ಆದ್ದರಿಂದ ನಮ್ಮ ಒಳಗೆ ಜನರ ನಡುವೆ ಭೇದ-ಭಾವವನ್ನು ಮಾಡುವುದು ಸಂಪೂರ್ಣವಾಗಿ ನಮ್ಮ ಹೃದಯಂತರಾಳದಿಂದ ಕೊನೆಯಾಗಬೇಕು," ಎಂದರು.
"ನಾವು ಈ ವಿಚಾರದ ಬಗ್ಗೆ ಚರ್ಚೆಯನ್ನು ನಡೆಸಬೇಕು. ಅದು ಮಾತ್ರವಲ್ಲದೇ ನೀರು ಹಾಗೂ ಸಸಿಗಳನ್ನು ನೆಡುವ ವಿಚಾರದ ಬಗ್ಗೆಯೂ ಚರ್ಚೆಯನ್ನು ನಡೆಸಬೇಕು," ಎಂದು ಹೇಳಿದ ಆರ್‌ಎಸ್‌ಎಸ್ ಮುಖಂಡರು, "ಯಾವಾಗ ಓರ್ವ ಹಿಂದೂ ಎಚ್ಚರಗೊಳ್ಳುತ್ತಾನೋ, ಆ ಬಳಿಕ ಇಡೀ ವಿಶ್ವವೇ ಎಚ್ಚರಗೊಳ್ಳುತ್ತದೆ," ಎಂದು ಅಭಿಪ್ರಾಯಿಸಿದರು.
(ಒನ್‌ಇಂಡಿಯಾ ಸುದ್ದಿ)
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications