ಶಿವಕಾಶಿ ಪಟಾಕಿ ಸ್ಫೋಟ: ಗರ್ಭಿಣಿಯರು ಸೇರಿದಂತೆ 9 ಜನ ಬಲಿ

Posted By:
Subscribe to Oneindia Kannada

ಶಿವಕಾಶಿ, ಅಕ್ಟೋಬರ್ 20: ಶಿವಕಾಶಿಯ ಪಟಾಕಿ ಕಾರ್ಖಾನೆ ಬಳಿ ಗುರುವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಗರ್ಭಿಣಿಯರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದು, 19 ಜನಕ್ಕೂ ಅಧಿಕ ಗಾಯಗೊಂಡಿದ್ದಾರೆ. ಈ ಅಗ್ನಿ ಅಪಘಾತದ ವಿಡಿಯೋವೊಂದನ್ನು ಶಿವಕಾಶಿ ಮೂಲದ ಪತ್ರಿಕೆ ಫೇಸ್ ಬುಕ್ ನಲ್ಲಿ ಹಾಕಿದೆ.

ಮೃತರನ್ನು ಭಾಸ್ಕರ್, ಸ್ವರ್ಣಕುಮಾರ್, ದೇವಿ, ಕಮಾರ್ಚಿ, ಪುಷ್ಪಲಕ್ಷ್ಮಿ, ವಲರ್ ಮತಿ, ಜಾನಕಿರಮನ್, ಗಣೇಶನ್ ಹಾಗೂ ಷಣ್ಮುಗರಾಜ್ ಎಂದು ಗುರುತಿಸಲಾಗಿದೆ. ಪಟಾಕಿ ಗೋದಾಮಿನಿಂದ ಪಟಾಕಿ ಒಯ್ಯುತ್ತಿದ್ದ ಟ್ರಕ್ಕಿಗೆ ಪಟಾಕಿ ಸಾಗಿಸುವಾಗ ಸ್ಫೋಟಗೊಂಡಿದೆ.

Watch: Fire accident at Sivakasi cracker godown in Tamil Nadu

ಸ್ಕ್ಯಾನಿಂಗ್ ಸೆಂಟರ್ ಬಳಿ ಟ್ರಕ್ ನಿಲ್ಲಿಸಲಾಗಿತ್ತು. ಒಳಗಿದ್ದ ಗರ್ಭಿಣಿಯರು ಉಸಿರಾಟದ ತೊಂದರೆಗೊಳಗಾಗಿ ಮೃತಪಟ್ಟಿದ್ದಾರೆ. ಸುಮಾರು 35ಕ್ಕೂ ಅಧಿಕ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿದ್ದ 25ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಗೋದಾಮಿನ ಬಳಿ ಸುಮಾರು 20 ವಾಹನಗಳು ನಿಲ್ಲಿಸಲಾಗಿತ್ತು. ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

2012ರ ಸೆಪ್ಟೆಂಬರ್ 5ರಂದು ನಡೆದ ಅಗ್ನಿ ಆಕಸ್ಮಿಕದಲ್ಲಿ 38 ಮಂದಿ ಸಾವನ್ನಪ್ಪಿದ್ದರು. ಈ ಕಹಿ ಘಟನೆ ನಂತರ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಮತ್ತೆ ಮತ್ತೆ ಅವಘಡಗಳು ಸಂಭವಿಸುತ್ತಲೇ ಇವೆ. ದೀಪಾವಳಿಗಾಗಿ ಪಟಾಕಿ ಬೇಡಿಕೆ ಹೆಚ್ಚಿರುವುದರಿಂದ ಪಟಾಕಿ ಸಾಗಿಸಲು ಇಲ್ಲಿನ ಕಾರ್ಖಾನೆಗಳು ಬೇಡಿಕೆ ಪೂರೈಸಲು ಯತ್ನಿಸುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fire accident near godown in the cracker town of Sivakasi in Tamil Nadu on Thursday afternoon led to the death of nine people, while 19 more were injured
Please Wait while comments are loading...