ಕೊವಿಡ್ 19 ತ್ಯಾಜ್ಯ ವಿಲೇವಾರಿ: ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ

ನವದೆಹಲಿ, ಜುಲೈ 23: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೊವಿಡ್ 19 ತ್ಯಾಜ್ಯಗಳ ವಿಲೇವಾರಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ನೀವು ಮಾಸ್ಕ್ ಮತ್ತೆ ಕೈಗವಸುಗಳನ್ನು ಬಳಕೆ ಮಾಡಿದರೆ ಅದನ್ನು ಕತ್ತರಿಸಿ ಒಂದು ಪೇಪರ್‌ ಬ್ಯಾಗ್‌ನಲ್ಲಿ ಹಾಕಿ 72 ಗಂಟೆಗಳ ಕಾಲ ಇಡಬೇಕು ಬಳಿಕ ಅದನ್ನು ಬಿಸಾಡಬೇಕು ಎಂದು ಹೇಳಿದೆ.

ಮಾಲ್‌ಗಳು, ಕಚೇರಿಗಳಲ್ಲಿ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.ವಾಣಿಜ್ಯ ಕಟ್ಟಡಗಳು, ಕಚೇರಿಗಳು, ಇನ್‌ಸ್ಟಿಟ್ಯೂಷನ್‌ಗಳು, ಮಾಲ್‌ಗಳಲ್ಲಿ ಬಳಸಿದ ಪಿಪಿಇ ಕಿಟ್‌ಗಳನ್ನು ಪ್ರತ್ಯೇಕ್ ಡಸ್ಟ್ಬಿನ್‌ ಅಲ್ಲಿ ಸುಮಾರು 3 ದಿನಗಳ ಕಾಲ ಇರಿಸಿ ಬಳಿಕ ಅದನ್ನು ವಿಲೇವಾರಿ ಮಾಡಬೇಕು.

Waste Masks, Gloves To Be Stored For 72 Hours Before Being Disposed

ಮನೆಗಳಲ್ಲಿ ಬಳಸುವ ಮಾಸ್ಕ್ ಹಾಗೂ ಕೈಗವಸುಗಳನ್ನು ಕತ್ತರಿಸಿ ಪೇಪರ್ ಒಳಗೆ ಸುತ್ತಿ 72 ಗಂಟೆಗಳ ಕಾಲ ಇರಿಸಬೇಕು ಬಳಿಕ ವಿಲೇವಾರಿ ಮಾಡಬೇಕು. ನಾಲ್ಕನೇ ಬಾರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೊರೊನಾ ಸೋಂಕಿತರು ತಿಂದು ಬಿಸಾಡಿದ ಆಹಾರ ಬ್ಯಾಗ್ ಹಾಗೂ ಖಾಲಿ ಬಾಟಲಿಗಳನ್ನು ವೈದ್ಯಕೀಯ ತ್ಯಾಜ್ಯದ ಜೊತೆ ಬೆರೆಸಬಾರದು ಅದನ್ನು ಪ್ರತ್ಯೇಕವಾಗಿಯೇ ಇರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಉಳಿದ ಆಹಾರ, ಖಾಲಿ ಜ್ಯೂಸ್ ಟೆಟ್ರಾ ಪ್ಯಾಕ್, ಪ್ಯಾಕೇಜಿಂಗ್ ಉಪಕರಣಗಳು ಕೆಲವು ವಸ್ತುಗಳನ್ನು ತ್ಯಾಜ್ಯ ಸಂಗ್ರಹಕಾರರಿಗೆ ನೀಡಬಹುದು.

ಕೊವಿಡ್ 19 ಐಸೊಲೇಷನ್‌ ವಾರ್ಡ್‌ನಲ್ಲಿ ಬಳಸುವ ಪಿಪಿಇ ಕಿಟ್, ಕನ್ನಡಕ, ಫೇಸ್ ಶೀಲ್ಡ್, ಎಪ್ರಾನ್, ಸ್ಯೂಟ್‌ಗಳು, ಗ್ಲೌಸ್‌ಗಳನ್ನು ಕೆಂಪು ಬ್ಯಾಗ್‌ನಲ್ಲಿರಿಸಬೇಕು.
ಮಾಸ್ಕ್, ಶೂ ಕವರ್, ಹೆಡ್ ಕವರ್, ಗೌನ್, ಟಿಶ್ಯೂಗಳನ್ನು ಹಳದಿ ಬ್ಯಾಗ್‌ನಲ್ಲಿ ಹಾಕಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+