TTD: ತಿರುಪತಿಗೆ ಹೋಗುವ ಭಕ್ತರೇ ಎಚ್ಚರ.. ನಕಲಿ ಟಿಕೆಟ್ ಪಡೆದು ಮೋಸ ಹೋದ ಭಕ್ತರು!
ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿ ದಿನ ಲಕ್ಷಾಂತರ ಜನರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಬೇಸಿಗೆ ರಜೆಯ ತಿಂಗಳುಗಳಾದ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ತಿರುಮಲಕ್ಕೆ ಭೇಟಿ ನೀಡುತ್ತಾರೆ.
ಹೀಗಾಗಿ ಇಡೀ ತಿರುಮಲ ಭಕ್ತರಿಂದ ತುಂಬಿ ತುಳುಕುತ್ತಿದೆ. ಈಗ ಬೇಸಿಗೆ ರಜೆ ಇರುವುದರಿಂದ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಅನಿಯಂತ್ರಿತವಾಗಿದೆ. ತಿರುಪತಿಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ, ತಿಮ್ಮಪ್ಪನನ್ನು ನೋಡಲು ಹಲವಾರು ಗಂಟೆಗಳು ಬೇಕಾಗುತ್ತದೆ ಎಂದು ಭಕ್ತರು ನಿರಾಸೆಗೊಂಡಿದ್ದಾರೆ.

ಈ ವೇಳೆ ಕೆಲವರಿಗೆ ಏಳು ಬೆಟ್ಟದ ಒಡೆಯನ ದರ್ಶನ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ವಿಶಾಖಪಟ್ಟಣದ ಭಕ್ತರಿಗೂ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ದೇವಸ್ಥಾನದ ಸಿಬ್ಬಂದಿ ಕೂಡ ಅವರನ್ನು ಒಳ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಭಕ್ತರು ಬೇಸರಗೊಂಡಿದ್ದಾರೆ. ಏಕೆ ಅನುಮತಿ ನೀಡಿಲ್ಲ? ಏನು ಕಾರಣ? ಏಳು ಬೆಟ್ಟಗಳ ಒಡೆಯನ ದರ್ಶನ ಪಡೆಯಲು ಏನು ಮಾಡಬಾರದು? ಎಂದು ತಿಳಿಯೋಣ.
ಅಸಲಿಗೆ ಏನಾಯಿತು ಎಂದರೆ ವಿಶಾಖಪಟ್ಟಣದ ಭಕ್ತರಲ್ಲೊಬ್ಬರಾದ ಶ್ರೀನಿವಾಸ್ ತನ್ನ ಸ್ನೇಹಿತನ ಮೂಲಕ ರಾಕುಸಾಯಿ ತೇಜಾ ಎಂಬ ಬ್ರೋಕರ್ ಅನ್ನು ಸಂಪರ್ಕಿಸಿದರು. ಬ್ರೋಕರ್ 4 ವಿಐಪಿ ಬ್ರೇಕ್ ಟಿಕೆಟ್ ಗಳಿಗೆ 17,000 ರೂಪಾಯಿ ಹಣವನ್ನು ಶ್ರೀನಿವಾಸ ಬಳಿ ಕೇಳಿದ್ದಾನೆ. ಅದಕ್ಕೆ ಶ್ರೀನಿವಾಸ್ ಹೇಗಾದರೂ ಮಾಡಿ ತಿಮ್ಮಪ್ಪನ ದರ್ಶನ ಪಡೆಯುವ ಆಸೆಯಿಂದ ಒಪ್ಪಿ ಹಣ ಕಳುಹಿಸಿದ್ದಾರೆ. ಆ ನಂತರ ಶ್ರೀನಿವಾಸ್‌ಗೆ ವಿಐಪಿ ಬ್ರೇಕ್ ಟಿಕೆಟ್ ಸಿಕ್ಕಿದೆ.
ಬಳಿಕ ಅವರು ತಮ್ಮ ಅನುಯಾಯಿಗಳೊಂದಿಗೆ ದರ್ಶನಕ್ಕೆ ತೆರಳಿದ್ದಾರೆ. ಅವರು ವೈಕುಂಡಂ ಲೈನ್ ಕಾಂಪ್ಲೆಕ್ಸ್‌ನಲ್ಲಿರುವ ಟಿಕೆಟ್ ಸ್ಕ್ಯಾನಿಂಗ್ ಪ್ರದೇಶಕ್ಕೆ ಹೋದಾಗ ಶ್ರೀನಿವಾಸ್ ಅವರಿಗೆ ನೀಡಿದ ಟಿಕೆಟ್ ಅನ್ನು ಸ್ಕ್ಯಾನ್ ಮಾಡಲಾಗಿದೆ. ಆದರೆ ಟಿಕೆಟ್ ಸ್ಕ್ಯಾನ್ ಆಗಿಲ್ಲ. ದೇವಸ್ಥಾನದ ಸಿಬ್ಬಂದಿ ಮತ್ತೆ ಪ್ರಯತ್ನಿಸಿದರೂ ಸ್ಕ್ಯಾನ್ ವಿಫಲವಾಯಿತು. ಕೂಡಲೇ ದೇವಸ್ಥಾನದ ಸಿಬ್ಬಂದಿ ಟಿಕೆಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ ಟಿಕೆಟ್‌ಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಹೇಳಿದರು.

ಆಗ ಶ್ರೀನಿವಾಸ್ ಅವರಿಗೆ ತಾವು ಮೋಸ ಹೋಗಿರುವ ವಿಷಯ ತಿಳಿಯಿತು. ಹಳೆಯ ವಿಐಪಿ ಬ್ರೇಕ್ ಟಿಕೆಟ್‌ಗಳ ಹೆಸರು ಮತ್ತು ದಿನಾಂಕವನ್ನು ಮಾರ್ಫಿಂಗ್ ಮಾಡಿ, ಬ್ರೋಕರ್ ಶ್ರೀನಿವಾಸ್‌ಗೆ ನಕಲಿ ಟಿಕೆಟ್‌ಗಳನ್ನು ನೀಡಿದ್ದಾನೆ. ಅವರು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ತಿರುಪತಿ ದೇವಸ್ಥಾನದ ವಿಜಿಲೆನ್ಸ್ ವಿಂಗ್ ಅನ್ನು ಸಂಪರ್ಕಿಸಿದ್ದಾರೆ.
ತಿರುಮಲ ಒನ್ ಟೌನ್ ನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ದೇವಸ್ತಾನದ ವಿಜಿಲೆನ್ಸ್ ವಿಭಾಗ ತನಿಖೆ ನಡೆಸುತ್ತಿದೆ. ಈ ಘಟನೆಯ ನಂತರ ಅಧಿಕಾರಿಗಳು ದಲ್ಲಾಳಿಗಳನ್ನು ಆಶ್ರಯಿಸಬೇಡಿ ಮತ್ತು ಮೋಸ ಹೋಗದಂತೆ ಭಕ್ತರನ್ನು ಕೋರಿದ್ದಾರೆ.
ಆದ್ದರಿಂದ ತಿರುಪತಿಗೆ ಹೋಗುವ ಭಕ್ತರು ದೇವಸ್ಥಾನದ ಅಧಿಕೃತ ವೆಬ್‌ಸೈಟ್ ttdevasthanams.ap.gov.in ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಅಥವಾ ನೇರವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಅವುಗಳನ್ನು ಖರೀದಿಸಬಹುದು. ಇದಲ್ಲದೇ ಟಿಕೆಟ್ ಬ್ಯಾಂಕ್ ಪ್ರವರ್ತಕರೆಂದು ಹೇಳಿಕೊಳ್ಳುವವರು ಹಾಗೂ ದೇವಸ್ತಾನದ ನೌಕರರು ಎಂದು ಹೇಳಿಕೊಳ್ಳುವವರಿಂದ ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications