ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ!
ದೇಶದ ಬಹುತೇಕ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ದೇಶದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಹಲವೆಡೆ ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ನೂರಾರು ವಿದ್ಯುತ್ ಕಂಬಗಳು, ಮರಗಳು ಸೇರದಂತೆ ಅಂಗಡಿಗಳು ಧರೆಗೆ ಉರುಳಿವೆ. ಹಾಗಾದರೆ ಯಾವ ರಾಜ್ಯಗಳಲ್ಲಿ ವರುಣನ ಅರ್ಭಟ ಹೇಗಿದೆ ಎಮದು ತಿಳಿಯೋಣ.

ಮಹಾರಾಷ್ಟ್ರ ಮಳೆ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ರಾತ್ರಿ ಕಾಮ್‌ಶೆಟ್ ಸುರಂಗದ ಬಳಿ ಹೊಸದಾಗಿ ಭೂಕುಸಿತ ಸಂಭವಿಸಿದ್ದು, ವಾಹನಗಳ ಚಲನೆಯ ಮೇಲೆ ಪರಿಣಾಮ ಬೀರಿದೆ. ಹೆದ್ದಾರಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಜನನಿಬಿಡ 6 ಪಥದ ರಸ್ತೆಯಲ್ಲಿನ ಅವಶೇಷಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ.
#WATCH | Severe waterlogging witnessed in several parts of Thane due to continuous heavy rainfall
— ANI (@ANI) July 27, 2023
Holiday declared for all the primary, secondary and higher secondary schools in Thane district on 28th July, in view of the heavy rainfall alert.#Maharashtra pic.twitter.com/CRmJrffCpa
ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುರುವಾರ ಮುಂಬೈನಲ್ಲಿ ಅಧಿಕ ಮಳೆಯಿಂದಾಗಿ ಹಲವಾರು ಪ್ರದೇಶಗಳಿಗೆ ನೀರು ನುಗ್ಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೆ ನೆರೆಯ ಜಿಲ್ಲೆಗಳಾದ ಥಾಣೆ ಮತ್ತು ರಾಯಗಡದಲ್ಲಿ 100 ಮಿಮೀ ಮಳೆಯಾಗಿದೆ. ಈ ತಿಂಗಳು ಇದುವರೆಗೆ ದಾಖಲೆಯ 1557.8 ಮಿಮೀ ಮಳೆಯಾಗಿದೆ ಎಂದು IMD ತಿಳಿಸಿದೆ. ಮಹಾರಾಷ್ಟ್ರದ ಪ್ರತ್ಯೇಕ ಸ್ಥಳಗಳಲ್ಲಿ ಶುಕ್ರವಾರ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಐಎಂಡಿ ಮುಂಬೈಗೆ ಆರೆಂಜ್ ಅಲರ್ಟ್ ಘೋಷಿಸಿದೆ.
VIDEO | Commuters face inconvenience as incessant rainfall causes waterlogging in several parts of Maharashtra's Nanded. pic.twitter.com/PFPLhShae1
— Press Trust of India (@PTI_News) July 28, 2023
ಬೆಳಿಗ್ಗೆ 8 ಗಂಟೆಗೆ ಹವಾಮಾನ ಮುನ್ಸೂಚನೆಯ ಪ್ರಕಾರ, ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುಂಬೈನ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ತಿಳಿಸಿದೆ.
ಥಾಣೆ, ಪಾಲ್ಘರ್‌ನಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಅಧಿಕ ಮಳೆಯ ಎಚ್ಚರಿಕೆಯ ನಡುವೆ, ಥಾಣೆ, ಪಾಲ್ಘರ್ ಮತ್ತು ರತ್ನಗಿರಿ ಸೇರಿದಂತೆ ಹಲವು ಮಹಾರಾಷ್ಟ್ರ ಜಿಲ್ಲೆಗಳಲ್ಲಿ ಎಲ್ಲಾ ಶಾಲೆಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಸತತ ಭಾರೀ ಮಳೆಯಿಂದಾಗಿ ಥಾಣೆಯ ಹಲವು ಭಾಗಗಳು ಜಲಾವೃತವಾಗಿದೆ.
ತೆಲಂಗಾಣದಲ್ಲಿ ಮಳೆ
ತೆಲಂಗಾಣದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಳುಗು ಜಿಲ್ಲೆಯ ವೆಂಕಟಾಪುರ ಮಂಡಲದ ಲಕ್ಷ್ಮೀದೇವಿಪೇಟೆ ಗ್ರಾಮದಲ್ಲಿ 64.9 ಸೆಂ.ಮೀ ಮಳೆಯಾಗಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಇದಕ್ಕೂ ಮೊದಲು ಜುಲೈ 19, 2013 ರಂದು ಮುಳುಗು ಜಿಲ್ಲೆಯ ವಾಜೇಡು ಎಂಬಲ್ಲಿ 51.75 ಸೆಂ.ಮೀ ಮಳೆ ದಾಖಲಾಗಿತ್ತು.












Click it and Unblock the Notifications