ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯ್ದಿರಿಸಿದ ರೈಲ್ವೆ ಟಿಕೆಟ್ ಖಚಿತತೆ ಮಾಹಿತಿಗೆ ಹೊಸ ಸಾಫ್ಟ್‌ವೇರ್

By Nayana
|
Google Oneindia Kannada News

ಬೆಂಗಳೂರು, ಮೇ 30: ಭಾರತೀಯ ರೈಲ್ವೆಯ ಐಆರ್‌ಟಿಸಿ ಬದಲಾಗಿದ್ದು, ಹೊಸ ರೂಪ ಪಡೆದುಕೊಂಡಿದೆ. ಇನ್ನುಮುಂದೆ ಜನರಿಗೆ ಸೀಟು ಲಭ್ಯವಾಗುವ ಶೇಕಡಾವಾರು ಚಾನ್ಸ್‌ ಬಗ್ಗೆಯೂ ಮುನ್ಸೂಚನೆ ನೀಡಲಿದೆ. ಕಾಯ್ದಿರಿಸಿದ ಟಿಕೆಟ್‌ ಕುರಿತು ಇನ್ನು ಮಾಹಿತಿ ಸುಲಭವಾಗಿ ದೊರೆಯಲಿದೆ.

ವೇಟಿಂಗ್ ಲಿಸ್ಟ್‌ ಅಥವಾ ಆರ್‌ಎಸಿಯಲ್ಲಿರುವ ಪ್ರಯಾಣಿಕರಿಗೆ ಸೀಟು ಖಾತ್ರಿಯಾಗುವ ಸಂಭವನೀಯತೆಯನ್ನು ತಿಳಿಸುವಂಥ ತಂತ್ರಾಂಶವನ್ನು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ಅಭಿವೃದ್ಧಿ ಪಡಿಸಿದೆ. ಈ ತಂತ್ರಾಂಶವು ಸೀಟು ಖಾತ್ರಿಗೊಳ್ಳುವ ಸಂಭವನೀಯತೆ ಎಷ್ಟು ಎಂಬುದರ ಮಾಹಿತಿ ಒದಗಿಸುತ್ತದೆ.

ರೈಲು ರದ್ದಾದರೆ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ರೀಫಂಡ್ರೈಲು ರದ್ದಾದರೆ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ರೀಫಂಡ್

ಈಗಿರುವ ವ್ಯವಸ್ಥೆಯಲ್ಲಿ ರೈಲು ಹೊರಡುವುದಕ್ಕೆ ಕೆಲವು ತಾಸು ಮೊದಲು ಟಿಕೆಟ್ ಖಾತ್ರಿಯಾದ ಮಾಹಿತಿ ಲಭ್ಯವಾಗುತ್ತದೆ. ಇದು ಗೊತ್ತಾಗುವವರೆಗೂ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ಆತಂಕವಿರುತ್ತದೆ.

Waiting list info will more updated now

ಇಂತಹ ದುಗುಡವನ್ನು ಹೋಗಲಾಡಿಸಲು ಯಾವುದಾದರೂ ಉಪಾಯವನ್ನು ಕಂಡಿ ಹಿಡಿಯುವಂತೆ ರೈಲ್ವೆ ಸಚಿವರು ತಿಳಿಸಿದ್ದರು. ಈ ಕಾರಣದಿಂದಾಗಿ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Indian Railway Catering and Tourism Corporation had developed a software that shows possibilities of confirmation of seats for the waiting list and RAC passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X