ಮತದಾನ ದಿನ : ದೇಶದ 8 ರಾಜ್ಯಗಳ, 10 ಕ್ಷೇತಗಳಲ್ಲಿ ವೋಟಿಂಗ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ದೇಶದ 8 ರಾಜ್ಯಗಳ, 10 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ನಡುವೆ ಉಪ ಚುನಾವಣೆ ಮತದಾನ ನಡೆಯುತ್ತಿದೆ. ಶ್ರೀನಗರದಲ್ಲಿ ಒಂದು ಲೋಕಸಭೆ ಕ್ಷೇತ್ರಕ್ಕೂ ಭಾನುವಾರದಂದೆ ಮತದಾನ ನಡೆಯುತ್ತಿದೆ.

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಮತದಾನ ಆರಂಭವಾಗಿದೆ. ಕಣಿವೆ ರಾಜ್ಯದಲ್ಲಿ ಮತದಾನ ನಡೆಯುತ್ತಿರುವ ಕ್ಷೇತ್ರದಲ್ಲಿ ಇಂಟರ್ನೆಟ್ ಸೌಲಭ್ಯ ಬಂದ್ ಮಾಡಲಾಗಿದೆ. [LIVE ನಂಜನಗೂಡು: ಕಳಲೆ ಕೇಶವ ಮೂರ್ತಿಯಿಂದ ನೀತಿ ಸಂಹಿತೆ ಉಲ್ಲಂಘನೆ]

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು ಸ್ಪರ್ಧಾಕಣದಲ್ಲಿದ್ದಾರೆ. ಹಿಜ್ಬುಲ್ ಮುಜಾಹೀದ್ದೀನ್ ನಾಯಕ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ನಾಯಕ ತಾರೀಕ್ ಹಮೀದ್ ಅವರು ರಾಜೀನಾಮೆ ನೀಡಿದ ಬಳಿಕ ಈ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯುತ್ತಿದೆ.[LIVE ಗುಂಡ್ಲುಪೇಟೆ: ಎರಡು ಮತಗಟ್ಟೆಗಳ ಮತಯಂತ್ರಗಳಲ್ಲಿ ತಾಂತ್ರಿಕ ದೋಷ]

Voting is underway in 10 assembly constituencies in 8 states including Srinagar, Nanjangud and Delhi in by-elections today(April 09).

ಎಲ್ಲೆಲ್ಲಿ ಮತದಾನ: ಕರ್ನಾಟಕದ ನಂಜನಗೂಡು ಹಾಗೂ ಗುಂಡ್ಲುಪೇಟೆಯ ವಿಧಾನಸಭಾ ಕ್ಷೇತ್ರ ಹಾಗೂ ದೆಹಲಿಯ ರಾಜೌರಿ ಗಾರ್ಡನ್‌, ಜಾರ್ಖಂಡ್‌‌ನ ಲಿತಿಪರ್‌, ರಾಜಸ್ಥಾನ ಧೋಲ್ಪುರ್‌‌, ಪಶ್ವಿಮ ಬಂಗಾಳದ ಕಂತಿ ದಕ್ಷಿಣ್‌, ಮಧ್ಯಪ್ರದೇಶದ ಅತೆರ್ ಮತ್ತು ಬಂಧವ್‌ ಘರ್‌‌, ಹಿಮಾಚಲ ಪ್ರದೇಶದ ಬೋರಂಜ್‌ ಮತ್ತು ಅಸ್ಸಾಂನ ಧೇಮೈ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಶ್ರೀನಗರ ಲೋಕಸಭೆ ಕ್ಷೇತ್ರದ ಮತ ಎಣಿಕೆ ಏಪ್ರಿಲ್‌ 15ರಂದು ನಡೆಯಲಿದ್ದು, 10 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಏಪ್ರಿಲ್‌ 13ರಂದು ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Voting is underway in 10 assembly constituencies in 8 states including Srinagar, Nanjangud and Delhi in by-elections today(April 09).
Please Wait while comments are loading...