Visakhapatnam: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ, ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.

ವಿಶಾಖಪಟ್ಟಣಂ, ಜನವರಿ, 31: ಆಂಧ್ರಪ್ರದೇಶ ಹೊಸ ರಾಜಧಾನಿ ಘೋಷಣೆಯಾಗಿದೆ. ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಂಗಳವಾರ ಘೋಷಿಸಿದರು.

ವೈಜಾಗ್ ಎಂದು ಜನಪ್ರಿಯವಾಗಿರುವ ವಿಶಾಖಪಟ್ಟಣಂ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಹೇಳಿದರು.

" ನಾನು ನಿಮ್ಮನ್ನು ಆಂಧ್ರಪ್ರದೇಶದ ರಾಜಧಾನಿಗೆ ಆಹ್ವಾನಿಸುತ್ತೇನೆ. ವಿಶಾಖಪಟ್ಟಣಂ ಹೊಸ ರಾಜಧಾನಿಯಾಗಲಿದೆ. ನಾನು ಕೂಡ ವಿಶಾಕಪಟ್ಟಣಕ್ಕೆ ನನ್ನ ಮನೆಯನ್ನು ಬದಲಾಯಿಸುತ್ತೇನೆ" ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದರು.

Vishakapatnam will be Andhra Pradeshs new capital

"ಮಾರ್ಚ್ 3 ಮತ್ತು 4 ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಆಂಧ್ರಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ ನಾನು ನಿಮ್ಮನ್ನು ನಮ್ಮ ಸುಂದರ ರಾಜ್ಯಕ್ಕೆ ಆಹ್ವಾನಿಸುತ್ತೇನೆ. ಸ್ವಾಗತ!" ಎಂದು ಟ್ವೀಟ್ ಮಾಡಿದ್ದಾರೆ.

2014 ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಬೇರ್ಪಡಿಸಿ, ಹೊಸ ರಾಜ್ಯವನ್ನಾಗಿಸಿದಾಗ ತೆಲಂಗಾಣವು ಹೈದರಾಬಾದ್ ಅನ್ನು ತನ್ನ ರಾಜಧಾನಿಯಾಗಿ ಪಡೆಯಿತು.

2015 ರಲ್ಲಿ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ಹೈದರಾಬಾದ್‌ನಿಂದ ಮಧ್ಯಂತರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೃಷ್ಣಾ ನದಿಯ ದಡದಲ್ಲಿರುವ ಅಮರಾವತಿಯನ್ನು ಹೊಸ ರಾಜಧಾನಿಯಾಗಿ ರೂಪಿಸುವುದಾಗಿ ಘೋಷಿಸಿತ್ತು.

ನಂತರ 2020 ರಲ್ಲಿ, ರಾಜ್ಯವು ಮೂರು ರಾಜಧಾನಿಗಳನ್ನು ಘೋಷಿಸಿತ್ತು. ಕಾರ್ಯಾಂಗಕ್ಕೆ ವಿಶಾಖಪಟ್ಟಣಂ, ಶಾಸಕಾಂಗಕ್ಕೆ ಅಮರಾವತಿ ಮತ್ತು ನ್ಯಾಯಾಂಗಕ್ಕೆ ಕರ್ನೂಲ್ ಎಂದು ಹೇಳಲಾಗಿತ್ತು. ಈ ಯೋಜನೆಗೆ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿತ್ತು. ಬಳಿಕ, ಆ ಆದೇಶವನ್ನು ವಾಪಸ್ ಪಡೆದು, ಔಪಚಾರಿಕವಾಗಿ ಅಮರಾವತಿಯನ್ನೇ ರಾಜಧಾನಿಯನ್ನಾಗಿಸಿಕೊಂಡಿದೆ.

ಅಮರಾವತಿ ಆಪಾದಿತ ಭೂ ಹಗರಣದ ಕೇಂದ್ರವಾಗಿದೆ. ಹೀಗಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪಕ್ಷದ ವೈಎಸ್‌ಆರ್‌ಸಿಪಿ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ತನಿಖೆಗೆ ಒತ್ತಾಯಿಸಿದೆ.

ಇನ್ನು, ಜಗನ್ ಮೋಹನ್ ರೆಡ್ಡಿ ಈ ಹಿಂದೆ ಘೋಷಿಸಿದಂತೆ ಮೂರು ರಾಜಧಾನಿ ಯೋಜನೆಗೆ ಅಂಟಿಕೊಂಡೆ ಕೆಲಸ ಮಾಡಲು ನಿರ್ಧರಿಸಿದ್ದು, ವಿಶಾಖಪಟ್ಟಣಂಗೆ ಸ್ಥಳಾಂತರವಾಗುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+