ಮುಂಬೈನ ಅಲಿಬಾಗ್‌ನಲ್ಲಿ ಅದ್ದೂರಿ ವಿಲ್ಲಾ ಖರೀದಿಸಿದ ವಿರಾಟ್ ಕೊಹ್ಲಿ: ವಿಡಿಯೋ
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈನ ಅಲಿಬಾಗ್‌ನಲ್ಲಿ ಅದ್ದೂರಿ ವಿಲ್ಲಾ ಖರೀದಿಸಿದ್ದಾರೆ. ಅದರ ವಿಡಿಯೋ ಸಾಮಾಝಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ವಿರಾಟ್ ಕೊಹ್ಲಿ (34) ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಅದ್ದೂರಿ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಅಲಿಬಾಗ್ ವಿಲ್ಲಾ 2,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ವಿಲ್ಲಾ ಅಲಿಬಾಗ್‌ನ ಆವಾಸ್ ವಿಲೇಜ್‌ನಲ್ಲಿರುವ ಐಷಾರಾಮಿ ಬಂಗಲೆಯಾಗಿದೆ. ಇದರ ವೆಚ್ಚ 6 ಕೋಟಿ ರೂಪಾಯಿ. ಆವಾಸ್ ನೈಸರ್ಗಿಕ ಸೌಂದರ್ಯ ಹೊಂದಿದ ಸ್ಥಳವಾಗಿದೆ.
ಜೊತೆಗೆ, ಮಾಂಡ್ವಾ ಜೆಟ್ಟಿಯು ಆವಾಸ್‌ನಿಂದ ಐದು ನಿಮಿಷಗಳ ದೂರದಲ್ಲಿದೆ. ಸ್ಪೀಡ್ ಬೋಟ್‌ಗಳು ಮುಂಬೈನ ಈ ಸ್ಥಳಕ್ಕೆ 15 ನಿಮಿಷಗಳಲ್ಲಿ ತಲುಪುತ್ತವೆ" ಎಂದು ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಹೇಶ್ ಮ್ಹಾತ್ರೆ ಹೇಳಿದರು.

ಕ್ರಿಕೆಟಿಗ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ನಿರತರಾಗಿರುವ ಕಾರಣ ವಿರಾಟ್ ಸಹೋದರ ವಿಕಾಸ್ ಕೊಹ್ಲಿ ವಿಲ್ಲಾ ನೋಂದಣಿಗೆ ಬಂದಿದ್ದಾರೆ ಎಂದು ಮ್ಹಾತ್ರೆ ಹೇಳಿದ್ದಾರೆ. 400 ಚದರ ಅಡಿಯ ಈಜುಕೊಳವನ್ನು ಒಳಗೊಂಡಿರುವ ವಿಲ್ಲಾವನ್ನು ಹೊಂದಲು ಕೊಹ್ಲಿ 36 ಲಕ್ಷ ರೂಪಾಯಿಗಳನ್ನು ಸ್ಟ್ಯಾಂಪ್ ಗಾಗಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಅಲಿಬಾಗ್‌ನಲ್ಲಿ ಕೊಹ್ಲಿ ಖರೀದಿಸಿದ ಎರಡನೇ ಆಸ್ತಿ ಇದಾಗಿದೆ ಎಂಬುದನ್ನು ಮರೆಯುವಂತಿಲ್ಲ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿರಾದ್ ಗ್ರಾಮದಲ್ಲಿ ₹19.24 ಕೋಟಿಗೆ 36,059 ಚದರ ಅಡಿಯ ಫಾರ್ಮ್‌ಹೌಸ್ ಖರೀದಿಸಿದ್ದರು.
ಅಲಿಬಾಗ್‌ನಲ್ಲಿರುವ ಕೊಹ್ಲಿಯ ಹೊಸ ವಿಲ್ಲಾ ಹೇಗಿದೆ ವೀಕ್ಷಿಸಿ:-












Click it and Unblock the Notifications