ವಿಡಿಯೋ: ರಸ್ತೆ ಮಧ್ಯೆ ಡ್ಯಾನ್ಸ್ ಮಾಡ್ತಿದ್ದ ಹುಡುಗಿಗೆ ಕಪಾಳಮೋಕ್ಷ

Subscribe to Oneindia Kannada

ಕನ್ನೂರು, ಮಾರ್ಚ್, 28: ವಿದ್ಯಾರ್ಥಿಗಳೊಂದಿಗೆ ಸೇರಿ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಹುಡುಗಿಯೊಬ್ಬಳಿಗೆ ಸರಿಯಾಗೇ ಬಾರಿಸಲಾಗಿದೆ. ಇಂಥದ್ದೊಂದು ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಕೇರಳದ ಕನ್ನೂರಿನಲ್ಲಿ ಘಟನೆ ನಡೆದಿದೆ. ಬಸ್ ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರು. ಒಂದು ಹಾಡನ್ನು ಮುಗಿಸಿ ಇನ್ನೊಂದಕ್ಕೆ ಡ್ಯಾನ್ಸ್ ಮಾಡಲು ಆರಂಭಿಸಬೇಕು ಎಂದಾಗ ಹುಡುಗರ ಗುಂಪಿನೊಂದಿಗೆ ಸೇರಿಕೊಂಡು ನೃತ್ಯ ಮಾಡುತ್ತಿದ್ದ ಹುಡುಗಿಯನ್ನು ತಡೆದು ನಿಲ್ಲಿಸಿದ ಮಹಿಳೆಯರೊಬ್ಬರು ಸರಿಯಾಗಿ ಬಾರಿಸಿದ್ದಾರೆ.[ಸುಂದರ ನೃತ್ಯಗಾರ್ತಿಯೊಂದಿಗೆ ಒಬಾಮಾ ಡ್ಯಾನ್ಸ್..ಡ್ಯಾನ್ಸ್]

kerala

ಬಾರಿಸಿದ ಮಹಿಳೆ ಹುಡುಗಿಯ ಹೆತ್ತ ತಾಯಿಯೇ ಎನ್ನುವುದು ವಿಶೇಷ! ಬಸ್ ನಿಲ್ದಾಣದಲ್ಲಿ ಯುವಕರ ಗುಂಪು ಜನರಿಗೆ ತೊಂದರೆ ಮಾಡುತ್ತ ನೃತ್ಯ ಮಾಡುತ್ತಿತ್ತು. ಟ್ರಾಫಿಕ್ ಸಮಸ್ಯೆ ಕೂಡಾ ಎದುರಾಗಿತ್ತು. ಒಂದು ಹಾಡು ಮುಗಿಯಲು ಕಾಯುತ್ತಿದ್ದ ತಾಯಿ ಬಂದು ಗುಂಪಿನ ಮಧ್ಯದಲ್ಲಿದ್ದ ಮಗಳಿಗೆ ಬಾರಿಸಿದ್ದಾಳೆ.[ಅಫ್ರೀದಿನ್ನ ಸುಮ್ನೆ ಬಿಡಲ್ಲ ಅಂದ ಬೆತ್ತಲೆ ಬ್ಯೂಟಿಯ ವಿಡಿಯೋ]

ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಯುವಜನತೆ ಮುಂದೆ ಇಂಥಹ ಅನಗತ್ಯ ನೃತ್ಯ ಮಾಡಿ ನಾಗರಿಕರಿಗೆ ತೊಂದರೆ ನೀಡಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Kerala, a woman on Sunday, March 27, slapped a girl who was performing with a flash mob in a busy street of Kannur. The flash mob was inspired from stage shows. The group members of that flash mob also perform in theaters, on crowded streets and shopping malls. According to media reports, the group of students were performing their dance form on a busy street of the city bus stand.
Please Wait while comments are loading...