ವೈರಲ್ ವಿಡಿಯೋ: ಕರಾಕುಲ್ ಟೋಪಿ ಧರಿಸೋಕೆ ಒಲ್ಲೆ ಎಂದ ಯೋಗಿ
Recommended Video

ಮಘರ್, ಜೂನ್ 28: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ ಕಬೀರರ ಸಮಾಧಿ ಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಕರಾಕುಲ್ ಟೋಪಿ ಧರಿಸಲು ಒಲ್ಲೆ ಎಂದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಜೂನ್ 27 ರಂದು ಸಂತ ಕಬೀರರ ಸಮಾಧಿ ಸ್ಥಳಕ್ಕೆ ತೆರಳಿದ್ದ ಅವರಿಗೆ ಕರಾಕುಲ್ ಟೋಪಿಯನ್ನು ಹಾಕಲು ವ್ಯಕ್ತಿಯೊಬ್ಬರು ಬಂದರು. ಆದರೆ ಅವರು ತಕ್ಷಣವೇ ಅದನ್ನು ನಿರಾಕರಿಸಿದರು. ನಂತರ ಕೈಯಲ್ಲಿ ಆ ಟೋಪಿ ನೀಡುವುದಕ್ಕೆ ಬಂದಾಗಲೂ ಅವರು ನಯವಾಗಿಯೇ ಅದನ್ನು ನಿರಾಕರಿಸಿದರು!
#WATCH: UP CM Yogi Adityanath refuses to wear karakul cap offered to him at Sant Kabir's Mazar in Maghar. (27.06.2018) pic.twitter.com/MYb9Mar3WP
— ANI UP (@ANINewsUP) June 28, 2018
ಸಾಮಾನ್ಯವಾಗಿ ಜಿನ್ನಾ ಟೋಪಿ ಎಂದೇ ಪ್ರಸಿದ್ಧಿ ಪಡೆದ ಈ ಕರಾಕುಲ್ ಟೋಪಿಯನ್ನು ಧರಿಸಲು ಯೋಗಿ ಒಲ್ಲೆ ಎಂದಿದ್ದಕ್ಕೆ ಕಾರಣವೇನು? ನಿಜ ಹೇಳಬೇಕೆಂದರೆ ಕಾಶ್ಮೀರದಲ್ಲಿ ಈ ಟೋಪಿಯನ್ನು ಹಿಂದು-ಮುಸ್ಲಿಮರಿಬ್ಬರೂ ಧರಿಸುತ್ತಾರೆ.

ಆದರೆ ಹೆಚ್ಚಾಗಿ ಈ ಟೋಪಿಯನ್ನು ಮುಸಲ್ಮಾನರೇ ತೊಡುತ್ತಾರೆ. ಮತ ಬ್ಯಾಂಕಿಗಾಗಿ ಮುಸ್ಲಿಮರನ್ನು ಯೋಗಿ ಓಲೈಸುತ್ತಿದ್ದಾರೆಂದು ಮಾಧ್ಯಮಗಳಲ್ಲಿ ಟ್ರೋಲ್ ಆಗಬಾರದೆಂಬ ಭಯಕ್ಕೆ ಯೋಗಿ ಒಲ್ಲೆ ಎಂದರಾ? ಗೊತ್ತಿಲ್ಲ. ಆದರೆ ವಿಡಿಯೋ ವೈರಲ್ ಆಗಿದ್ದಂತೂ ಸತ್ಯ!












Click it and Unblock the Notifications