ವಿಡಿಯೋ: ಹುಂಜದ ನೃತ್ಯ ಮಾಡಿದ ವ್ಯಕ್ತಿ- ನೆಟ್ಟಿಗರು ಫುಲ್ ಖುಷ್

ಇದು ಮದುವೆಯ ಸಂದರ್ಭವಾಗಲಿ ಅಥವಾ ಯಾವುದೇ ಕಾರ್ಯಕ್ರಮವಾಗಲಿ ಜನರು ನೃತ್ಯ ಮಾಡುವುದು ಸರ್ವೇ ಸಾಮಾನ್ಯ. ನಂತರ ಅವರ ನೃತ್ಯ ಪ್ರದರ್ಶನದ ವಿಡಿಯೊಗಳನ್ನು ಹಂಚಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ನೆಟಿಜನ್‌ಗಳು ವೀಕ್ಷಿಸಲು ಇಷ್ಟಪಡುವ ಕಾರಣ ಅಂತಹ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗ ವೈರಲ್ ಆಗಿಬಿಡುತ್ತವೆ.

ವ್ಯಕ್ತಿಯೊಬ್ಬರು ಡ್ಯಾನ್ಸ್ ಮಾಡಿದ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡ್ ಶುರು ಮಾಡಿದೆ. ಆಶಿಕಾಲಿ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು 5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಕೆಂಪು ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ವ್ಯಕ್ತಿ ವೇದಿಕೆಯ ಮೇಲೆ ಹೋಗಿ ಹುಂಜದ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಕೋಳಿಯಂತೆ ಮುಖಭಾವದೊಂದಿಗೆ ವಿವಿಧ ಹಂತಗಳನ್ನು ಪ್ರದರ್ಶಿಸುತ್ತಾನೆ. ಹಿನ್ನಲೆಯಲ್ಲಿ ಭಾರೀ ಜನಸಮೂಹವು ವ್ಯಕ್ತಿಯ ನೃತ್ಯವನ್ನು ಆನಂದಿಸುತ್ತದೆ.

Viral video: The man who performed the rooster dance - netizens are full of happiness

ವ್ಯಕ್ತಿಯ ಹುಂಜದ ನೃತ್ಯದ ವಿಡಿಯೋ ಇಲ್ಲಿ ವೀಕ್ಷಿಸಿ-

ಅದೇ ರೀತಿ ಇಲ್ಲೊಂದು ಗ್ರಾಮವೊಂದರಲ್ಲಿ ಆಂಟಿ ಒಬ್ಬಳು ಹುಂಜದ ಡಾನ್ಸ್ ಮಾಡಲಿದ್ದಾರೆ. ಹಾಡು ಮೊಳಗುತ್ತಿರುವುದನ್ನು ನೀವು ವಿಡಿಯೋದಲ್ಲಿ ಕೇಳಬಹುದು. ಈ ವೇಳೆ ಅಲ್ಲಿದ್ದ ಓರ್ವ ಆಂಟಿ ಹಿಂದೆಮುಂದೆ ನೋಡದೆ ಹಾಡಿಗೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾಳೆ. ಆಂಟಿ ಈ ಹಾಡಿನ ಮೇಲೆ ಹಾಕಾಕಾರವೇ ಸೃಷ್ಟಿಸಿದ್ದಾಳೆ ಎಂದರೆ ತಪ್ಪಾಗಲಾರದು. ಆಂಟಿಯ ಈ ನೃತ್ಯವನ್ನು ನೋಡಿದ ಮತ್ತು ಅಲ್ಲಿ ನೆರೆದ ಇತರ ಮಹಿಳೆಯರು ಕೂಡ ಶಾಕ್ ಆಗಿದ್ದಾರೆ. ಆಂಟಿಯ ಈ ವಿಡಿಯೋ ಕೇವಲ ಗ್ರಾಮಸ್ಥರ ಗಮನ ಸೆಳೆಯುವಲ್ಲಿ ಮಾತ್ರ ಯಶಸ್ವಿಯಾಗದೆ, ಇಡೀ ನೆಟ್ಟಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಯಾವುದಕ್ಕೂ ಮೊದಲು ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ...

ಜನ ಏನು ಅಂದುಕೊಳ್ಳುತ್ತಾರೆ ಎಂಬುದರ ಪರಿವೆ ಆಂಟಿಗಿಲ್ಲ ಎಂಬುದನ್ನು ನೀವು ನೋಡಬಹುದು. ಅಷ್ಟೇ ಯಾಕೆ ಜಗತ್ತಿನಲ್ಲೇ ಏನು ನಡೆಯುತ್ತಿದೆ ಎಂಬುದರ ಪರಿವೆ ಇಲ್ಲದೆ ತನ್ನದೇ ಆದ ಲೋಕದಲ್ಲಿ ಆಂಟಿ ಮುಳುಗ್ಹೋಗಿದ್ದಾಳೆ. ಆಂಟಿಯ ಈ ನೃತ್ಯವನ್ನು ನೋಡಿದ ಜನರು ಹೊಟ್ಟೆಗೆ ಹುಣ್ಣಾಗುವವರೆಗೆ ನಗುತ್ತಿದ್ದಾರೆ. ಆಂಟಿಯ ಈ ಅದ್ಭುತ ಡಾನ್ಸ್ ನೋಡಲು ಆಕೆಯ ಮನೆಯಂಗಳಕೆ ನೆರೆಹೊರೆಯ ಆಂಟಿಯರು ಕೂಡ ಧಾವಿಸಿರುವುದನ್ನು ನೀವು ನೋಡಬಹುದು. ದೇಸಿ ಆಂಟಿ ಡಾನ್ಸ್ ಶುರು ಮಾಡುತ್ತಲೇ ಎಲ್ಲರೂ ನಗಲು ಆರಂಭಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+