ವೈರಲ್ ಆಯ್ತು ನೋಯ್ಡಾದಲ್ಲಿ ನಡೆದ ಆ ಭೀಕರ ರಸ್ತೆ ಅಪಘಾತದ ವಿಡಿಯೋ!
ಗ್ರೇಟರ್ ನೋಯ್ಡಾ(ಉತ್ತರ ಪ್ರದೇಶ), ಜುಲೈ 10: ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇಯಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಒಬ್ಬ ವ್ಯಕ್ತಿ ಮೃತಗೊಂಡಿದ್ದು, ಈ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇ ಯಲ್ಲಿ ಚಲಿಸುತ್ತಿದ್ದ ಲಂಬೋರ್ಗಿನಿ ಕಾರೊಂದನ್ನು ಮಾರುತಿ ಸ್ವಿಫ್ಟ್ ಡಿಸಾಯರ್ ಕಾರು ಓವರ್ ಟೇಕ್ ಮಾಡುವುದಕ್ಕೆಂದು ಬಂದಾಗ ಅಪಘಾತ ತಪ್ಪಿಸುವುದಕ್ಕೆಂದು ಎಡಕ್ಕೆ ಹೊರಳಿದ ಲಂಬೋರ್ಗಿನಿ, ಎಡದಿಂದ ವೇಗದಿಂದ ಬರುತ್ತಿದ್ದ ಮಾರುತಿ ಇಕೋ ಗೆ ಡಿಕ್ಕಿ ಹೊಡೆದ ಪರಿಣಾಮ, ಮಾರುತಿ ಇಕೋ ರಸ್ತೆಯಿಂದಾಚೆ ಹೋಗಿಬಿದ್ದಿದೆ.
Speed Kills: The deadly fatal accident at Noida-Greater Noida expressway @dna pic.twitter.com/yW0SHc4xLQ
— Sumit Kumar Singh (@invincibleidea) July 9, 2017
ಇಕೋ ಚಾಲಕ ಮೃತನಾಗಿದ್ದು, ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಅತೀ ವೇಗದಿಂದಾಗಿ ಈ ರಸ್ತೆಯಲ್ಲಿ ಆಗಾಗ ಇಂಥ ಘಟನೆಗಳು ನಡೆಯುತ್ತಲೇ ಇರುವುದು ದುರದೃಷ್ಟಕರ ಎಂದು ಇಲ್ಲಿನ ಟ್ರಾಫಿಕ್ ಪೊಲೀಸರು ಅಭಿಪ್ರಾಯಪಡುತ್ತಾರೆ.












Click it and Unblock the Notifications