Viral Video: ವೈನ್ ಶಾಪ್‌ಗೆ ನುಗ್ಗಿದ ಕೋತಿ! ಜನರ ಮಧ್ಯೆ ಫುಲ್ ಬಾಟಲ್ ಎಣ್ಣೆ ಹೊಡೆದು ಮಾಡಿದ್ದೇನು?
Viral Video: 'ಕೋತಿಗೆ ಹೆಂಡ ಕುಡಿಸಿದಂಗಾಯ್ತು' ಎಂದು ಕೆಲವು ಸಂದರ್ಭಗಳಲ್ಲಿ ನಾವುಗಳು ಹೇಳಿವುದುಂಟು. ಮೂರ್ಖ ವ್ಯಕ್ತಿಯನ್ನು ರೇಗಿಸಿದರೆ, ಮತ್ತಷ್ಟು ಉದ್ರೇಕಿಸಿದರೆ ಅವರ ನಡೆ ಮತ್ತಷ್ಟು ಹಾಸ್ಯಾಸ್ಪದ, ಹಾನಿಕಾರವು ಆಗಿರುತ್ತದೆ. ಅಂತೆಯೇ ಕೋತಿಯು ಒಂದು ಕಡೆ ಸುಮ್ಮನೆ ಕೂರುವುದಿಲ್ಲ. ಅದಕ್ಕೆ ಹೆಂಡ (ಮದ್ಯ) ಕುಡಿಸಿದ್ರೆ ಏನೆಲ್ಲ ತಾಪತ್ರಯ, ಕೀಟಲೆ, ವಾತಾವರಣ ಹಾಳು ಮಾಡಿಬಿಡಬಹುದು ಎಂಬುದನ್ನು ಸೂಚಿಸುವಂತೆ ಈ ಮೇಲಿನ ಮಾತನ್ನು ಸಾಂದರ್ಭಿಕವಾಗಿ ಹೇಳಲಾಗುತ್ತದೆ. ಇದೀಗ ಇಲ್ಲೊಂದು ಕೋತಿ ಮದ್ಯದಂಗಡಿಗೆ ಬಂದು ಗಡದ್ದಾಗಿ ಎಣ್ಣೆ ಹೊಡೆದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಮುಂದೇನಾಯ್ತು....?
ಜಾರ್ಖಂಡ್ ರಾಜ್ಯದ ರಾಂಚಿಯ ಓರ್ಮಾಂಜಿಯಲ್ಲಿ ಈ ಘಟನೆ ನಡೆದಿದೆ. ಮನುಷ್ಯರಂತೆ ವೈನ್ ಶಾಪ್‌ಗೆ ಬಂದು ಹೊಟ್ಟೆ ತುಂಬಾ ಎಣ್ಣೆ ಹೊಡೆದಿದೆ. ವಿಡಿಯೋ ನೋಡಲು ತಮಾಷೆ ಅನಿಸಿದರೂ ಕೋತಿಯ ಪಾಡು ಕೋತಿಗಾಗಿದೆ. ಸದ್ಯ ಘಟನೆಯಲ್ಲಿ ಮಂಗನನ್ನು ರಕ್ಷಣೆ ಮಾಡಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಫುಲ್ ಬಾಟಲಿ ಎಣ್ಣೆ ಹೊಡೆದ ಕೋತಿ!
ವೈನ್ ಶಾಪ್‌ಗೆ ನುಗ್ಗಿ ಮದ್ಯ ಕುಡಿದು ನಿದ್ರೆಗೆ ಜಾರಿದೆ. ವಿಡಿಯೋದಲ್ಲಿ ವೈನ್ ಶಾಪ್ ವಿತರಣೆ ಮಾಡುವ ಜಾಗದಿಂದ ಮಂಗ ಕಾಣಿಸುತ್ತದೆ. ಓಡ್ಕಾ ಬಾಟಲಿಯನ್ನು ಫುಲ್ ಕುಡಿದಿದೆ ಎನ್ನಲಾಗಿದೆ. ಅಂಗಡಿ ಸಿಬ್ಬಂದಿ ಬಾಟಲಿಯನ್ನು ಸಹ ಕ್ಯಾಮೆರಾಗೆ ತೋರಿಸುತ್ತಾರೆ. ಗ್ರಾಹಕರು ಸೇರಿದಂತೆ ಅಂಗಡಿ ಸಿಬ್ಬಂದಿ ಇದ್ದಾಗಲೇ ಈ ಘಟನೆ ನಡೆದಿದೆ.
ಒಂದು ಕ್ವಾಟರ್ ನಲ್ಲಿ ಬಹುತೇಕ ಎಣ್ಣೆಯನ್ನು ಕುಡಿದು ಅಲ್ಲಿಯೇ ಇರುವ ಇತರ ಸ್ಟಾಕ್ ಮದ್ಯ ಬಾಟಲಿ ಬಾಕ್ಸ್ ಮೇಲೆ ಅರಿವಿಲ್ಲದೇ ಮಲಗಿ ಬಿಟ್ಟಿದೆ. ಈ ಕೋಟಿ ಮದ್ಯದಂಗಡಿ ಒಳಗೆ ಹೇಗೆ ಬಂತು, ಮದ್ಯವನ್ನು ಯಾರಾದರೂ ಮುಚ್ಚಳ ತೆಗೆದು ದುರುದ್ದೇಶಪೂರ್ವಕವಾಗಿ ಕೊಟ್ಟರೆ ಅಥವಾ ಕೋತಿಯೇ ಚೇಷ್ಟೆ ಮಾಡಿಕೊಂಡು ನೀರೆಂದು ಭಾವಿಸಿ ಮದ್ಯ ಕುಡಿಯಿತಾ ಎಂಬುದು ಗೊತ್ತಾಗಬೇಕಿದೆ.
ಜಗತ್ತಿನ ಪರಿವೇ ಇಲ್ಲ ಮಲಗಿರುವ ಕೋತಿ!
ಮದ್ಯ ಕುಡಿದ ಬಳಿಕ ನಶೆ ಏರುತ್ತಿದ್ದಂತೆ ಕೋತಿಗೆ ನಡೆಯಲು ಸಹ ಆಗಿಲ್ಲ. ಮೈಮೇಲೆ ಪರಿವೇ ಇಲ್ಲದವರಂತೆ ಮದ್ಯವ್ಯಸನಿಗಳು ಎಲ್ಲೆಂದರಲ್ಲಿ ಬೀಳುವಂತೆ ತಾನು ಕುಡಿದ ಅಂಗಡಿಯ ಒಳಗೇ ಬಾಕ್ಸ್‌ಗೆ ತಲೆಕೊಟ್ಟು ಮಲಗಿಬಿಟ್ಟಿದೆ. ಹೊಡೆದು ಓಡಿಸುತ್ತಾರೆ. ಜನರಿರುವ ಜಾಗದಲ್ಲಿ ಭಯಪಡಬೇಕು ಎಂಬ ಗೊಡವೆ ಇಲ್ಲದೇ ನಶೆ ಏರಿಸಿಕೊಂಡು ಮಲಗಿದೆ. ಸದ್ಯ ಈ ಕೋತಿಯನ್ನು ರಕ್ಷಿಸಲಾಗಿದೆ. ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ವೈನ್ ಶಾಪ್‌ಗೆ ನುಗ್ಗಿ ಮದ್ಯ ಕುಡಿದು ನಿದ್ರೆಗೆ ಜಾರಿದ ಮಂಗ! 🐒🍺
— oneindiakannada (@OneindiaKannada) September 26, 2026
ರಾಂಚಿಯ ಓರ್ಮಾಂಜಿಯಲ್ಲಿ ನಡೆದ ಈ ತಮಾಷೆಯ ಘಟನೆಯಲ್ಲಿ ಮಂಗನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. #RanchiNews #Ormanjhi #ViralWatch #OIKannada #OIReels #UnusualNews #ViralVideo #FunnyNews pic.twitter.com/3xKGHOMHTJ


Click it and Unblock the Notifications
