ವೈರಲ್ ವಿಡಿಯೋ; ಪ್ರಾರ್ಥನೆ ಮಾಡುತ್ತಲೇ ಕ್ಯಾಂಡಿ ಸವಿದ ಬಾಲಕ!

ಬೆಂಗಳೂರು, ಜನವರಿ 25 : ಮಕ್ಕಳೇ ಹಾಗೆ ಅವರ ಮುಗ್ಧ ನಡೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಐಎಎಸ್ ಅಧಿಕಾರಿಯೊಬ್ಬರು ಮಗುವಿನ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದು, ಅದು ಈಗ ವೈರಲ್ ಆಗಿದೆ.

ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ಮಾಡುತ್ತಲೇ ಬಾಲಕನೊಬ್ಬ ಕ್ಯಾಂಡಿ ಸವಿದ ವಿಡಿಯೋ ಶನಿವಾರ ವೈರಲ್ ಆಗಿದೆ. ಮೂರು ಸಾವಿರಕ್ಕೂ ಅಧಿಕ ಜನರು ವಿಡಿಯೋವನ್ನು ನೋಡಿದ್ದು, ಬಾಲಕನ ಮುಗ್ಧತೆ ಕಂಡು ನಸು ನಕ್ಕಿದ್ದಾರೆ.

ಛತ್ತೀಸ್‌ಗಢದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಐಎಎಸ್ ಅಧಿಕಾರಿ ಅವಿನಾಶ್ ಶರ್ಮಾ ಟ್ವೀಟ್ ಮಾಡಿರುವ ವಿಡಿಯೋ ಇದೆ. 'One can easily relate to this' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Viral Video : Little Boy Enjoys Candy During School Prayer

ವಿಡಿಯೋದಲ್ಲಿ ಏನಿದೆ? : ಸುಮಾರು 30 ಸೆಕೆಂಡ್‌ನ ವಿಡಿಯೋದಲ್ಲಿ ಶಾಲಾ ಬಾಲಕ ಉಳಿದವರ ಜೊತೆ ಬೆಳಗಿನ ಪ್ರಾರ್ಥನೆ ಮಾಡುತ್ತಿದ್ದಾನೆ. ಆದರೆ, ಆತನ ಬೆರಳಿನ ನಡುವೆ ಕ್ಯಾಂಡಿ ಇದೆ. ಕಣ್ಮುಚ್ಚಿ ಪ್ರಾರ್ಥನೆ ಮಾಡುತ್ತಿರುವಂತೆಯೇ ಬಾಲಕ ಕ್ಯಾಂಡಿಯನ್ನು ಚೀಪುತ್ತಿದ್ದಾನೆ.

ಎಲ್ಲರ ಜೊತೆ ಜೋರಾಗಿ ಪ್ರಾರ್ಥನೆ ಹೇಳುತ್ತಲೇ ಶಾಲಾ ಬಾಲಕ ಕ್ಯಾಂಡಿ ಸವಿದಿದ್ದಾನೆ. ಬಾಲಕನ ಕ್ಯಾಂಡಿ ಕ್ರಷ್ ನೋಡಿ ಅಕ್ಕಪಕ್ಕದಲ್ಲಿದ್ದವರು ಇದನ್ನು ವಿಡಿಯೋ ಮಾಡಿದ್ದಾರೆ.

ವಿಡಿಯೋ ನೋಡಿದ ಅನೇಕರು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರಾರ್ಥನೆ ಮಾಡುತ್ತಿರುವ ಬಾಲಕನೊಬ್ಬನ ಜೇಬಿನಲ್ಲಿ ವೆಜ್ ರೋಲ್ ಇರುವ ಚಿತ್ರವೊಂದು ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆದರೆ, ಇಲ್ಲಿ ಕ್ಯಾಂಡಿ ಇದೆ.

ವೈರಲ್ ಆಗಿರುವ ವಿಡಿಯೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+