Oyo Room Video: ಓಯೋ ರೂಮ್ ಬಾಗಿಲು ಮುಚ್ಚದೆ ಪ್ರೇಮಿಗಳ ಎಡವಟ್ಟು, ಇಲ್ಲಿದೆ ವೈರಲ್ ವಿಡಿಯೋ!

Oyo Room Video: ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ಯಾವ ರೀತಿ ಇರುತ್ತವೆ ಎಂದರೆ ಅಯ್ಯೋ ಹಿಂಗೆಲ್ಲಾ ಆಗುವುದಕ್ಕೆ ಸಾಧ್ಯವಾ ಎನ್ನುವಂತಿರುತ್ತವೆ. ಅದೇ ರೀತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಪ್ರೇಮಿಗಳು ಓಯೋ ರೂಮ್‌ನಲ್ಲಿ ಮಾಡಿರುವ ಕುಲ್ಲಂ ಕುಲ್ಲ ಸೀನ್ ವೈರಲ್ ಆಗುತ್ತಿದೆ. ಏಕಾಂತ ಸಮಯ ಕಳೆಯುವುದಕ್ಕೆ ಪ್ರೇಮಿಗಳು ಒಂದು ಜಾಗದಲ್ಲಿ ಸೇರಿ ಏನೆಲ್ಲಾ ಅವಾಂತರ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಆದಂತಿದೆ.

ಈಗ ಜಮಾನ ಬದಲಾಗಿದೆ. ಮದುವೆ ಆದ ಮೇಲೆ ಎಲ್ಲಾ ಎನ್ನುವಂತೆ ಇಲ್ಲ. ಕೆಲವರಿಗೆ ಮದುವೆಗೆ ಮುಂಚೆ ಎಲ್ಲಾ ಎನ್ನುವಂತೆಯೂ ಆಗಿದೆ. ಅದರಲ್ಲೂ ಕೆಲವರು ಓಯೋ ರೂಮ್‌ ಅನ್ನು ಬೇರೆಯದ್ದೇ ಕಾರಣಕ್ಕೆ ಬಳಸುತ್ತಾರೆ. ಇದು ಅದೇ ತರ ಆದರೆ ಅದಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಓಯೋ ರೂಮ್‌ವೊಂದರಲ್ಲಿ ಇಬ್ಬರು ಪ್ರೇಮಿಗಳು ಇರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿರುವ ಜನ ಇಷ್ಟೊಂದು ಮೈ ಮರೆಯುವುದಕ್ಕೆ ಸಾಧ್ಯವಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಪ್ರೇಮಿಗಳು ಓಯೋ ರೂಮ್ ಬಾಗಿಲು ಹಾಕಿಕೊಳ್ಳುವುದನ್ನೆ ಮರೆತು ಮೈಮರೆತು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

Viral Oyo Room Video Couple Caught as They Forget to Close the Door

mahiiii._.17 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಓಯೋ ರೂಮ್‌ನಲ್ಲಿ ಪ್ರೇಮಿಗಳ ಎಡವಟ್ಟಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೆಟ್ರೋ ನಿಲ್ದಾಣದ ಸಮೋಪದಲ್ಲಿರುವ ಓಯೋ ದಿ ಎಲೈಟ್ ಸ್ಟೇ ಹೋಟೆಲ್ ಎನ್ನುವ ಹೆಸರು ವಿಡಿಯೋದಲ್ಲಿ ಸೆರೆಯಾಗಿದೆ. ಓಯೋ ರೂಮ್ ಒಳಗೆ ಸೇರಿದ್ದ ಪ್ರೇಮಿಗಳು / ಯುವಕ ಮತ್ತು ಯುವತಿ ಬಾಗಿಲನ್ನೇ ಹಾಕಿಕೊಂಡಿಲ್ಲ. ಯುವಕ ಮಂಚದ ಮೇಲೆ ಮಲಗಿದ್ದು, ಯುವತಿಯೊಬ್ಬಳು ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿರುವುದು ಇದೆ. ಯುವಕ ಆರಾಮಾಗಿ ಮಲಗಿದ್ದು ವಿಡಿಯೋ ಮಾಡಿರುವ ವ್ಯಕ್ತಿ ಬಾಗಿಲು ಹಾಕಿಕೋ ಎಂದು ಎಚ್ಚರಿಸಿದ್ದಾನೆ.

ಓಯ್.. ಮೊದಲು ಬಾಗಿಲು ಹಾಕಿಕೋ ಎಂದು ಯವಕನ್ನು ವ್ಯಕ್ತಿಯೊಬ್ಬರು ಮೆಟ್ರೋ ನಿಲ್ದಾಣದಿಂದಲೇ ಎಚ್ಚರಿಸಿದ್ದಾನೆ. ಇದಕ್ಕೆ ನಗುತ್ತಲೇ ಓಡಿ ಬಂದ ಯುವಕ ರೂಮ್ ಬಾಗಿಲು ಹಾಕಿಕೊಂಡಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಭಾರೀ ವೈರಲ್ ಆಗುತ್ತಿದೆ. ಕೆಲವು ಯುವಕ ಮತ್ತು ಯುವತಿಯರು ಓಯೋ ರೂಮ್‌ಗೆ ಹೋಗುವುದು ಸಹಜ. ಆದರೆ ರೂಮ್ ಬಾಗಿಲು ಸಹ ಹಾಕಿಕೊಳ್ಳದೆ ಏನು ಮಾಡುತ್ತಿದ್ದರು ಅಂತಾ ಜನ ಕಮೆಂಟ್‌ ಮಾಡಿದ್ದಾರೆ. ಅಲ್ಲದೇ ಬಾಗಿಲೂ ಹಾಕಿಕೊಳ್ಳುವುದಕ್ಕೆ ಹೇಳಿ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ ಅಂತಾ ಜನ ಕಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು 2.1 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ. 10,000 ಸಾವಿರಕ್ಕೂ ಹೆಚ್ಚು ಜನ ಈ ಓಯೋ ರೂಮ್ ವೈರಲ್ ವಿಡಿಯೋಗೆ ಕಮೆಂಟ್‌ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈಗಲೂ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+