ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೆಹಲಿ ವಿವಿಯಲ್ಲಿ ಘರ್ಷಣೆ; 7 ವಿದ್ಯಾರ್ಥಿಗಳಿಗೆ ಗಾಯ

|
Google Oneindia Kannada News

ನವದೆಹಲಿ, ಡಿಸೆಂಬರ್ 01: ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ಸಂಜೆ 4 ಗಂಟೆಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 7 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್‌ನಲ್ಲಿರುವ ಟೀ ಸ್ಟಾಲ್ ಬಳಿ ಗುರುವಾರ ಎಬಿವಿಪಿ ಮತ್ತು ಭಗತ್ ಸಿಂಗ್ ಛತ್ರ ಏಕತಾ ಗುಂಪಿನ ಸುಮಾರು 10 ರಿಂದ 12 ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಿವಿಯಲ್ಲಿ M.Phil ಕೋರ್ಸ್ ಸ್ಥಗಿತ: ಕಾರಣವೇನು?ದೆಹಲಿ ವಿವಿಯಲ್ಲಿ M.Phil ಕೋರ್ಸ್ ಸ್ಥಗಿತ: ಕಾರಣವೇನು?

"ನಾವು ಏಳು ವೈದ್ಯಕೀಯ-ಕಾನೂನು ಪ್ರಕರಣಗಳನ್ನು ಸ್ವೀಕರಿಸಿದ್ದೇವೆ. ಈ ಘಟನೆಯಲ್ಲಿ ಗಾಯಗೊಂಡವರು ಮತ್ತು ಅವರೊಂದಿಗೆ ಬಂದವರನ್ನು ಹೊರತುಪಡಿಸಿ ಹೆಚ್ಆರ್ ಹೆಚ್ ಆಸ್ಪತ್ರೆಯಲ್ಲಿ ಸೇರಿದ್ದ ಎಲ್ಲರೂ ಚದುರಿಹೋದರು. ದೂರುಗಳ ಪ್ರಕಾರ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುತ್ತಿದೆ," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

 Violent Clash Breaks Out In Delhi University’s North Campus; 7 Students Injured

ದೆಹಲಿ ವಿವಿ ಘರ್ಷಣೆ ಬಗ್ಗೆ ಎಬಿವಿಪಿ ಹೇಳುವುದೇನು?:

ಇದರ ಮಧ್ಯೆ ಕೆಲವು ಹೊರಗಿನವರು ಎಬಿವಿಪಿಗೆ ಸೇರಿದ ವಾರ್ಸಿಟಿಯ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಹೇಳಿಕೆಯಲ್ಲಿ ತಿಳಿಸಿದೆ. "ನಾವು ಮಾರಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಹೊರಗಿನವರು ಮತ್ತು ಇತರ ಕೆಲವು ಗುಂಪುಗಳು ಇದರಲ್ಲಿ ಭಾಗಿಯಾಗಿವೆ ಎಂದು ಎಬಿವಿಪಿ ಹೇಳಿಕೆ ತಿಳಿಸಿದೆ.

English summary
Violent Clash Breaks Out In Delhi University’s North Campus; 7 Students Injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X