Vijay: ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆ ಮುನ್ನಡೆ, ಡಿಎಂಕೆಗೆ ಹಿನ್ನಡೆ

Vijay: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ (ಡಿವಿಕೆ)ಯನ್ನು ಹಿಂದಿಕ್ಕುವಲ್ಲಿ ನಟ ಹಾಗೂ ರಾಜಕಾರಣಿ ತಮಿಳಗ ವೆಟ್ರಿ ಕಳಗಂ ಪಕ್ಷವು ಹಿಂದಿಕ್ಕಿದೆ. ಪ್ರಾರಂಭಿಕ ಹಂತದಲ್ಲಿ ಟಿವಿಕೆ 58ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 47 ವಿಧಾನಸಭಾ ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷವು ಮುನ್ನಡೆ ಸಾಧಿಸಿದೆ. ಎಕ್ಸಿಟ್‌ ಪೋಲ್ ಭವಿಷ್ಯಗಳು ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಪಕ್ಷವೇ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಕೆಲವು ಸಮೀಕ್ಷೆಗಳು ಟಿವಿಕೆ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದೂ ಹೇಳಿತ್ತು. ಈ ಬಾರಿ ಅತ್ಯಂತ ಹೆಚ್ಚು ಯುವಕರು ಟಿವಿಕೆಗೆ ಮತ ಚಲಾಯಿಸಿದ್ದಾರೆ ಎನ್ನುವ ಮಾತಿದೆ.

ಯುವ ಹಾಗೂ ಹೊಸ ತಲೆಮಾರನ್ನು ಮತದಾನಕ್ಕೆ ಸೆಳೆಯುವಲ್ಲಿ ಟಿವಿಕೆ ಯಶಸ್ವಿಯಾಗಿತ್ತು. ಆದರೆ ಡಿಎಂಕೆ ತಮಿಳುನಾಡಿನಲ್ಲಿ ಪ್ರಬಲ ಪೈಪೋಟಿ ನೀಡಿತ್ತು. ಇದರ ಹೊರತಾಗಿಯೂ ಟಿವಿಕೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

Vijay

ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ

ಇನ್ನು ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಸಂಸ್ಥಾಪಕ ಹಾಗೂ ರಾಜಕಾರಣಿ ವಿಜಯ್ ಅವರು ಭಾರೀ ಮುನ್ನಡೆ ಸಾಧಿಸಿರುವುದು ಆಡಳಿತರೂಢ ಡಿಎಂಕೆ ಪಕ್ಷದಲ್ಲಿ ನಡುಕವನ್ನುಂಟು ಮಾಡಿದೆ. ಹಲವು ಅಡೆತಡೆಗಳು, ವಿವಾದಗಳ ಹೊರತಾಗಿಯೂ ವಿಜಯ್ ಭಾರೀ ಮುನ್ನಡೆಯನ್ನು ಕಾಪಾಡಿಕೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಮುನ್ನಡೆ ಕಾಪಾಡಿಕೊಂಡಿದೆ.

ಹೊಸ ದಾಖಲೆ ಬರೆದ ವಿಜಯ್

ಇನ್ನು ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರು ಹೊಸ ದಾಖಲೆ ಬರೆದಿದ್ದಾರೆ. ತಮಿಳುನಾಡಿನಲ್ಲಿ ನಟ - ನಟಿಯರು ರಾಜಕೀಯ ಪ್ರವೇಶ ಮಾಡಿದರೆ ಅಲ್ಲಿನ ಜನ ಕೈ ಬಿಡುವುದಿಲ್ಲ ಎನ್ನುವ ವಿಚಾರವೂ ಸಹ ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾ ನಟ - ನಟಿಯರು ಮಾಡದ ಸಾಧನೆಯನ್ನು ನಟ ವಿಜಯ್ ಅವರು ಮಾಡಿದ್ದಾರೆ.

ಮತ್ತೊಂದು ವಿಶೇಷವೆಂದರೆ ಪಕ್ಷ ಸ್ಥಾಪನೆ ಮಾಡಿದ ಮೂರು ವರ್ಷಗಳ ಒಳಗಾಗಿಯೇ ನಟ ವಿಜಯ್ ಅವರು ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನಲ್ಲಿ ಇದೀಗ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಪರ್ಯಾಯವಾಗಿ ವಿಜಯ್ ಅವರ ಟಿವಿಕೆ ಪಕ್ಷವು ಇದೀಗ ರಂಗ ಪ್ರವೇಶ ಮಾಡಿದೆ. ಮುಂದಿನ ತಮಿಳುನಾಡಿನ ವಿಧಾನಸಭೆ ಚುನಾವಣೆಯು ಹೇಗೆ ಇರಲಿದೆ ಎನ್ನುವ ಕುತೂಹಲವು ಇದೀಗ ಹೆಚ್ಚಾಗಿದೆ.

ವಿಜಯ್ ಈ ಬಾರಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಇದೆ. ಹೆಚ್ಚೆಂದರೆ 18ರಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದೇ ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಈ ಭವಿಷ್ಯಗಳನ್ನು ನಟ ವಿಜಯ್ ಅವರು ಸುಳ್ಳು ಮಾಡಿದ್ದಾರೆ. ಈ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 109 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ನಟ - ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷವು ಯಶಸ್ವಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+