ಮದ್ಯದ ದೊರೆ ವಿಜಯ್ ಮಲ್ಯ ಕಾಂಗ್ರೆಸ್ ಬೆಳೆಸಿದ ಕೂಸಂತೆ!

Posted By:
Subscribe to Oneindia Kannada

ವರ್ಷದಿಂದ ವರ್ಷಕ್ಕೆ ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಮಾಡೆಲ್ ಗಳ ಬಟ್ಟೆಬರೆಗಳು ಬಿಕನಿಗಿಂತಲೂ ಮೇಲಕ್ಕೇರುತ್ತಿರುವ ಹಾಗೇ, ಮದ್ಯದ ದೊರೆ ವಿಜಯ್ ಮಲ್ಯ ಅವರ ಮಾನ ಮರುವಾದೆ ದಿನದಿಂದ ದಿನಕ್ಕೆ ಮೂರಾಬಟ್ಟೆಯಾಗುತ್ತಿದೆ.

ವಿದೇಶಕ್ಕೆ ಹಾರುವ ಮುನ್ನ ಕೇಂದ್ರ ವಿತ್ತ ಸಚಿವರನ್ನು ಮಲ್ಯ ಸಾಹೇಬ್ರು ಭೇಟಿಯಾಗಿದ್ದರು ಎನ್ನುವ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ವಿಜಯ್ ಮಲ್ಯ ನೀವು ಬೆಳೆಸಿದ ಕೂಸು, ಇಟ್ಸ್ ಯುವರ್ ಬೇಬಿ ಎಂದು ರಿವರ್ಸ್ ಹೊಡೆದಿದೆ. (ಮಲ್ಯ ಪಲಾಯನ, ಮೋದಿ ಸರ್ಕಾರಕ್ಕೆ 5 ಪ್ರಶ್ನೆ)

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಮಲ್ಯಗೆ ಸಂಬಂಧಿಸಿ ಮೋದಿ ಸರ್ಕಾರಕ್ಕೆ ಎಸೆದ ಪಂಚ ಪ್ರಶ್ನೆಗಳಿಗೆ ತಿರುಗೆಟು ನೀಡಿರುವ ಬಿಜೆಪಿ, ಕಿಂಗ್ ಫಿಷರ್ ಏರ್ಲೈನ್ ದಿವಾಳಿ ಅಂಚಿನಲ್ಲಿದ್ದಾಗಲೂ, ಸಾಲ ಕೊಡಿಸಿದವರು ಯಾರು ಸ್ವಾಮೀ ಎಂದು ಪ್ರಶ್ನಿಸಿದೆ.(ಸಾಲ ಮಾಡಿಯಾದ್ರೂ ತುಪ್ಪ ತಿನ್ನು)

ಜನಪರ ನಿರ್ಧಾರ ತೆಗೆದುಕೊಳ್ಳುವ ಮಹತ್ವದ ಸ್ಥಳವಾಗಿರುವ ಸಂಸತ್ತು ಇಂದು ವೈಯಕ್ತಿಕ, ಆಡಳಿತ ವಿರೋಧ ಪಕ್ಷಗಳಿಗೆ ಆರೋಪ ಪ್ರತ್ಯಾರೋಪ ಮಾಡಲಿರುವ ವೇದಿಕೆಯಂತಾಗಿರುವುದು ವಿಷಾದನೀಯ.

ಜನಸಾಮಾನ್ಯರಿಗೆ ಕನಿಷ್ಠ ಹತ್ತು ಸಾವಿರ ರೂಪಾಯಿ ಸಾಲ ಕೊಡಲು ದಾಖಲೆ, ಪುರಾವೆ, 'ಕ್ರೆಡಿಟ್ ರೇಟಿಂಗ್' ನೋಡುವ ಬ್ಯಾಂಕುಗಳು, ಆಸ್ತಿಮೌಲ್ಯಕ್ಕಿಂತಲೂ ಹೆಚ್ಚು ಕೋಟಿ ಕೋಟಿ ಸಾಲವನ್ನು ಮಲ್ಯ ಒಡೆತನದ ಸಂಸ್ಥೆಗಳಿಗೆ ಅದ್ಯಾವ ಆಧಾರದ ಮೇಲೆ ನೀಡಿತು ಎನ್ನುವುದೇ ಪ್ರಶ್ನೆ. (ಸರಕಾರಕ್ಕೆ ಮಲ್ಯ ಹಾಕಿದ ಸವಾಲು)

ಬಿಜೆಪಿಯ ತಿರುಗೇಟು ಹೀಗಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನಮ್ಮ ಮೇಲೆ ಗೂಬೆ ಕೂರಿಸಬೇಡಿ

ನಮ್ಮ ಮೇಲೆ ಗೂಬೆ ಕೂರಿಸಬೇಡಿ

ಸಾಲ ಮಾಡಿ ವಿದೇಶಕ್ಕೆ ಹಾರಿರುವ ಮಲ್ಯ ವಿಚಾರದಲ್ಲಿ ನಮ್ಮ ಮೇಲೆ ಗೂಬೆ ಕೂರಿಸಬೇಡಿ. ಅವರು ನೀವು ಬೆಳೆಸಿದ ಕೂಸು, ಅವರ ಸಾಲ ಅಥವಾ ಅವರು ವಿದೇಶಕ್ಕೆ ಹಾರಿದ್ದಕ್ಕೆ ಬಿಜೆಪಿ ಹೊಣೆಯಲ್ಲ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ಮನಮೋಹನ್ ಸಿಂಗ್

ಮನಮೋಹನ್ ಸಿಂಗ್

ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ಲೈನ್ಸ್ ದಿವಾಳಿ ಅಂಚಿನಲ್ಲಿದ್ದಾಗ ನಿಮ್ಮ ಸರಕಾರವೇ ಸಾಲ ನೀಡಲು ರೆಕಮೆಂಡ್ ಮಾಡಿದ್ದು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಖಾಸಗಿ ಸಂಸ್ಥೆಗಳು ಕಷ್ಟದಲ್ಲಿದ್ದಾಗ ಸಹಾಯ ಮಾಡಬೇಕು ಎನ್ನುವುದು ನಿಮ್ಮ ಪ್ರಧಾನಿಯ ನಿರ್ಧಾರವಾಗಿತ್ತು - ಬಿಜೆಪಿಯ ಶ್ರೀಕಾಂತ್ ಶರ್ಮಾ.

ಒಂದಲ್ಲಾ, ಎರಡಲ್ಲಾ ಸಾವಿರ ಸಾವಿರ ಕೋಟಿ

ಒಂದಲ್ಲಾ, ಎರಡಲ್ಲಾ ಸಾವಿರ ಸಾವಿರ ಕೋಟಿ

ತೀವ್ರ ತೊಂದರೆಯಲ್ಲಿದ್ದಾಗ ಮಲ್ಯಾಗೆ ಪ್ಯಾಕೇಜ್ ರೂಪದಲ್ಲಿ 3,100 ಕೋಟಿ ರೂಪಾಯಿ ಸಾಲ ನೀಡಲು ಬ್ಯಾಂಕಿಗೆ ಸೂಚಿಸಿದ್ದು ನಿಮ್ಮ ಸರಕಾರ. ನಿಮ್ಮ ಅಣತಿಯಂತೆ ಬ್ಯಾಂಕುಗಳು ಸಾಲ ನೀಡಿದ್ದಲ್ಲವೇ ಎಂದು ಶರ್ಮಾ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.

ವಿಜಯ್ ಮಲ್ಯ

ವಿಜಯ್ ಮಲ್ಯ

ಮಲ್ಯ ವಿಚಾರದಲ್ಲಿ ಸರಕಾರ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದ್ದರೂ, ಕಾಂಗ್ರೆಸ್ ಸಂಸತ್ತಿನ ಸಮಯವನ್ನು ವೃಥಾ ಹಾಳು ಮಾಡುತ್ತಿದೆ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಇಷ್ಟು ಅಗಾಧ ಪ್ರಮಾಣದಲ್ಲಿ ಮಲ್ಯಾಗೆ ಸಾಲ ನೀಡಿದ್ದು ಬಹುತೇಕ ಯುಪಿಎ ಸರಕಾರದ ಅವಧಿಯಲ್ಲಿ ಎನ್ನುವುದನ್ನು ಕಾಂಗ್ರೆಸ್ ಮುಖಂಡರು ಯಾಕೆ ಮುಚ್ಚಿಡುತ್ತಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಮುಖಂಡರು ದೇಶಕ್ಕೆ ತಿಳಿಸಲಿ - ಶ್ರೀಕಾಂತ್ ಶರ್ಮಾ.

ಅರುಣ್ ಜೇಟ್ಲಿ

ಅರುಣ್ ಜೇಟ್ಲಿ

ವಿಜಯ್ ಮಲ್ಯ ವಿದೇಶಕ್ಕೆ ಹಾರಿದ ನಂತರ ಬ್ಯಾಂಕುಗಳು ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬಾರದೆಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು ಎಂದು ಅರುಣ್ ಜೇಟ್ಲಿ ಈಗಾಗಲೇ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆದರೂ ಕಾಂಗ್ರೆಸ್, ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗುತ್ತಿರುವುದು ದುರಂತ ಎಂದು ಬಿಜೆಪಿ ಮುಖಂಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mallya is a Congress' baby. When his company (Kingfisher Airline) was on the verge of closure, the then PM Minister Manmohan Singh suggested such private companies should be helped, government pushed banks to give him a package of Rs. 3,100 crore, BJP National Secretary Shrikant Sharma.
Please Wait while comments are loading...