ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 19 : ಸಾಲ ಮರುಪಾವತಿಸದೇ ನಾಪತ್ತೆಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ. ಜಾರಿ ನಿರ್ದೇಶನಾಲಯ ನೋಟಿಸ್ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಮುಂಬೈಕೋರ್ಟ್ ಸೋಮವಾರ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಈ ಆದೇಶ ಹೊರಬಿದ್ದ ಬಳಿಕ ಜಾರಿ ನಿರ್ದೇಶನಾಲಯ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವ ಕುರಿತು ಚಿಂತನೆ ಆರಂಭಿಸಿದೆ. [ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್]

vijay mallya

950 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಿದೇಶದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ಮಲ್ಯ ವಿರುದ್ಧ ತನಿಖೆ ನಡೆಸುತ್ತಿದೆ. ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕು ಎಂದು ನಿರ್ದೇಶನಾಲಯ ಕೋರ್ಟ್ ಮೊರೆ ಹೋಗಿದೆ. [ಮಲ್ಯ ಕೋಟಿ-ಕೋಟಿ ವೇತನ ಪಡೆಯುತ್ತಿದ್ದಾರೆಯೇ?]

ರೆಡ್ ಕಾರ್ನರ್ ನೋಟಿಸ್ ಏಕೆ? : ವಿಜಯ್ ಮಲ್ಯ ಪಾಸ್‌ಪೋರ್ಟ್ ಈಗಾಗಲೇ ಅಮಾನತುಗೊಂಡಿದೆ. ಸೋಮವಾರ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದ್ದರಿಂದ, ಜಾರಿ ನಿರ್ದೇಶನಾಲಯ ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದು, ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಮುಂದಾಗಿದೆ. [ಏನಿದು ರೆಡ್ ಕಾರ್ನರ್ ನೋಟಿಸ್]

ವಿಜಯ್ ಮಲ್ಯ ಲಂಡನ್‌ನಲ್ಲಿದ್ದಾರೆ ಎಂದು ಶಂಕಿಸಲಾಗಿದೆ. ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಅನುಮತಿ ಸಿಕ್ಕರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್‌ನಲ್ಲಿರುವ ಅಧಿಕಾರಿಗಳ ಜೊತೆ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಿದ್ದಾರೆ ಮತ್ತು ಮಲ್ಯ ವಿಚಾರಣೆಗೆ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಏನಿದು ನೋಟಿಸ್? : ದೇಶದಿಂದ ತಪ್ಪಿಸಿಕೊಂಡ ಆರೋಪಿಗಳ ಪತ್ತೆಗಾಗಿ ಇಂಟರ್ ಪೋಲ್ ನೆರವಿನೊಂದಿಗೆ ರೆಡ್​ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ಆರೋಪಿಯನ್ನು ನಿರ್ದಿಷ್ಟ ದೇಶಕ್ಕೆ ಗಡಿಪಾರು ಮಾಡಲು ಇದು ಸಹಾಯಕವಾಗಲಿದೆ.

ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಆರ್ಗನೈಸೇಷನ್‌ (ಇಂಟರ್ ಪೋಲ್) ಎಂಬುದು ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್‌ ಸಹಕಾರವನ್ನು ನೀಡವುದು ಈ ಸಂಸ್ಥೆಯ ಕೆಲಸವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Enforcement Directorate is contemplating having a red corner alert issued against former UB group chairman Vijay Mallya. The decision by the ED comes in the wake of a Mumbai court yesterday issuing a non bailable warrant against Mallya on charges of money laundering.
Please Wait while comments are loading...