ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಕುಣಿದ ಪೊಲೀಸಪ್ಪ, ತನಿಖೆಗೆ ಇಲಾಖೆ ಆದೇಶ
ಲಖನೌ, ಸೆಪ್ಟೆಂಬರ್ 18: ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಹಾಡಿಗೆ ವಕ್ರ-ವಕ್ರವಾಗಿ ಹೆಜ್ಜೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು. ಇದರ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಆದೇಶ ಮಾಡಿದೆ.
ಉತ್ತರ ಪ್ರದೇಶದಲ್ಲಿ ಪೊಲೀಸಪ್ಪನೊಬ್ಬ ಮತ್ತೊಬ್ಬ ಖಾಕಿಧಾರಿಯೊಂದಿಗೆ ಹಾಡೊಂದಕ್ಕೆ ವಕ್ರ-ವಕ್ರವಾಗಿ ಕುಣಿಯುತ್ತಿರುವ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು.
#WATCH Uttar Pradesh Police orders inquiry after a video of policemen dancing on duty in Auraiya goes viral pic.twitter.com/bQ6LVB5blZ
— ANI UP (@ANINewsUP) September 18, 2018
ಕುಡಿದ ಮತ್ತಿನಲ್ಲಿದ್ದಂತೆ ಕಾಣುವ ಪೊಲೀಸಪ್ಪ ಸೋಂಟಕ್ಕೆ ಗನ್ ಅನ್ನು ಸಿಕ್ಕಿಸಿಕೊಂಡು, ತಲೆಗೆ ಟವೆಲ್ ಒಂದನ್ನು ಕಟ್ಟಿಕೊಂಡು ಹೇಗ್ಹೇಗೋ ಕುಣೀಯುತ್ತಿದ್ದಾನೆ. ಆತನ ಜೊತೆ ಮತ್ತೊಬ್ಬ ಖಾಕಿಧಾರಿ ಪೊಲೀಸ್ ಒಬ್ಬ ಅವನಂತಯೇ ಇಷ್ಟಬಂದಂತೆ ಅಶ್ಲೀಷವಾಗಿ ಕುಣಿಯುತ್ತಿರುವುದು ವಿಡಿಯೋದಲ್ಲಿದೆ.

ವಿಡಿಯೋದಲ್ಲಿ ಇನ್ನೂ ಇಬ್ಬರು ಯುವಕರು ಪೊಲೀಸರ ಜೊತೆ ಕುಣಿಯುತ್ತಿದ್ದಾರೆ ಈ ವಿಡಿಯೋ ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ವೈರಲ್ ಆಗಿತ್ತು. ವಿಡಿಯೋ ಉತ್ತರ ಪ್ರದೇಶ ಪೊಲೀಸರದ್ದೆ ಎಂದು ತಿಳಿದ ಬಳಿಕ ಉತ್ತರ ಪ್ರದೇಶ ಪೊಲೀಸ್ ಉನ್ನತ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಯುವಕನಿಗೆ ರಸ್ತೆಯಲ್ಲೇ ಕಾಲಿನಿಂದ ಒದ್ದು, ದರ್ಪ ತೋರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಅದು ಆಗ ವಿಧಾನಸಭೆಯಲ್ಲೂ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications