ವಿಡಿಯೋ: ಆನೆಯನ್ನು ಅಟ್ಟಾಡಿಸಿದ ಮರಿ ಎಮ್ಮೆ
ದೆಹಲಿ, ಮಾರ್ಚ್ 5: ಆನೆಯನ್ನು ನೋಡಿದರೆ ಉಳಿದ ಪ್ರಾಣಿಗಳು ಭಯಗೊಳ್ಳಬೇಕು. ಆನೆ ಗಾತ್ರ ನೋಡಿದ್ರೆ ಸಣ್ಣ ಪ್ರಾಣಿಗಳು ಹೆದರಬೇಕು. ಆದರೆ, ಸಣ್ಣ ಪ್ರಾಣಿ ದೊಡ್ಡ ಆನೆಯನ್ನು ಅಟ್ಟಾಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನೆಯೊಂದನ್ನು ಮರಿ ಎಮ್ಮೆ ಅಟ್ಟಾಡಿಸಿದೆ. ಮರಿ ಎಮ್ಮೆಯ ಈ ದಾಳಿಯಿಂದ ಏನು ಮಾಡಬೇಕೆಂದು ಗೊತ್ತಾಗದ ಆನೆ ಆ ಕಡೆ ಈ ಕಡೆ ಅಡ್ಡಾಡಿದೆ. ಆದರೆ ಮರಿ ಎಮ್ಮೆಯನ್ನು ಆನೆ ಏನು ಮಾಡಿಬಿಡುತ್ತೋ ಎಂಬ ಆತಂಕದಲ್ಲಿ ದೊಡ್ಡ ಎಮ್ಮೆ ಅದರ ಹಿಂದೆಯೇ ಹೆಜ್ಜೆ ಹಾಕಿದೆ.
ಈ ವಿಡಿಯೋವನ್ನು 'ನೇಚರ್ ಈಸ್ ಲಿಟ್' ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ''ಮರಿ ಎಮ್ಮೆಯ ದಾಳಿಯಿಂದ ಆನೆ ತಪ್ಪಿಸಿಕೊಳ್ಳಲು ಪರದಾಡಿದೆ'' ಎಂದು ಕ್ಯಾಪ್ಷನ್ ನೀಡಿದ್ದಾರೆ.

17ಸೆಕೆಂಡ್‌ನ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಗಮನ ಸೆಳೆಯುತ್ತಿದೆ. ಸುಮಾರು 7 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
Elephant has no clue what to do when it gets charged by a baby water buffalo pic.twitter.com/kxCJRdjAYM
— Nature is Lit🔥 (@NaturelsLit) March 4, 2020
''ಬೇಡ ಮಗು ಬೇಡ....ಅದನ್ನು ಹೊಡೆಯಬೇಡ ಎಂದು ತಾಯಿ ಎಮ್ಮೆ ಕೂಗುತ್ತಿದೆ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ''ಹೇ ನೋ ನಾನು ನಿನಗೆ ತೊಂದರೆ ಕೊಡಲ್ಲ, ಬೇಡ ಬೇಡ' ಎಂದು ಆನೆಯೇ ಹಿಂದೆ ಹೋಗುತ್ತಿದೆ ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications