ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಮಹಾಭಾರತ ಟೈಟಲ್ ಹಾಡನ್ನು ಸುಶ್ರಾವ್ಯ ಕಂಠದಿಂದ ಹಾಡಿದ ಮುಸ್ಲಿಂ ವ್ಯಕ್ತಿ

|
Google Oneindia Kannada News

ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದಿ ಧಾರಾವಾಹಿ 'ಮಹಾಭಾರತ್' ಟೈಟಲ್ ಹಾಡನ್ನು ರಾಗವಾಗಿ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಸ್ಲಿಂ ಸಮುದಾಯದವರಾಗಿರುವ ಅವರ ನೆಚ್ಚಿನ ಗೀತೆ ಅದು ಎಂದು ಎನಿಸುವಷ್ಟು ಸುಮಧುರವಾಗಿ ಹಾಡಿದ್ದಾರೆ. ಲಯಬದ್ಧವಾಗಿ ಖುಷಿಯಿಂದ ಸಂಭ್ರಮಿಸಿ ಹಾಡುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಹಾಗೆಯೇ ಅವರನ್ನು ಸುತ್ತುವರೆದ ಜನರ ನಡುವೆ ತಮ್ಮ ಕುಟುಂಬಸ್ಥರ ಎದುರು ಧಾರಾವಾಹಿಯ ಟೈಟಲ್ ಸಾಂಗ್ ಹಾಡಿ ರಂಜಿಸಿದ್ದಾರೆ.

ಈ ವಿಡಿಯೋವನ್ನು ಭಾರತ ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ಡಾ. ಎಸ್ ವೈ ಖುರೇಷಿ ಅವರು ಟ್ವಿಟ್ಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಕಟ್ಟುಪಾಡು, ಸಂಪ್ರದಾಯಗಳನ್ನು ಮುರಿದು ಮುಂದೆ ಸಾಗುವುದು ಎಂದರೆ ಇದೇನಾ? ಎಂದು ಖುರೇಷಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Video: Muslim Man Sings Mahabharat Title Song, Netizens Love His Voice And Pronunciation

ಭಾರತದ ಸಂಸ್ಕೃತಿ ವೈವಿಧ್ಯತೆ, ಕೋಮುಸೌಹಾರ್ದತೆಗೆ ನಿದರ್ಶನದಂತೆ ಇರುವ ಈ ವಿಡಿಯೋವನ್ನು ಹಲವು ಮಂದಿ ಮೆಚ್ಚಿಕೊಂಡಿದ್ದಾರೆ.

ಸಹಜವಾಗಿಯೇ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಜತೆಗೆ, ಈ ಹಾಡು 90ರ ದಶಕದ ಸುಂದರ ನೆನಪುಗಳನ್ನು ಮತ್ತೆ ನೆನಪಿಸುವಂತೆಯೂ ಮಾಡಿದೆ. ಹೀಗಾಗಿ, ಎಲ್ಲರೂ ಇಷ್ಟಪಟ್ಟು ಈ ದೃಶ್ಯವನ್ನು ನೋಡುತ್ತಿದ್ದಾರೆ. ಜತೆಗೆ, ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

80ರ ದಶಕದ ಕೊನೆಯಲ್ಲಿ ಮತ್ತು 90ರ ದಶಕದ ಆರಂಭದಲ್ಲಿ ಎಲ್ಲರನ್ನೂ ಭಾನುವಾರ ಬೆಳಗ್ಗೆ ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದ ಧಾರಾವಾಹಿ ಇದು. ಸದ್ಯ ಇದೇ ಧಾರಾವಾಹಿಯ ಟೈಟಲ್ ಸಾಂಗ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯಗೊಂಡಿದ್ದ ಮಹಾಭಾರತ್ ಧಾರಾವಾಹಿಯ ಟೈಟಲ್ ಗೀತೆಯನ್ನು ಹಾಡಿದವರು ಮಹೇಂದ್ರ ಕಪೂರ್. ಇದನ್ನು ಸಂಯೋಜನೆ ಮಾಡಿದವರು ರಾಜ್‌ಕಮಲ್ , ಭಗವದ್ಗೀತೆಯ ಪ್ರಮುಖವಾದ ಎರಡು ಶ್ಲೋಕಗಳನ್ನು ಹಾಡಿನಲ್ಲಿ ಬಳಸಲಾಗಿದೆ. ಒಟ್ಟು 94 ಸಂಚಿಕೆಗಳ ಧಾರಾವಾಹಿಯನ್ನು 1988ರ ಅ.2ರಂದು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು.

English summary
Watching Ramayana and Mahabharat with your family was a ritual followed every Sunday in the late 80s and early 90s. The shows brought the country to a standstill and now, a Muslim man's rendition of the title song of Mahabharat has won the hearts of thousands of people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X