ವಿಡಿಯೋ: ದೇಶದಾದ್ಯಂತ ಹೋಳಿ ಆಚರಣೆ ಹೇಗಿದೆ ನೋಡಿ
ದೇಶ ಹಾಗೂ ವಿಶ್ವದಲ್ಲಿ ಇಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ವರ್ಷದಿಂದ ಹೋಳಿ ಹಬ್ಬವನ್ನು ಆಚರಿಸಲು ಅಡೆತಡೆಗಳಿದ್ದವು. ಆದರೆ ಈ ಬಾರಿ ಜನರು ವಿವಿಧ ಬಣ್ಣಗಳ ಹೋಳಿ ಆಡುತ್ತಿದ್ದಾರೆ. ಹೋಳಿ ಹಬ್ಬದ ಫೋಟೋಗಳು ದೇಶದ ವಿವಿಧ ಭಾಗಗಳಿಂದ ಹೊರಬಿದ್ದಿವೆ. ಭಗವಾನ್ ಕೃಷ್ಣನ ನಗರವಾದ ಮಥುರಾ ವೃಂದಾವನ ಮತ್ತು ಬರ್ಸಾನಾದ ಹೋಳಿಯು ವಿಶ್ವಪ್ರಸಿದ್ಧವಾಗಿದ್ದು, ಲಕ್ಷಾಂತರ ಜನರು ಈಗ ಹೋಳಿ ಸಂಭ್ರಮ ಸಡಗರದಲ್ಲಿ ತೊಡಗಿದ್ದಾರೆ. ಅದೇ ರೀತಿ ಬಂಗಾಳ, ಗುಜರಾತ್ ಮತ್ತು ಉತ್ತರಾಖಂಡದಲ್ಲೂ ಹೋಳಿ ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿಯೂ ಸ್ಥಳೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೋಳಿಯು ಹಿಂದೂಗಳ ಎರಡನೇ ಪ್ರಮುಖ ಹಬ್ಬವಾಗಿದೆ. 'ಹೋಲಿಕಾ ದಹನ್' ಅನ್ನು ಫಾಲ್ಗುಣ ತಿಂಗಳ ಹುಣ್ಣಿಮೆಯ ದಿನದಂದು ಮಾಡಲಾಗುತ್ತದೆ. ಜನರು 'ಹೋಲಿಕಾ ದಹನ'ದ ಮರುದಿನ ಬಣ್ಣಗಳನ್ನು ಆಡುತ್ತಾರೆ. ಈ ವರ್ಷ 'ಹೋಲಿಕಾ ದಹನ್' ಅನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ಆದರೆ ಕೆಲವು ಸ್ಥಳಗಳಲ್ಲಿ 'ಹೋಲಿಕಾ ದಹನ್' ಮಾರ್ಚ್ 18 ರಂದು ನಡೆಯಲಿದೆ. ಹೋಳಿಯು ಮರುದಿನ ಅಂದರೆ ಮಾರ್ಚ್ 19 ರಂದು ನಡೆಯಲಿದೆ.

ಈ ಹಬ್ಬಕ್ಕೆ ಎಷ್ಟು ಮಹತ್ವವಿದೆ ಎನ್ನುವುದಕ್ಕೆ ಐತಿಹಾಸಿಕ ಗ್ರಂಥಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಹೋಳಿಯ ಮೂಲದ ಸುತ್ತ ಅನೇಕ ಸಾಂಸ್ಕೃತಿಕ ಕಥೆಗಳಿವೆ. ಹಿರಣ್ಯಕಶಿಪು ಎಂಬ ರಾಕ್ಷಸ ರಾಜನ ಸಹೋದರಿ ಹೋಲಿಕಾಳ ಹೆಸರನ್ನು ಆಚರಣೆಯ ಹೆಸರನ್ನಾಗಿ ಇಡಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಈ ರಾಕ್ಷಸ ರಾಜನು ಅಮರನಾಗಿದ್ದನು. ಆದ್ದರಿಂದ ಪ್ರಪಂಚದ ಯಾವುದೇ ಶಕ್ತಿಯು ಅವನನ್ನು ಯಾವುದೇ ರೀತಿಯಲ್ಲಿ ಕೊಲ್ಲಲು ಸಾಧ್ಯವಿಲ್ಲ ಎಂದು ಜನ ಹೆದರುತ್ತಿದ್ದರು. ಹೀಗಾಗಿ ಹಿರಣ್ಯಕಶಿಪು ಅವನ ಮಹಾಶಕ್ತಿಯನ್ನು ಅರ್ಥಮಾಡಿಕೊಂಡು ಅವನು ದುಷ್ಟನಾಗಿ ತಿರುಗಿ ಎಲ್ಲರನ್ನು ನಾಶಮಾಡಲು ಪ್ರಾರಂಭಿಸಿದನು.
#WATCH | Uttar Pradesh: #Holi celebrations underway at Banke Bihari Temple in Vrindavan of Mathura district. pic.twitter.com/DxFOZncA9F
— ANI UP/Uttarakhand (@ANINewsUP) March 18, 2022
ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ.
#WATCH | Children splashed flowers, hopped and danced as part of #Holi celebrations at Prince Ashokraje Gaekwad School in Vadodara, Gujarat (17.03) pic.twitter.com/6VGWzig1JI
— ANI (@ANI) March 18, 2022
ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.
#WATCH West Bengal | People along with young children celebrate the festival of 'Dol Utsav' by singing & dancing to the rhythm of traditional songs in a cultural programme in Kolkata#Holi pic.twitter.com/QxnLfQiCdV
— ANI (@ANI) March 18, 2022
ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ಹಾಡುಗಳ ಲಯಕ್ಕೆ ತಕ್ಕಂತೆ ಕುಣಿದು ಹೋಳಿ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.
ಕೋಲ್ಕತ್ತಾದಲ್ಲಿ ಜನರು ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಮತ್ತು ನೃತ್ಯ ಮಾಡುವ ಮೂಲಕ 'ಡೋಲ್ ಉತ್ಸವ' ಹಬ್ಬವನ್ನು ಆಚರಿಸುತ್ತಾರೆ.
#WATCH | Uttar Pradesh: Local artists sang songs at Ganga Ghat in Varanasi earlier today, as they celebrated #Holi pic.twitter.com/hpzjWr5FpM
— ANI UP/Uttarakhand (@ANINewsUP) March 17, 2022
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಹೋಳಿ ಹಬ್ಬ ನಡೆಯುತ್ತಿದೆ. ಇಲ್ಲಿ ಚಿಕ್ಕ ಮಕ್ಕಲಿಂದ ಹಿಡಿದು ಹಿರಿಯರವರೆಗೆ ಹೋಳಿ ಆಡುತ್ತಾರೆ.
ಜೊತೆಗೆ ಮಥುರಾದ ಬರ್ಸಾನಾದ ಹೋಳಿ ಕೂಡ ಜನಪ್ರಿಯವಾಗಿದೆ. ಹೋಳಿ ಆಡುವಾಗ ದೇವಸ್ಥಾನದ ಅರ್ಚಕ ಶ್ರೀಜಿ ಅವರು, ಇವು ನಗು ಮತ್ತು ಸಂತೋಷದ ಬಣ್ಣಗಳು, ಶಾಂತಿ ಮತ್ತು ಸಮೃದ್ಧಿಗೆ ತನ್ನದೇ ಆದ ಬಣ್ಣಗಳಿವೆ ಎಂದು ಹೇಳಿತ್ತಾರೆ.

ಪುರೋಹಿತರು ಹೇಳುವ ಪ್ರಕಾರ ''ಕೆಂಪು ಪ್ರೀತಿಯ ಸಂಕೇತ, ಗುಲಾಬಿ ಸೌಂದರ್ಯದ ಸಂಕೇತ, ಹಳದಿ ಸಂತೋಷದ ಸಂಕೇತ, ಕೇಸರಿ ಸಮೃದ್ಧಿಯ ಸಂಕೇತ. ಶಾಂತಿ ಮತ್ತು ಸಹೋದರತ್ವದ ಬಣ್ಣ ಬಿಳಿಯಾಗಿದ್ದರೆ, ಪ್ರತಿಭಟನೆಯ ಬಣ್ಣವನ್ನು ಕಪ್ಪು ಎಂದು ಪರಿಗಣಿಸಲಾಗುತ್ತದೆ. ಇಂದು ಎಲ್ಲಾ ಬಣ್ಣಗಳು ಬಳಸಿ ಹೋಳಿ ಆಡಲಾಗುತ್ತದೆ. ಹೋಳಿ ಆಡುವಾಗ ಜನರು ತಮ್ಮ ಕಣ್ಣು ಮತ್ತು ಕಿವಿಗಳನ್ನು ರಕ್ಷಿಸಿಕೊಳ್ಳಬೇಕು ಮತ್ತು ಹಾನಿಕಾರಕ ಬಣ್ಣಗಳನ್ನು ಬಳಸಬಾರದು.












Click it and Unblock the Notifications