ನಕಲಿ ಖಾತೆ ವಿವಾದ: ತಪ್ಪಾಗಿ ವಿಡಿಯೋ ಎಡಿಟ್ ಮಾಡಲಾಗಿದೆ ಎಂದ ರಮ್ಯಾ

ಬೆಂಗಳೂರು, ಫೆಬ್ರವರಿ 7: ನಕಲಿ ಖಾತೆಗಳನ್ನು ತೆರಯುವಂತೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎನ್ನಲಾದ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಸಂಬಂಧ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

"ನನ್ನ ವಿಡಿಯೋವನ್ನು ಸನ್ನಿವೇಶವನ್ನು ಗಣನೆಗೆ ತೆಗೆದುಕೊಳ್ಳದೆ ಎಡಿಟ್ ಮಾಡಲಾಗಿದೆ," ಎಂದು ಅವರು ಟ್ಟಿಟ್ಟರ್ ನಲ್ಲಿ ದೂರಿದ್ದಾರೆ.

ಜತೆಗೆ, "ನಾನು ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬೋಟ್ಸ್, ನಕಲಿ ಖಾತೆಗಳು ಮತ್ತು ಹಲವು ಖಾತೆಗಳ ನಡುವೆ ಇರುವ ವ್ಯತ್ಯಾಸವನ್ನು ವಿವರಿಸುತ್ತಿದ್ದೆ," ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Video edited out of context: Ramya

"ಒಂದೊಮ್ಮೆ ನೀವು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ಬಯಸಿದಲ್ಲಿ ನಿಮ್ಮ ವೈಯಕ್ತಿಕ ಖಾತೆಗಳನ್ನು ಬಳಸಿ, ಅಧಿಕೃತ ಖಾತೆಗಳನ್ನು ಬಳಸದಿರಿ ಎಂದು ನಾನು ಹೇಳಿದ್ದೆ," ಎಂದು ಅವರು ವಿವರಣೆ ನೀಡಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಖಾತೆ ಮತ್ತು ವೆಬ್ಸೈಟ್ ಖಾತೆ ಹಾಗೂ ಪತ್ರಕರ್ತೆ ಭಾರ್ತಿ ಜೈನ್ ರ ವಿಭಿನ್ನ ಖಾತೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+