ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಸ್ಟ್ ಜಾಕೆಟ್ ಯಾರ ಬ್ರ್ಯಾಂಡ್? ಮೋದಿ ಅಥವಾ ನೆಹರೂ?: ಟ್ವಿಟ್ಟರ್‌ನಲ್ಲಿ ಚರ್ಚೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಪ್ರಧಾನಿ ನರೇಂದ್ರ ಮೋದಿ ಅವರ ದಿರಿಸು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ಅವರ ಉಡುಗೆ ಚರ್ಚೆಗೆ ವಸ್ತುವಾಗಿರುವುದು ಕೋಟ್ಯಂತರ ರೂ. ಬೆಲೆ ಬಾಳುವ ಕೋಟ್‌ ಕಾರಣಕ್ಕಾಗಿ ಅಲ್ಲ. ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ-ಇನ್ ಅವರು ಮಾಡಿ ಟ್ವೀಟ್ ಕಾರಣಕ್ಕಾಗಿ.

ಮೋದಿ ಅವರು ಪ್ರತಿನಿತ್ಯ ಧರಿಸುವ ವೆಸ್ಟ್ ಕೋಟ್, ಈಗ ಮೋದಿ ಕೋಟ್ ಎಂದೇ ಜನಪ್ರಿಯ. ಬಹುತೇಕ ಎಲ್ಲ ಬಗೆಯ ದಿರಿಸುಗಳಿಗೂ ಹೊಂದಾಣಿಕೆಯಾಗುವಂತಹ ಮೋದಿ ಕೋಟ್‌ಗೆ ಈಗ ಬೇಡಿಕೆ ಹೆಚ್ಚಿದೆ. ಜತೆಗೆ ಮೋದಿ ಅವರದೇ ಹೆಸರಿನ ಬ್ರ್ಯಾಂಡ್ ವೆಸ್ಟ್ ಕೋಟ್ ಕೂಡ ಮಾರುಕಟ್ಟೆಗೆ ಬಂದಿದೆ.

ಅದೇ ಕೋಟ್ ಈಗ ಮೋದಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಬೇಡಿಕೆಯಂತೆ ಕೋಟ್ ಕಳುಹಿಸಿದ್ದಕ್ಕಾಗಿ ಕೊರಿಯಾದ ಅಧ್ಯಕ್ಷ ಮೂನ್ ಜೆ-ಇನ್ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿ

ಆದರೆ, ಅವರ ಟ್ವೀಟ್‌ನಲ್ಲಿ ನಾಲ್ಕು ಬಣ್ಣಗಳಲ್ಲಿರುವ ಜಾಕೆಟ್‌ಗಳಲ್ಲಿ 'ಮೋದಿ ಜಾಕೆಟ್' ಎಂದು ದೊಡ್ಡಕ್ಷರಗಳಲ್ಲಿ ಬರೆದ ಲೇಬಲ್ ಇರುವುದು ಒಮರ್ ಅಬ್ದುಲ್ಲಾ ಸೇರಿದಂತೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಮೋದಿ ವೆಸ್ಟ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮನಮೋಹಕ ಉಡುಪುಗಳನ್ನು ಕಳುಹಿಸಿದ್ದಾರೆ. ಇವು ಸಾಂಪ್ರದಾಯಿಕ ಭಾರತದ ಆಧುನೀಕರಣಗೊಂಡ ಉಡುಪುಗಳು. ಮೋದಿ ವೆಸ್ಟ್ ಎಂದೇ ಹೆಸರಾಗಿವೆ. ಕೊರಿಯಾದಲ್ಲಿ ಇದನ್ನು ಆರಾಮವಾಗಿ ಧರಿಸಬಹುದು. ಅದು ದೇಹಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದು ಮೂನ್ ಟ್ವೀಟ್ ಮಾಡಿದ್ದರು.

ಮತದಾರರ ನಂಬಿಕೆ ಕಳೆದುಕೊಂಡಿದ್ದಾರೆ ಮೋದಿ: ಮನಮೋಹನ್ ಸಿಂಗ್ಮತದಾರರ ನಂಬಿಕೆ ಕಳೆದುಕೊಂಡಿದ್ದಾರೆ ಮೋದಿ: ಮನಮೋಹನ್ ಸಿಂಗ್

ಮೋದಿಗೆ ಧನ್ಯವಾದಗಳು

ನನ್ನ ಭಾರತ ಪ್ರವಾಸದ ವೇಳೆ ಮೋದಿ ಆ ವೆಸ್ಟ್‌ಗಳಲ್ಲಿ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದೆ. ನನ್ನ ದೇಹದ ಅಳತೆಗೆ ತಕ್ಕಂತೆ ಹೊಲಿಸಿ ಅವುಗಳನ್ನು ನನಗೆ ಕಳುಹಿಸಿದ್ದಾರೆ. ಅವರ ಈ ಗುಣಕ್ಕೆ ಅವರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಮೂನ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಮೋದಿ ಮನ್ ಕೀ ಬಾತ್ ನಲ್ಲಿ ಸರ್ದಾರ್ ಪಟೇಲ್, ಬಿಷ್ಣೋಯ್ ಸಮುದಾಯ ಉಲ್ಲೇಖಮೋದಿ ಮನ್ ಕೀ ಬಾತ್ ನಲ್ಲಿ ಸರ್ದಾರ್ ಪಟೇಲ್, ಬಿಷ್ಣೋಯ್ ಸಮುದಾಯ ಉಲ್ಲೇಖ

Array

2014ಕ್ಕೂ ಮುಂಚೆ ಇರಲೇ ಇಲ್ಲ!

ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಕಳುಹಿಸಿರುವುದು ನಿಜಕ್ಕೂ ಸಂತಸದ ಸಂಗತಿ. ಆದರೆ, ಅವುಗಳ ಹೆಸರನ್ನು ಬದಲಿಸದೆ ಕಳುಹಿಸಲು ಸಾಧ್ಯವಿರಲಿಲ್ಲವೇ? ನನ್ನ ಜೀವನದುದ್ದಕ್ಕೂ ನಾನು ಈ ಜಾಕೆಟ್‌ಗಳನ್ನು ನಹೆರೂ ಜಾಕೆಟ್ ಎಂದೇ ತಿಳಿದಿದ್ದೆ. ಈಗ ಇವುಗಳಿಗೆ ಮೋದಿ ಜಾಕೆಟ್ ಎಂಬ ಲೇಬಲ್ ಬಂದಿದೆ. 2014ಕ್ಕೂ ಮುನ್ನ ಇವು ಭಾರತದಲ್ಲಿ ಇರಲೇ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ.

ಪಟೇಲರ ಪ್ರತಿಮೆಯನ್ನು ವಿರೋಧಿಸುತ್ತಿರುವವರು ಯಾರು? ಅವರ ವಾದ ಏನು?ಪಟೇಲರ ಪ್ರತಿಮೆಯನ್ನು ವಿರೋಧಿಸುತ್ತಿರುವವರು ಯಾರು? ಅವರ ವಾದ ಏನು?

ಫ್ಯಾಷನ್ ಟಿಪ್ಸ್

ಜಾಗತಿಕ ನಾಯಕರುಗಳಿಗೆ ಫ್ಯಾಷನ್ ಟಿಪ್ಸ್! ಮೋದಿ ಜಾಕೆಟ್ ಎಂದು ಸಿನಿಮಾ ಬರಹಗಾರ್ತಿ ಅದ್ವೈತ ಕಾಲ ಅವರು ಮೋದಿ ಅವರ ಫ್ಯಾಷನ್ ಬಯಕೆಯ ಬಗ್ಗೆ ಲೇವಡಿ ಮಾಡಿದ್ದಾರೆ.

ಅದು ಮೋದಿ ವೆಸ್ಟ್ ಅಲ್ಲ

ಮಾನ್ಯ ಅಧ್ಯಕ್ಷರೇ, ನೀವು ತಪ್ಪು ತಿಳಿದಿದ್ದೀರಿ. ಅದು ಮೋದಿ ವೆಸ್ಟ್ ಅಲ್ಲ. ಅದು ನೆಹರೂ ಜಾಕೆಟ್. ಮೋದಿ ಅವರು ನೆಹರೂ ಅಲ್ಲ, ಹಾಗೆ ಆಗಲು ಸಾಧ್ಯವೂ ಇಲ್ಲ. ಮೋದಿ ಅವರದ್ದೇನಿದ್ದರೂ ಖಾಕಿ ಚಡ್ಡಿ ಎಂದು ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಅನೇಕರು ಎಲ್ಲವೂ ಕಾಂಗ್ರೆಸ್‌ ಮತ್ತು ನೆಹರೂ ಎಂದು ಹೇಳಿಕೊಳ್ಳುವ ಚಾಳಿ ಅವರ ಬೆಂಬಲಿಗರದ್ದು. ನೆಹರೂ ಧರಿಸುತ್ತಿದ್ದದ್ದು ಪೂರ್ಣ ತೋಳಿನ ಕೋಟ್. ವೆಸ್ಟ್ ಕೋಟ್ ಗುಜರಾತಿಗಳ ಸಾಂಪ್ರದಾಯಿಕ ಉಡುಗೆ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಂದು ಅವರ ಹೆಸರಿಗೆ

ಕಾಂಗ್ರೆಸ್ ಪರಂಪರೆಯ ಮತ್ತೊಂದು ಖ್ಯಾತಿಯನ್ನು ಅವರು ವಶಕ್ಕೆ ಪಡೆದುಕೊಂಡಿದ್ದಾರೆ. ಈಗ ನೆಹರೂ ಜಾಕೆಟ್, ಮೋದಿ ಜಾಕೆಟ್ ಎಂಬ ಹೆಸರು ಪಡೆದುಕೊಂಡಿದೆ ಎಂದು ಪತ್ರಕರ್ತ ಉಜೈರ್ ಹಸನ್ ರಿಜ್ವಿ ಟ್ವೀಟ್ ಮಾಡಿದ್ದಾರೆ.

English summary
A tweet from Korean President Moon Jae in's thanking Narendra Modi for sending Modi Vest has become hot debate in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X