ಹಿಗ್ಗುತ್ತಿದೆ ಭಾರತದ ತೋಳ್ಬಲ, ಉ.ಪ್ರದಲ್ಲಿ ಮಹಿಳೆಯರ ಮಿಂಚು

Posted By:
Subscribe to Oneindia Kannada

ಇಲ್ಲೊಂದು ಫೋಟೋ ಇದೆ. ಅದನ್ನು ನೋಡಿದಾಗ ಬೆಂಗಳೂರಿನಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸೇರಿದ್ದ ಕಡೆ ಆದ ಅಚಾತುರ್ಯ ನೆನಪಾಗುತ್ತದೆ. ಅಲ್ಲಿ ಹೆಣ್ಣುಮಕ್ಕಳ ಮೇಲೆ ಪುಂಡರ ಗುಂಪು ದೌರ್ಜನ್ಯ ಎಸಗಿದೆ. ಆದರೆ ಯಾರ ವಿರುದ್ಧವೂ ದೂರು ದಾಖಲಾಗಿಲ್ಲ. ಪೊಲೀಸರು ನೋಡೋಣ-ಮಾಡೋಣ 'ಮೋಡ್'ನಲ್ಲಿದ್ದಾರೆ.

ಉತ್ತರ ಪ್ರದೇಶದ ಜಬಲ್ ಪುರ್ ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರದೇ ತಂಡ ರಚಿಸಲಾಗಿದೆ. ಕೆಂಪು ಬೈಕ್ ನಲ್ಲಿ ಸುತ್ತಾಡುವ ಆ ಮಹಿಳಾ ಪೊಲೀಸರು ಹೆಣ್ಣುಮಕ್ಕಳ ಸುರಕ್ಷಾ ಕ್ರಮದ ನಿಗಾ ವಹಿಸುತ್ತಾರೆ. ಇನ್ನು ಬಾಹ್ಯಾಕಾಶದಲ್ಲಿ ಚಂದ್ರನಿಗೆ ಹತ್ತಿರದಲ್ಲಿ ಕಾಣಿಸಿಕೊಂಡ ಶುಕ್ರಗ್ರಹವನ್ನು ನೀವು ನೋಡಿರಲಿಲ್ಲ ಎಂದಾದರೆ ಇಲ್ಲಿ ಫೋಟೋ ಇದೆ. ನೋಡಿಬಿಡಿ.[ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ]

ಇನ್ನು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿ ಪ್ರಯೋಗದಲ್ಲಿ ಭಾರತ ಯಶಸ್ವಿಯಾಗಿದೆ. ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ದೂರಕ್ಕೆ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಅಗ್ನಿ-IV ಗೆ ಇದೆಯಂತೆ. ಭಾರತದ ತೋಳ್ಬಲದ ಇನ್ನೊಂದು ಸುತ್ತು ದೊಡ್ಡದಾದಂತೆ ಆಗಿದೆ. ಜಮ್ಮು-ಕಾಶ್ಮೀರದಲ್ಲಿ ಈಗ ಭರ್ಜರಿ ಚಳಿಗಾಲ. ಅದ್ಯಾವ ಪರಿ ಅಂತೀರಾ?

ದೇಶದ ನಾನಾ ಕಡೆಯ ವಿದ್ಯಮಾನಗಳನ್ನು ಫೋಟೋಗಳ ಮೂಲಕ ನಿಮ್ಮ ಮುಂದೆ ಇಡಲಾಗಿದೆ.

ಕೆಂಪು ಬೈಕ್ ನಲ್ಲಿ ಮಹಿಳಾ ಪೊಲೀಸರ ಕಾವಲು

ಕೆಂಪು ಬೈಕ್ ನಲ್ಲಿ ಮಹಿಳಾ ಪೊಲೀಸರ ಕಾವಲು

ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರದೇ ತಂಡವೊಂದನ್ನು ರಚಿಸಲಾಗಿದೆ. ಕೆಂಪು ಬೈಕ್ ನಲ್ಲಿ ಸಂಚರಿಸುವ ಅವರು ಅಲ್ಲಿನ ಮಹಿಳೆಯರ ಸುರಕ್ಷತೆಗೆ ಪಹರೆ ಕಾಯುತ್ತಾರೆ. ಸೋಮವಾರ ಹೀಗೆ ಪಹರೆ ಕಾಯುವ ವೇಳೆ ಆ ತಂಡ ಕಂಡುಬಂದಿದ್ದು ಹೀಗೆ.

ಬಾಹ್ಯಾಕಾಶದಲ್ಲಿ ಶುಕ್ರ ಹತ್ತಿರ ಬಂದಾಗ

ಬಾಹ್ಯಾಕಾಶದಲ್ಲಿ ಶುಕ್ರ ಹತ್ತಿರ ಬಂದಾಗ

ಇದು ಅಂತರಿಕ್ಷದಲ್ಲಿ ಕಂಡ ಅಚ್ಚರಿ. ಶುಕ್ರಗ್ರಹವು ಆಗಸದಲ್ಲಿ ಚಂದ್ರನಿಗೆ ತೀರಾ ಹತ್ತಿರದಲ್ಲಿ ಸೋಮವಾರ ಕಾಣಿಸಿಕೊಂಡಿತು. ದೆಹಲಿಯಲ್ಲಿ ಕಾಣಿಸಿಕೊಂಡ ವಿದ್ಯಮಾನವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಕ್ಷಿಪಣಿ ಪ್ರಯೋಗ ಯಶಸ್ವಿ

ಕ್ಷಿಪಣಿ ಪ್ರಯೋಗ ಯಶಸ್ವಿ

ನಾಲ್ಕು ಸಾವಿರ ಕಿಲೋಮೀಟರ್ ದೂರದವರೆಗೆ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿ ಅಗ್ನಿ-IV ಪರೀಕ್ಷೆಯು ಒಡಿಶಾ ಕಡಲ ತೀರದ ಬಾಲಸೋರ್ ನಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು. (ಸಂಗ್ರಹ ಚಿತ್ರ)

ಸೋಮ್ ದೇವ್ ಪತ್ರಿಕಾಗೋಷ್ಠಿ

ಸೋಮ್ ದೇವ್ ಪತ್ರಿಕಾಗೋಷ್ಠಿ

ಭಾರತದ ಟೆನಿಸ್ ಆಟಗಾರ ಸೋಮ್ ದೇವ್ ದೇವವರ್ಮನ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಅ ನಂತರ ಅಂದರೆ ನಿವೃತ್ತಿ ಘೋಷಿಸಿದ ಮರುದಿನ ಚೆನ್ನೈನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಗುರು ಗೋವಿಂದ್ ಜನ್ಮಜಯಂತಿಯಲ್ಲಿ ಕೇಜ್ರಿವಾಲ್

ಗುರು ಗೋವಿಂದ್ ಜನ್ಮಜಯಂತಿಯಲ್ಲಿ ಕೇಜ್ರಿವಾಲ್

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಹಾರದ ಪಾಟ್ನಾದಲ್ಲಿರುವ ಹರ್ಮಂದಿರ್ ಸಾಹಿಬ್ ನಲ್ಲಿ ಸೋಮವಾರ ನಡೆದ ಗುರು ಗೋವಿಂದ್ ಸಿಂಗ್ 350ನೇ ಜನ್ಮ ಜಯಂತಿಯಲ್ಲಿ ಭಾಗವಹಿಸಿದ್ದರು.

ಮಂಜುಗಡ್ಡೆಯೋ ಮಂಜುಗಡ್ಡೆ

ಮಂಜುಗಡ್ಡೆಯೋ ಮಂಜುಗಡ್ಡೆ

ಜಮ್ಮು ಕಾಶ್ಮೀರದ ವಿಪರೀತ ಮಂಜು ಬೀಳುತ್ತಿದೆ. ಅನಂತ್ ನಾಗ್ ಜಿಲ್ಲೆಯಲ್ಲಿ ಸೋಮವಾರ ದೊಡ್ಡ ಮಟ್ಟದ ಮಂಜುಗಡ್ಡೆಯನ್ನು ಏರಲು ಯತ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various important events occured in India on Monday represent through PTI photos.
Please Wait while comments are loading...