ವರಾಹ ರೂಪಂ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ: ವಿಜಯ್ ಕಿರಗಂದೂರು ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು!
ವರಾಹ ರೂಪಂ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ಪ್ರಕರಣದಲ್ಲಿ ವಿಜಯ್ ಕಿರಗಂದೂರು ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ವರಾಹ ರೂಪಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದಲ್ಲಿ ದಾಖಲಾಗಿರುವ ಕನ್ನಡ ಚಲನಚಿತ್ರ ಕಾಂತಾರ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
'ಕಾಂತಾರ' ಕನ್ನಡಿಗರ ಮನಗೆದ್ದ ಇತ್ತೀಚಿನ ಸೂಪಕ್ ಹಿಟ್ ಸಿನಿಮಾ. ಸಿನಿಮಾ ಜನಮನ ಗೆಲ್ಲುತ್ತಿದ್ದಂತೆ ಚಿತ್ರ 'ವರಾಹ ರೂಪಂ' ದೊಡ್ಡ ವಿವಾದಕ್ಕೆ ಸಿಲುಕಿತ್ತು. ಅನ್ಯ ಭಾಷೆಯ ಸಿನಿಮಾದಿಂದ ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ವರಾಹ ರೂಪಂ ಹಾಡು 5 ವರ್ಷಗಳ ಹಿಂದೆ ಬಿಡುಗಡೆಯಾದ ನವರಸಂ ಎಂಬ ಇನ್ನೊಂದು ಹಾಡಿನ ಹಕ್ಕುಸ್ವಾಮ್ಯವನ್ನು ಹೊಂದಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಹಾಡನ್ನು ಪ್ರಸಾರ ಮಾಡದಂತೆ ಆದೇಶಿಸಲಾಗಿತ್ತು. ಜೊತೆಗೆ ಚಿತ್ರ ತಂಡದ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು.
ಇದೀಗ ವರಾಹ ರೂಪಂ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಕಾಂತಾರ ನಿರ್ದೇಶಕ, ನಿರ್ಮಾಪಕರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈಗ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಕೇರಳ ಹೈಕೋರ್ಟ್ ಹೇಳಿದ್ದೇನು?
ಕೇರಳ ಹೈಕೋರ್ಟ್ ನ ನ್ಯಾಯಮೂರ್ತಿ ಎ ಬದರುದ್ದೀನ್ ಅವರು "'ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್‌ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ 'ವರಾಹ ರೂಪಂ' ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ' ಎಂದು ಬದ್ರುದೀನ್ ಹೇಳಿದ್ದಾರೆ.
ತೈಕುಡಂ ಬ್ರಿಡ್ಜ್‌ನವರು ಕೋಯಿಕ್ಕೋಡ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. 'ವರಾಹ ರೂಪಂ' ಹಾಡಿನಲ್ಲಿ ಬಳೆ ಆದ ಟ್ಯೂನ್ 'ನವರಸಂ' ಹಾಡಿನದ್ದು ಎನ್ನುವ ಆರೋಪ ಮಾಡಲಾಗಿತ್ತು. ಈ ಪ್ರಕರಣದ ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಆಗುತ್ತಿದೆ. ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳ ಕುರಿತು ತ್ವರಿತ ನಿರ್ಧಾರವನ್ನು ಪಡೆಯಲು ಅವರು ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು ಎಂದು ನ್ಯಾಯಾಲಯದ ಆದೇಶವು ಸ್ಪಷ್ಟಪಡಿಸಿದೆ.
ಕಾಂತಾರ ಸಿನಿಮಾ ತಂಡದ ವಾದವೇನು?
ಕಾಂತಾರ ಸಿನಿಮಾ ತಂಡದ ಪರ ವಕೀಲರು ವರಾಹ ರೂಪವು ಸ್ವತಂತ್ರ ಸೃಷ್ಟಿಯಾಗಿದ್ದು ನವರಸಂಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿ ನಿರೀಕ್ಷಣಾ ಜಾಮೀನು ಕೋರಿದರು. ವರಾಹ ರೂಪಂ ಹಾಡು ನವರಸಂ ಹಾಡನ್ನು ಹೋಲುತ್ತದೆ ಅಥವಾ ಮೋಸಗೊಳಿಸುವಂತಿದೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳು ಸಂಗ್ರಹಿಸಿಲ್ಲ. ಬದಲಾಗಿ, ಪ್ರಾಸಿಕ್ಯೂಷನ್ ಚಲನಚಿತ್ರವನ್ನು ವೀಕ್ಷಿಸಿದ ಮತ್ತು ಕೆಲವು ಸಾಮ್ಯತೆಗಳನ್ನು ನೋಡಿದವರ ಅಭಿಪ್ರಾಯವನ್ನು ಅವಲಂಬಿಸಿದೆ ಎಂದು ವಕೀಲರು ವಾದಿಸಿದರು. ಆದರೆ ತನಿಖಾಧಿಕಾರಿಗಳು ಸಂಗ್ರಹಿಸಿದ ಅಭಿಪ್ರಾಯವನ್ನು ಪರಿಶೀಲಿಸಿದಾಗ, ಎರಡು ಹಾಡುಗಳ ನಡುವೆ ಒಂದೇ ರೀತಿಯ ಹೋಲಿಕೆಯನ್ನು ಸೂಚಿಸಲಾಗಿದೆ.












Click it and Unblock the Notifications